

ಗುಂಡ್ಲುಪೇಟೆ: ಬಂಡೀಪುರಕ್ಕೆ ಆಗಮಿಸಿದ ಅರಣ್ಯ ಸಚಿವ ಈಶ್ವರ ಖಂಡ್ರೆ ಅವರನ್ನು ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ಪದಾಧಿಕಾರಿಗಳು ಭೇಟಿ ಮಾಡಿ ಕಾಡಂಚಿನ ಗ್ರಾಮಗಳ ರೈತರ ಸಮಸ್ಯೆಗಳಿಗೆ ಸೂಕ್ತ ಪರಿಹಾರ ನೀಡುವಂತೆ ಮನವಿ ಮಾಡಿದರು.
ಹನೂರು ಭಾಗದ ಪೊಡು ಗಳಿಗೆ ಮೂಲಭೂತ ಸೌಕರ್ಯಗಳನ್ನು ಕಲ್ಪಿಸಬೇಕು ಹಂದಿಗಳು ನವಿಲುಗಳು ಬೆಳೆ ಹಾನಿಗೂ ಪರಿಹಾರ, ಕೋತಿಗಳ ಕಾಟ ತಡೆ, ಆನೆ ಕಂದಕ ನಿರ್ಮಾಣ, ರೈಲ್ವೆ ಕಂಬಿಗಳನ್ನು ಅಳವಡಿಕೆ ಕೆರೆ ನಿರ್ಮಾಣ, ಪ್ರಭಾವಿಗಳು ಜಮೀನು ಖರೀದಿಸಿ ನಿರ್ಮಿಸುತ್ತಿರುವ ರೆಸಾರ್ಟ್ ನಿಷೇಧ ಮಾಡಬೇಕು ಎಂಬ ಮನವಿಪತ್ರ ಸಲ್ಲಿಸಿದರು. ಈ ಸಂದರ್ಭದಲ್ಲಿ ಬೆಟ್ಟದ ಮಾದಳ್ಳಿ ಷಣ್ಮುಗ ಸ್ವಾಮಿ, ಶ್ರೀನಿವಾಸ್ ಸಿದ್ದರಾಜು, ಎಂ ಎನ್ ಮಣಿಕಂಠ ಇದ್ದರು.