ಶೋಪಿಯಾನ್​​ನಲ್ಲಿ ಭಯೋತ್ಪಾದಕರು, ಭದ್ರತಾ ಪಡೆಗಳ ನಡುವೆ ಗುಂಡಿನ ಚಕಮಕಿ |Jammu and Kashmir

Jammu and Kashmir
Published on

Jammu and Kashmir: ಜಮ್ಮು ಮತ್ತು ಕಾಶ್ಮೀರದ ಶೋಪಿಯಾನ್​ನಲ್ಲಿ ಇಂದು (ಮಂಗಳವಾರ, ಮೇ.13) ಭದ್ರತಾ ಪಡೆಗಳು ಮತ್ತು ಉಗ್ರರ ನಡುವೆ ಗುಂಡಿನ ಚಕಮಕಿ ನಡೆಯುತ್ತಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ದಕ್ಷಿಣ ಕಾಶ್ಮೀರ ಕುಲ್ಗಾಮ್ ಜಿಲ್ಲೆಯ ಶುಕ್ರೂ ಕೆಲ್ಲರ್ ಪ್ರದೇಶದಲ್ಲಿ 2-3 ಭಯೋತ್ಪಾದಕರು ಇರುವ ಸಾಧ್ಯತೆಯಿದೆ ಎಂದು ಮಾಹಿತಿ ದೊರೆತ ನಂತರ ಈ ಕಾರ್ಯಾಚರಣೆ ಮುಂದುವರೆದಿದೆ.

ಈ ಕಾರ್ಯಾಚರನೆಯೂ ಇಂದು ಬೆಳಗಿನ ಜಾವ ಪ್ರಾರಂಭವಾಗಿದ್ದು, ಶೋಪಿಯಾನ್ ಕಾಡುಗಳಲ್ಲಿ ಅಡಗಿಕೊಂಡಿರುವ ಶಂಕಿತ ಭಯೋತ್ಪಾದಕರು ಪಹಲ್ಗಾಮ್ ಹತ್ಯೆಗಳಲ್ಲಿ ಭಾಗಿಯಾಗಿದ್ದಾರೆಯೇ ಎಂಬುದು ಸ್ಪಷ್ಟವಾಗಿಲ್ಲ. ಆದರೆ ಉಗ್ರರು ಹಾಗೂ ಭದ್ರತಾ ಪಡೆಗಳ ನಡುವೆ ಗುಂಡಿನ ಚಕಮಕಿ ನಡೆಯುತ್ತಿದೆ.

ಏಪ್ರಿಲ್ 22 ರಂದು ಪಹಲ್ಗಾಮ್‌ನಲ್ಲಿ ನಡೆದ ಭಯೋತ್ಪಾದಕ ದಾಳಿಯಲ್ಲಿ 26 ಜನರು ಸಾವನ್ನಪ್ಪಿ, ಹಲವಾರು ಜನರು ಗಾಯಗೊಂಡ ನಂತರ, ಸಶಸ್ತ್ರ ಪಡೆಗಳು ದಕ್ಷಿಣ ಕಾಶ್ಮೀರ ಮತ್ತು ಕಿಸ್ತ್ವಾರ್ ಕಾಡುಗಳಲ್ಲಿ ಶೋಧ ಕಾರ್ಯಾಚರಣೆಯಲ್ಲಿ ತೊಡಗಿವೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net