ಶಿಕ್ಷಣ ಹಿತವಾದ ಅನುಭವ ಎನಿಸಬೇಕು; ಡಾ. ಶಂಕರ

29-RNR-05
Published on

ರಾಣೆಬೆನ್ನೂರ: ಶಿಕ್ಷಣ ಎಂಬುದು ಮಕ್ಕಳಿಗೆ ತಿವಿತವಾಗದೇ ಅದೊಂದು ಹಿತವಾದ ಅನುಭವ ಎನಿಸಬೇಕು ಎಂದು ಶಹರ ಸಿಪಿಐ ಡಾ. ಶಂಕರ ಎಸ್.ಕೆ. ಹೇಳಿದರು.
ನಗರದ ಬಿ.ಕೆ. ಗುಪ್ತಾ ಪ್ರೌಢಶಾಲೆಯ ಆವರಣದಲ್ಲಿ 1999ನೇ ಸಾಲಿನಲ್ಲಿ 10ನೇ ತರಗತಿಯಲ್ಲಿ ವ್ಯಾಸಂಗ ಮಾಡಿದ ಹಳೇ ವಿದ್ಯಾರ್ಥಿಗಳಿಂದ ಮಂಗಳವಾರ ಆಯೋಜಿಸಿದ್ದ ವಿದ್ಯಾರ್ಥಿಗಳಿಗೆ ಮನೋಬಲ ಹೆಚ್ಚಿಸುವ ವಿಶೇಷ ನೈಪುಣ್ಯ ತರಬೇತಿ ಶಿಬಿರದಲ್ಲಿ ಅವರು ಮಾತನಾಡಿದರು.
ವಿದ್ಯಾರ್ಥಿಯಲ್ಲಿ ವಿವೇಕವನ್ನು ತುಂಬುತ್ತ ಸಂಸ್ಕಾರವಂತನನ್ನಾಗಿ ಮಾಡುವುದೇ ಶಿಕ್ಷಣ. ನೇರ ಮತ್ತು ನಿರ್ಭಿಡೆಯ ಅಭಿವ್ಯಕ್ತಿಯ ಸಂವಹನ, ಕಂಪ್ಯೂಟರ್, ಸಾಮಾನ್ಯ ಜ್ಞಾನದಲ್ಲಿ ಪರಿಣಿತಿ ಹೊಂದುವುದು ಇಂದಿನ ಅಗತ್ಯವಾಗಿದೆ. ಇದರ ಬಗ್ಗೆ ವಿದ್ಯಾರ್ಥಿಗಳು ಹೆಚ್ಚಿನ ಒತ್ತು ನೀಡಬೇಕು ಎಂದರು.
ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಶ್ರೀನಿವಾಸ ಸಾವಕಾರ ಅಧ್ಯಕ್ಷತೆ ವಹಿಸಿದ್ದರು. ಜೀವನ ಕೌಶಲ ತರಬೇತುದಾರ ನಂದೀಶ ಶೆಟ್ಟರ ವಿದ್ಯಾರ್ಥಿಗಳಿಗೆ ತರಬೇತಿ ನೀಡಿದರು.
ಲಯನ್ಸ್ ಕ್ಲಬ್ ಅಧ್ಯಕ್ಷ ಪ್ರಭುಲಿಂಗಪ್ಪ ಹಲಗೇರಿ, ಪ್ರಾಚಾರ್ಯ ಡಿ.ಕೆ. ಶ್ರೀನಿವಾಸ ಹಾಗೂ ಸಿಬ್ಬಂದಿ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net