ಬಸವರಾಜು ಅವಿರೋಧ ಆಯ್ಕೆ

Oplus_131072
ನಂಜನಗೂಡು ತಾಲೂಕು ಹಲ್ಲರೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷರಾಗಿ ಎಚ್.ಎನ್. ಬಸವರಾಜು ಅವಿರೋಧವಾಗಿ ಆಯ್ಕೆಯಾದರು. ಪುಟ್ಟ ದೇವಯ್ಯ, ಶಿವಮೂರ್ತಿ, ಶಿವಣ್ಣ, ಬಸವಣ್ಣ, ರಾಜಪ್ಪ, ಭಾಗ್ಯಾ, ಚಿನ್ನಮ್ಮ ಇತರರು ಇದ್ದರು.
Published on

ನಂಜನಗೂಡು: ತಾಲೂಕಿನ ಹಲ್ಲರೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷರಾಗಿ ಎಚ್.ಎನ್.ಬಸವರಾಜು ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

ಹಿಂದಿನ ಅಧ್ಯಕ್ಷ ಎಚ್.ಸಿ.ಶಿವ ಬುದ್ಧಿ ರಾಜೀನಾಮೆಯಿಂದ ತೆರವಾಗಿದ್ದ ಸ್ಥಾನಕ್ಕೆ ಸಂಘದ ಆವರಣದಲ್ಲಿ ಶನಿವಾರ ನಡೆದ ಚುನಾವಣೆಯಲ್ಲಿ ಯಾರೂ ನಾಮಪತ್ರ ಸಲ್ಲಿಸದ ಹಿನ್ನೆಲೆಯಲ್ಲಿ ಎಚ್.ಎನ್. ಬಸವರಾಜು ಅವಿರೋಧವಾಗಿ ಆಯ್ಕೆಯಾದರು. ಚುನಾವಣೆ ಅಧಿಕಾರಿಯಾಗಿ ಸಹಕಾರ ಇಲಾಖೆ ಅಧಿಕಾರಿ ಅವಿನಾಶ್ ಕಾರ್ಯ ನಿರ್ವಹಿಸಿದರು.

ನೂತನ ಅಧ್ಯಕ್ಷ ಎಚ್.ಎನ್. ಬಸವರಾಜು ಮಾತನಾಡಿ, ಹಲ್ಲರೆ ಹಾಗೂ ಸುತ್ತಮುತ್ತಲಿನ ಪ್ರಾಪ್ತಿಯ ಗ್ರಾಮಸ್ಥರು ಹಾಗೂ ರೈತರು ಜವಾಬ್ದಾರಿಯುತ ಸ್ಥಾನ ನೀಡಿದ್ದಾರೆ. ಸಂಘದ ಅಭಿವೃದ್ಧಿಗಾಗಿ, ಪ್ರಾಮಾಣಿಕವಾಗಿ ಕೆಲಸ ನಿರ್ವಹಿಸುತ್ತೇನೆ. ಪ್ರತ್ಯಕ್ಷವಾಗಿ ಹಾಗೂ ಪರೋಕ್ಷವಾಗಿ ಸಹಕರಿಸಿದ ಎಲ್ಲರಿಗೂ ಅಭಿನಂದನೆ ಸಲ್ಲಿಸಿದರು

ಹುಲ್ಲಹಳ್ಳಿ ಬಸವರಾಜು, ಉಪಾಧ್ಯಕ್ಷ ಪುಟ್ಟ ದೇವಯ್ಯ, ನಿರ್ದೇಶಕರಾದ ಶಿವಮೂರ್ತಿ, ಶಿವಣ್ಣ, ಬಸವಣ್ಣ, ರಾಜಪ್ಪ, ಭಾಗ್ಯಾ, ಚಿನ್ನಮ್ಮ, ಸೈಫ್ ಉಲ್ಲಾ, ಮಹದೇವಸ್ವಾಮಿ, ಶಿವಣ್ಣ ನಾಯಕ, ಎಚ್.ಎಂ.ಸ್ವಾಮಿ, ಕಾಂಗ್ರೆಸ್ ಮುಖಂಡರಾದ ಸೋಮಣ್ಣ, ಬಸವಣ್ಣ, ಶಿವಮಲ್ಲಪ್ಪ, ಮುದ್ದು ಮಲ್ಲಪ್ಪ, ರವಿ, ಗಿರೀಶ್, ರಮೇಶ್, ಎಚ್.ಆರ್. ರವಿ, ನಾಗೇಂದ್ರ, ಸ್ವಾಮಿ, ಕುಮಾರ, ಸಿಬ್ಬಂದಿ ಶಿವಕುಮಾರ್, ಮಹದೇವಸ್ವಾಮಿ, ರಮೇಶ್ ಸೇರಿದಂತೆ ಸುತ್ತಲಿನ ಗ್ರಾಮಸ್ಥರು, ಮುಖಂಡರು ಹಾಜರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net