ಎಗ್ ಕರಿ ಮಾಡಲು ನಿರಾಕರಿಸಿದ್ದಕ್ಕೆ ಸುತ್ತಿಗೆಯಲ್ಲಿ ಹೊಡೆದು ಕೊಲೆ; ಆರೋಪಿ ಅರೆಸ್ಟ್​

egg curry
Published on

ಗುರುಗ್ರಾಮ್‌: ಎಗ್ ಕರಿ ಮಾಡಿ ಕೊಡದೆ ಇದ್ದದಕ್ಕೆ ಲಿವ್ ಇನ್ ಪಾರ್ಟನರ್ ಮಹಿಳೆಯನ್ನ ಹತ್ಯೆ ಮಾಡಿರೋ ಘಟನೆ ಹರಿಯಾಣದಲ್ಲಿ ನಡೆದಿದೆ.

ಅಂಜಲಿ(32) ಮೃತ ಮಹಿಳೆ. 35 ವರ್ಷದ ಲಲ್ಲನ್ ಯಾದವ್ ಕೊಲೆ ಮಾಡಿರುವ ಆರೋಪಿ. ಚೌಮಾ ಗ್ರಾಮದ ನಿರ್ಮಾಣ ಹಂತದ ಕಟ್ಟಡದಲ್ಲಿ ಮಹಿಳೆಯ ಶವವೊಂದು ಪತ್ತೆಯಾಗಿದ್ದು, ಪೊಲೀಸರು ತನಿಖೆ ನಡೆಸಿದಾಗ ಅಸಲಿ ಸತ್ಯ ಬಯಲಾಗಿದೆ.

ನಡೆದಿದ್ದೇನು?: ಲಲ್ಲಾನ್ ಯಾದವ್ಗೆ 6 ವರ್ಷದ ಹಿಂದೆ ಹೆಂಡತಿಗೆ ಹಾವು ಕಚ್ಚಿ ಸತ್ತು ಹೋಗಿದ್ದಳು. 7 ತಿಂಗಳ ಹಿಂದೆ ಅಂಜಲಿ ಎಂಬಾಕೆ ಜೊತೆ ಸಂಬಂಧದಲ್ಲಿದ್ದನು. ಲಲ್ಲನ್ , ಅಂಜಲಿ ಜೊತೆ ಲಿವ್ ಇನ್ ರಿಲೇಷನ್‌ಶಿಪ್​​ನಲ್ಲಿದ್ದನು. ಎಗ್‌ ಕರಿ ಮಾಡಿಕೊಡಲು ಕೇಳಿದ್ದಾನೆ.

ಅಂಜಲಿ ಎಗ್‌ ಕರಿ ಮಾಡಿಕೊಡಲು ನಿರಾಕರಿಸಿದ್ದಾಳೆ. ಆಗ ಸಿಟ್ಟಾದ ಲಲ್ಲನ್​ ಹಾಗೂ ಅಂಜಲಿ ನಡುವೆ ಗಲಾಟೆ ನಡೆದಿದೆ. ಮದ್ಯಪಾನದ ಅಮಲಿನಲ್ಲಿದ್ದ ಲಲ್ಲನ್​, ಕುಡಿತ ಮತ್ತಿನಲ್ಲಿ ಬೆಲ್ಟ್ ಮತ್ತು ಸುತ್ತಿಗೆಯಲ್ಲಿ ಕೊಲೆ ಮಾಡಿದ್ದಾನೆ.

ಕೊಲೆ ಪ್ರಕರಣ ದಾಖಲಿಸಿಕೊಂಡ ಗುರುಗ್ರಾಮ್ ಪೊಲೀಸರು ಆರೋಪಿಯನ್ನ ಬಂಧಿಸಿದ್ದಾರೆ. ಪೊಲೀಸರ ವಿಚಾರಣೆಯಲ್ಲಿ ಲಲ್ಲನ್ ಯಾದವ್ ಕೊಲೆಗೆ ಕಾರಣ ಏನು ಅನ್ನೋದನ್ನ ಬಾಯ್ಬಿಟ್ಟಿದ್ದಾನೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net