ಜೀವನದ ‘ಗುರುತ್ವಾರ್ಕಷಣೆ’: ಕೊಳ್ಳೇಗಾಲ, ಚಾಮರಾಜನಗರ ಭಾಗದಲ್ಲಿ ನಡೆಯುವ ಕಥೆಗೆ ಮಹೇಂದರ್ ನಿರ್ದೇಶನ

ಗುರುತ್ವಾಕರ್ಷಣೆ ಚಿತ್ರದ ದೃಶ್ಯ
ಗುರುತ್ವಾಕರ್ಷಣೆ ಚಿತ್ರದ ದೃಶ್ಯ
Published on

ಪ್ರಮುಖ ಮುಖ್ಯಾಂಶಗಳು

  • ಜೀವನದ ಸತ್ಯಗಳನ್ನು ಹೇಳುವ ಗುರುತ್ವಾಕರ್ಷಣೆ
  • ಶೂಟಿಂಗ್ ಪೂರ್ಣಗೊಂಡಿದ್ದು, ರಿಲೀಸ್ ಗೆ ಸಿದ್ಧ
  • ಜಯಂತ್ ದೊರೆ, ಸುಕೃತಿ ಪ್ರಮುಖ ಪಾತ್ರದಲ್ಲಿ ನಟನೆ
ಬೆಂಗಳೂರು: ಕೆಲ ಕಿರುಚಿತ್ರಗಳಿಗೆ ಆ್ಯಕ್ಷನ್-ಕಟ್ ಹೇಳಿದ್ದ ಮಹೇಂದರ್ ಸಿ. ಗುಂಡೇಗಾಲ ‘ಗುರುತ್ವಾಕರ್ಷಣೆ’ ಮೂಲಕ ಪೂರ್ಣಪ್ರಮಾಣದ ನಿರ್ದೇಶಕರಾಗುತ್ತಿದ್ದಾರೆ. ಈ ಚಿತ್ರಕ್ಕೆ ಚಿತ್ರಕಥೆ, ಸಂಭಾಷಣೆ ಕೂಡ ಅವರೇ ಬರೆದಿದ್ದಾರೆ. ಸಿನಿಮಾದ ಟೈಟಲ್ ಕೇಳಿದ ತಕ್ಷಣ ಇದೊಂದು ಸೈನ್ಸ್ ಜಾನರ್ ಸಿನಿಮಾ ಅಂತನ್ನಿಸುವುದುಂಟು. ಆದರೆ, ಇದು ಗುರುತ್ವಾಕರ್ಷಣೆ ಸಿದ್ಧಾಂತವನ್ನು ಜೀವನದಲ್ಲಿ ಅಳವಡಿಸಿಕೊಂಡಾಗ ಮುಂದೆ ಏನಾಗುತ್ತದೆ? ಎಂಬುದರ ಕುರಿತ ಸಿನಿಮಾ. ಕೊಳ್ಳೇಗಾಲ, ಚಾಮರಾಜನಗರ ಸುತ್ತಮುತ್ತ ನಡೆಯುವ ಈ ಕಥೆಯಲ್ಲಿ ಹಳೇ ಮೈಸೂರು ಸೊಗಡು ಇರಲಿದೆ. ಈಗಾಗಲೇ ಶೂಟಿಂಗ್ ಪೂರ್ಣಗೊಂಡಿದ್ದು, ಸದ್ಯ ಬಿಡುಗಡೆಗೆ ಸಿದ್ಧವಾಗಿದೆ. ಈಗಾಗಲೇ ಎರಡು ಹಾಡುಗಳು, ಟೀಸರ್ ರಿಲೀಸ್ ಮಾಡಲಾಗಿದ್ದು ಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆ ದೊರೆತಿದೆ. ‘ನನ್ನ ತಾಯಿಗೆ ನಾನು ನಿರ್ದೇಶಕನಾಗಬೇಕೆಂಬ ಆಸೆ ಇತ್ತು. ಹಾಗಾಗಿ, ತಾಯಿಯ ಆಸೆಯಂತೆ ಸತತ ಒಂದೂವರೆ ವರ್ಷ ಕೆಲಸ ಮಾಡಿ, ಈ ಚಿತ್ರಕಥೆ ಸಿದ್ಧಪಡಿಸಿಕೊಂಡೆ. ಬಳಿಕ ಕೊಳ್ಳೇಗಾಲ, ಮೈಸೂರಿನ ಪ್ರತಿಭೆಗಳನ್ನು ಒಗ್ಗೂಡಿಸಿಕೊಂಡು ಈ ಸಿನಿಮಾ ಮಾಡಿದೆ’ ಎಂದು ಮಹೇಂದರ್ ಮಾಹಿತಿ ಹಂಚಿಕೊಳ್ಳುತ್ತಾರೆ. ‘ಗುರುತ್ವಾಕರ್ಷಣೆ’ಗೆ ಜಯಂತ್ ದೊರೆ ನಾಯಕನಾಗಿದ್ದು, ಅವರಿಗೆ ಸುಕೃತಿ ನಾಯಕಿಯಾಗಿದ್ದಾರೆ. ಪ್ರಭಾಕರ್, ದಿವ್ಯ ಕುಮಾರ್ ಸತ್ತೇಗಾಲ, ಮಂಡ್ಯ ಸಿದ್ದು, ವಿಜಯ್ ಕಿರಣ್, ಮಾ. ಶೌರ್ಯ ಮತ್ತು ಡಾ. ಭಾನುಪ್ರಕಾಶ್ ಕಲಾಬಳಗದಲ್ಲಿದ್ದಾರೆ. ಪವಿತ್ರನ್- ವ್ನಿೇಶ್ ವಿಕ್ಕಿ ಛಾಯಾಗ್ರಹಣ, ರಕ್ಷಿತ್ ರಾಜ್ ಸಂಕಲನ ಚಿತ್ರಕ್ಕಿದೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net