ಗುರುಬಲ ಇಲ್ಲದ ಭವನ : ಅಡಿಪಾಯಕ್ಕಷ್ಟೇ ಸೀಮಿತ 15 ವರ್ಷಗಳ ಹಿಂದೆ ಭೂಮಿಪೂಜೆ

1
Published on

ಚನ್ನಪಟ್ಟಣ : ತಾಲೂಕಿನ ಶಿಕ್ಷಕರ ಅನುಕೂಲಕ್ಕಾಗಿ ಹಲವು ವರ್ಷಗಳ ಹಿಂದೆ ಆರಂಭವಾದ ಉದ್ದೇಶಿತ ಗುರುಭವನ ನಿರ್ವಾಣಕ್ಕೆ ಗುರುಬಲವೇ ಇಲ್ಲದಂತಾಗಿದೆ.

ನಗರದ ಜಿಕೆಎಂಪಿಎಸ್ ಶಾಲಾ ಆವರಣದಲ್ಲಿ ಸುಸಜ್ಜಿತ ಗುರುಭವನ ನಿರ್ವಾಣಕ್ಕೆ 15 ವರ್ಷಗಳ ಹಿಂದೆ ಅಂದಿನ ಶಾಸಕ ಸಿ.ಪಿ.ಯೋಗೇಶ್ವರ್ ಭೂಮಿಪೂಜೆ ನೇರವೇರಿಸಿದ್ದರು. ಗುರುಭವನದ ಬದಲಿಗೆ ಶೈಕ್ಷಣಿಕ ಹಾಗೂ ಸಾಂಸ್ಕೃತಿಕ ಭವನ ಎಂಬ ಹೆಸರಿನಲ್ಲಿ ಭವ್ಯ ಭವನ ನಿರ್ವಾಣಕ್ಕೆ ಯೋಜನೆ ರೂಪಿಸಿ, ನೀಲಿನಕ್ಷೆ ಸಿದ್ಧಪಡಿಸಲಾಗಿತ್ತು. ಆದರೆ, ಗುರು ಭವನ ಯಾವುದೇ ಬಲ ಸಿಗದೆ ನನೆಗುದಿಗೆ ಬಿದ್ದಿದೆ.

ಹಳೆಯ ಭವನಕ್ಕೂ ಇಲ್ಲ ಕಾಯಕಲ್ಪ: ಸುವಾರು 40 ವರ್ಷಗಳ ಹಿಂದೆ ಇದೇ ಜಾಗದಲ್ಲಿ ಗುರುಭವನ ನಿರ್ವಾಣವಾಗಿತ್ತು. ತಾಲೂಕಿನ ಶಿಕ್ಷಕರು ಹಣ ನೀಡಿ ಈ ಭವನಕ್ಕೆ ಬೇಕಾದ ಸೌಲಭ್ಯ ವಾಡಿಕೊಂಡಿದ್ದರು. ಈ ಭವನ ಕೇವಲ ಇಲಾಖೆಯ ಕಾರ್ಯಕ್ರಮಕಷ್ಟೇ ಸೀಮಿತವಾಗದೆ, ಭವನದಲ್ಲಿ ಮದುವೆ ಸವಾರಂಭಗಳು ನಡೆದಿರುವ ಉದಾಹರಣೆಗಳೂ ಇವೆ. ಜಿಲ್ಲೆಯ ಉತ್ತಮ ಗುರುಭವನ ಎಂಬ ಹೆಗ್ಗಳಿಕೆಗೂ ಭಾಜನವಾಗಿತ್ತು. ಆದರೆ, ಕಾಲಕ್ರಮೇಣ ನಿರ್ವಹಣೆ ಇಲ್ಲದೆ ಹಾಗೂ ಕಿಡಿಗೇಡಿಗಳ ಹುಚ್ಚಾಟದಿಂದಾಗಿ ಭವನ ಕಳೆ ಕಳೆದುಕೊಂಡಿತ್ತು. ಇದಕ್ಕೆ ಪರ್ಯಾಯವಾಗಿ ಆರಂಭಗೊಂಡಿದ್ದೇ ಶೈಕ್ಷಣಿಕ ಹಾಗೂ ಸಾಂಸ್ಕೃತಿಕ ಭವನ.

ಹಾಳು ಕೊಂಪೆಯಾದ ಭವನ: ಹಳೆಯ ಭವನ ಶಿಥಿಲಾವಸ್ಥೆ ತಲುಪಿದ ಹಿನ್ನೆಲೆಯಲ್ಲಿ ಆರಂಭಗೊಂಡ ನೂತನ ಭವನ ಕೇವಲ ಅಡಿಪಾಯಕ್ಕೆ ಸೀಮಿತವಾಗಿದೆ. ಈ ಜಾಗದಲ್ಲಿ ಗಿಡ-ಗಂಟಿಗಳು ಬೆಳೆದು ಕ್ರಿಮಿಕೀಟಗಳ ವಾಸಸ್ಥಾನವಾಗಿದೆ. ಭವನಕ್ಕೆ ಬಿಡುಗಡೆಯಾದ ಹಣ, ಆದ ಖರ್ಚು, ನನೆಗುದಿಗೆ ಬೀಳಲು ಕಾರಣ ಏನು ಎಂಬುದೇ ಯಾರಿಗೂ ತಿಳಿಯದಾಗಿದೆ. ಗುರುಭವನ ನಿರ್ವಹಣಾ ಸಮಿತಿಯೂ ಈ ಬಗ್ಗೆ ಹೆಚ್ಚಿನ ತಲೆಕೆಡಿಸಿಕೊಂಡಿಲ್ಲ ಎನ್ನಲಾಗಿದೆ.

