ಗುರುದ್ವಾರ ದಾಳಿ ಸಂಚುಕೋರನ ಸೆರೆ

Gurudwara
Published on

ಕಾಬೂಲ್: ಮಾ. 25ರಂದು ಅಫ್ಘಾನಿಸ್ತಾನ ರಾಜಧಾನಿ ಕಾಬೂಲ್​ನ ಗುರುದ್ವಾರದ ಮೇಲೆ ನಡೆದ ದಾಳಿ ಸಂಚು ರೂಪಿಸಿದ್ದ ವ್ಯಕ್ತಿಯನ್ನು ಅಲ್ಲಿನ ಭದ್ರತಾ ಪಡೆ ಶನಿವಾರ ವಿಶೇಷ ಕಾರ್ಯಾಚರಣೆಯಲ್ಲಿ ಬಂಧಿಸಿದೆ. ಆತನನ್ನು ಇಸ್ಲಾಮಿಕ್ ಸ್ಟೇಟ್ ಖೊರಾಸಾನ್ ಪ್ರಾಂತ್ಯದ (ಐಎಸ್​ಕೆಪಿ) ತಥಾಕಥಿತ ಮುಖ್ಯಸ್ಥ ಅಬ್ದುಲ್ಲಾ ಯಾನೆ ಅಸ್ಲಾಂ ಫಾರೂಕಿ ಎಂದು ಗುರುತಿಸಲಾಗಿದೆ.

ಪಾಕಿಸ್ತಾನಿ ಪ್ರಜೆಯಾದ ಅಬ್ದುಲ್ಲಾ, ಈ ಹಿಂದೆ ನಿಷೇಧಿತ ಲಷ್ಕರ್ (ಎಲ್​ಇಟಿ) ಹಾಗೂ ತೆಹ್ರಿಕ್ ಎ ತಾಲಿಬಾನ್ ಭಯೋತ್ಪಾದಕ ಸಂಘಟನೆಗಳೊಂದಿಗೆ ಸಂಪರ್ಕ ಹೊಂದಿದ್ದ. ಹಕ್ಕಾನಿ ನೆಟ್​ವರ್ಕ್​ನ ಸೂಚನೆ ಮೇರೆಗೆ ಫಾರೂಕಿ, ಕೇರಳದ ಕಾಸರಗೋಡು ನಿವಾಸಿ ಮೊಹ್ಸಿನ್ ಹಾಗೂ ಇತರ ಮೂವರು ಗುರುದ್ವಾರದ ಮೇಲೆ ದಾಳಿ ನಡೆಸಿದ್ದರು.

ಈ ದಾಳಿಯಲ್ಲಿ 27 ಜನರು ಮೃತಪಟ್ಟಿದ್ದರು. ಮೊಹ್ಸಿನ್ ಕೂಡ ಈ ದಾಳಿಯಲ್ಲಿ ಮೃತನಾಗಿದ್ದ. ಕಾಬೂಲ್​ನ ಭಾರತೀಯ ರಾಯಭಾರ ಕಚೇರಿ ಟಾರ್ಗೆಟ್ ಆಗಿತ್ತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net