ಮುಖ್ಯಮಂತ್ರಿ ಯಡಿಯೂರಪ್ಪನವರನ್ನು ಭೇಟಿಯಾದ ಎಚ್​.ವಿಶ್ವನಾಥ್​, ಎಂಟಿಬಿ ನಾಗರಾಜ್​; ಮುಂದುವರಿದಿಯಾ ಮಂತ್ರಿ ಸ್ಥಾನಕ್ಕೆ ಕಸರತ್ತು...?

MTB And Vishwanath 3 Jan 20
Published on

ಬೆಂಗಳೂರು: ರಾಜ್ಯಸರ್ಕಾರ ಇನ್ನೂ ಸಚಿವ ಸಂಪುಟ ವಿಸ್ತರಣೆ ಮಾಡಿಲ್ಲ. ಉಪಚುನಾವಣೆಯಲ್ಲಿ ಗೆದ್ದ ಶಾಸಕರಿಗೆ ಇನ್ನೂ ಯಾರಿಗೂ ಮಂತ್ರಿ ಸ್ಥಾನ ನೀಡಿಲ್ಲ.

ಹೀಗಿರುವಾಗ ಬೈ ಎಲೆಕ್ಷನ್​ನಲ್ಲಿ ಸೋತ ಎಚ್​.ವಿಶ್ವನಾಥ್​ ಹಾಗೂ ಎಂಟಿಬಿ ನಾಗರಾಜ್​ ಅವರು ಇಂದು ಮುಖ್ಯಮಂತ್ರಿ ಯಡಿಯೂರಪ್ಪನವರನ್ನು ಭೇಟಿಯಾಗಿ ಮಾತುಕತೆ ನಡೆಸಿದ್ದಾರೆ.

ಮೊದಲು ಎಚ್​.ವಿಶ್ವನಾಥ್​ ಅವರು ಬಿ.ಎಸ್​.ಯಡಿಯೂರಪ್ಪನವರನ್ನು ಭೇಟಿಯಾಗಿ ತಮಗೂ ಸೂಕ್ತ ಸ್ಥಾನಮಾನ ನೀಡಲು ಒತ್ತಾಯಿಸಿದ್ದಾರೆ ಎನ್ನಲಾಗಿದೆ. ಜತೆಗೆ ತಮ್ಮ ಹುಣಸೂರು ಕ್ಷೇತ್ರದ ಬಗ್ಗೆಯೂ ಚರ್ಚೆ ನಡೆಸಿದ್ದಾರೆ.

ಬಳಿಕ ಸಿಎಂ ನಿವಾಸಕ್ಕೆ ಆಗಮಿಸಿದ ಎಂ.ಟಿ.ಬಿ.ನಾಗರಾಜ್​ ಕೂಡ ಬಿಎಸ್​ವೈ ಜತೆ ಹಲವು ವಿಚಾರಗಳನ್ನು ಚರ್ಚಿಸಿದ್ದಾರೆ.

ಮೈತ್ರಿ ಸರ್ಕಾರದ ವಿರುದ್ಧ ಅಸಮಾಧಾನಗೊಂಡು ಹೋಗಿದ್ದವರೆಲ್ಲಿ ಎಚ್​.ವಿಶ್ವನಾಥ್​ ಹಾಗೂ ಎಂಟಿಬಿ ನಾಗರಾಜ್​ ಹೊರತುಪಡಿಸಿ ಉಳಿದವರೆಲ್ಲ ಉಪಚುನಾವಣೆಯಲ್ಲಿ ಬಿಜೆಪಿಯಿಂದ ಸ್ಪರ್ಧಿಸಿ ಗೆದ್ದಿದ್ದಾರೆ. (ದಿಗ್ವಿಜಯ ನ್ಯೂಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net