ಶಿಕ್ಷಕರ ಪ್ರತಿನಿಧಿ ಗಮನಹರಿಸಬೇಕಿದೆ :  ತಾಲೂಕಿನ ಶಿಕ್ಷಕ ವೃಂದಕ್ಕೆ ಯಾವುದೇ ಕಾರ್ಯಕ್ರಮ ನಡೆಸಲು ಸೂಕ್ತ ಸ್ಥಳವಿಲ್ಲದೆ ಸಾಕಷ್ಟು ಸಮಸ್ಯೆಯಾಗುತ್ತಿದೆ. ಪ್ರತಿವರ್ಷ ಆಚರಿಸುವ ಶಿಕ್ಷಕರ ದಿನಾಚರಣೆಯನ್ನು ಖಾಸಗಿ ಕಲ್ಯಾಣ ಮಂಟಪ ಸೇರಿ ಇತರ ಸ್ಥಳದಲ್ಲಿ ನಡೆಸಬೇಕಾಗಿದೆ.

ಪ್ರತಿವರ್ಷ ಶಿಕ್ಷಕರ ದಿನಾಚರಣೆ ಸಂದರ್ಭದಲ್ಲಿ ಮುಂದಿನ ವರ್ಷ ಭವನ ಪೂರ್ಣಗೊಳಿಸಲಾಗುವುದು ಎಂಬ ಭರವಸೆಯ ಭಾಷಣ ವಾಮೂಲಿಯಾಗಿದೆ. ತಾಲೂಕಿನ ಗುರುವರ್ಯರಿಗೆ ಗೌರವ ಸಲ್ಲಿಸುವ ಇರಾದೆ ಇದ್ದರೆ, ತಕ್ಷಣ ಈ ಭವನದ ಕಾಮಗಾರಿಗೆ ಸಂಬಂಧಪಟ್ಟವರು ಆಸ್ಥೆ ವಹಿಸಬೇಕಿದೆ. ಕ್ಷೇತ್ರವನ್ನು ಪ್ರತಿನಿಧಿಸುವ ವಾಜಿ ಸಿಎಂ ಎಚ್.ಡಿ. ಕುವಾರಸ್ವಾಮಿ ಅದಕ್ಕಿಂತ ಹೆಚ್ಚಾಗಿ ಶಿಕ್ಷಕರ ಕ್ಷೇತ್ರದಿಂದ ಸತತವಾಗಿ ಮೇಲ್ಮನೆಗೆ ಆಯ್ಕೆಯಾಗುತ್ತಿರುವ ಪುಟ್ಟಣ್ಣ ಈ ಬಗ್ಗೆ ಗಂಭೀರವಾಗಿ ಚಿಂತಿಸಬೇಕಿದೆ.

ಶಿಕ್ಷಕರು ಹಾಗೂ ಇಲಾಖೆಯ ಕಾರ್ಯಕ್ರಮ ಹಾಗೂ ಸಭೆಗಳನ್ನು ನಡೆಸಲು ಒಂದು ಭವನ ಇಲ್ಲದಿರುವುದು ನಮ್ಮ ದುರಂತ. ಶಿಕ್ಷಕ ದಿನಾಚರಣೆಯಂತಹ ಸಂಭ್ರಮದ ಹಬ್ಬವನ್ನೂ ಇನ್ನಿತರ ಕಡೆ ಆಯೋಜಿಸಬೇಕು. ನೂತನ ಭವನವಾದರೂ ನಿರ್ವಾಣವಾಗುತ್ತದೆ ಎಂಬ ಆಶಯ ಇಟ್ಟುಕೊಂಡಿದ್ದವು. ವಾಜಿ ಸಿಎಂ ಕುವಾರಸ್ವಾಮಿಯವರು ಶಿಕ್ಷಕರ ಭವನದ ಕಡೆ ಚಿತ್ತ ಹರಿಸಬೇಕು. ಎಲ್ಲಕ್ಕಿಂತ ಮುಖ್ಯವಾಗಿ ನಮ್ಮ ಕ್ಷೇತ್ರವನ್ನು ಪ್ರತಿನಿಧಿಸುತ್ತಿರುವ ಪುಟ್ಟಣ್ಣ ಈ ವಿಚಾರವಾಗಿ ಹೆಚ್ಚಿನ ಆಸಕ್ತಿ ವಹಿಸಬೇಕು. ಹೆಸರು ಹೇಳಲಿಚ್ಛಿಸದ ಶಿಕ್ಷಕರು ಅಡಿಪಾಯಕ್ಕೆ ಸೀಮಿತವಾಗಿರುವ ನೂತನ ಶೈಕ್ಷಣಿಕ ಹಾಗೂ ಸಾಂಸ್ಕೃತಿಕ ಭವನದ ಕಾಮಗಾರಿ ಆರಂಭಕ್ಕೆ ಈಗಾಗಲೇ ಸಂಬಂಧಪಟ್ಟವರ ಗಮನಕ್ಕೆ ತರಲಾಗಿದೆ. ತಾಲೂಕಿನಲ್ಲಿ ಶಿಕ್ಷಕರು ಒಂದೆಡೆ ಸೇರಲು ಸೂರಿಲ್ಲ ಎಂಬ ಬೇಸರ ಶಿಕ್ಷಕರಲ್ಲಿದೆ. ಈ ಬಗ್ಗೆ ಸಂಬಂಧಪಟ್ಟವರು ಅಗತ್ಯಕ್ರಮ ವಹಿಸಬೇಕು. ನಾಗರಾಜು ಕ್ಷೇತ್ರ ಶಿಕ್ಷಣಾಧಿಕಾರಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net