

ಶ್ರೀನಗರ: ಜಮ್ಮು-ಕಾಶ್ಮೀರ ಬ್ಯಾಂಕ್ಗೆ ಸೇರಿದ ವ್ಯಾನ್ನಲ್ಲಿದ್ದ ಬರೋಬ್ಬರಿ 60 ಲಕ್ಷ ರೂಪಾಯಿಯನ್ನು ಶಸ್ತ್ರಧಾರಿ ದುಷ್ಕರ್ಮಿಗಳುದೋಚಿಕೊಂಡು ಹೋಗಿದ್ದಾರೆ ಎಂದು ಪೊಲೀಸರು ತಿಳಸಿದ್ದಾರೆ.
ದಕ್ಷಿಣ ಕಾಶ್ಮೀರದ ಜಾಮಿಯಾ ಮಸೀದಿ ಸಮೀಪದ ಶೋಪಿಯಾನ್ನಲ್ಲಿ ನಿಂತಿದ್ದ ಜಮ್ಮು ಮತ್ತು ಕಾಶ್ಮೀರ ಬ್ಯಾಂಕ್ನ ವ್ಯಾನ್ ಮೇಲೆ ಇಂದು ಬೆಳಗ್ಗೆ 10.30ರ ಹೊತ್ತಿಗೆ ದಾಳಿ ನಡೆಸಿದ ಶಸ್ತ್ರಧಾರಿ ದುಷ್ಕರ್ಮಿಗಳು, ಅದರಲ್ಲಿದ್ದ 60 ಲಕ್ಷ ರೂಪಾಯಿಯನ್ನು ಹೊತ್ತೊಯ್ದಿದ್ದಾರೆ.
ಹಾಡುಹಗಲೇ ನಡೆದ ಈ ದರೋಡೆ ನೋಡಿ ಎಲ್ಲರೂ ದಂಗಾಗಿ ಹೋಗಿದ್ದಾರೆ. ಪೊಲೀಸರು ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಶುರುಮಾಡಿದ್ದಾರೆ. (ಏಜೆನ್ಸೀಸ್)