

ಗುಜರಾತ್: ನವರಾತ್ರಿಯ ಹಬ್ಬದ ಸಂಭ್ರಮ ದೇಶಾದ್ಯಂತ ಮನೆ ಮಾಡಿದ್ದು, ಇದೀಗ ಎಲ್ಲೆಡೆ ದೇವಿಗೆ ವಿಶೇಷ ಪೂಜೆ ಪುನಸ್ಕಾರಗಳು ನಡೆಯುತ್ತಿವೆ. ನೃತ್ಯ, ಸಂಗೀತ, ಭಕ್ತಿ ಗೀತೆಗಳು ಹೀಗೆ ನಾನಾ ರೀತಿಯಲ್ಲಿ ಜನರು ದೇವಿಯ ಆರಾಧನೆ ಮಾಡೋದು ನವರಾತ್ರಿಯ ವಿಶೇಷ.
ಇನ್ನು ನವರಾತ್ರಿಯ ಅಂಗವಾಗಿ ಹಲವು ಸಾಂಸ್ಕೃತಿಕ ಕಾರ್ಯಕ್ರಮಗಳನ್ನೂ ದೇವಸ್ಥಾನಗಳಲ್ಲಿ ದೇವಿಯನ್ನ ಖುಷಿ ಪಡಿಸುವ ಸಲುವಾಗಿ ಆಯೋಜಿಸಲಾಗುತ್ತೆ.
ಅಂತೆಯೇ ಇದೀಗ ಗುಜರಾತ್ನಲ್ಲಿ ನವರಾತ್ರಿಯ ಅಂಗವಾಗಿ ಮಹಿಳೆಯರು ವಿಭಿನ್ನ ರೀತಿಯಲ್ಲಿ ಗರ್ಬ ನೃತ್ಯವನ್ನ ಮಾಡಿದ್ದಾರೆ. ಸಾಮಾನ್ಯವಾಗಿ ವೇದಿಕೆ ಮೇಲೆ ಗರ್ಬಾ ನೃತ್ಯವನ್ನ ಮಾಡೋದನ್ನ ನೀವು ನೋಡಿಯೇ ಇರ್ತೀರಿ.
ಆದ್ರೀಗ ಮಹಿಳೆಯರು ಗುಂಪು ಬೈಕ್ ಮತ್ತು ಜೀಪ್ನಲ್ಲಿ ಬಂದು ಗರ್ಬಾ ಮಾಡುತ್ತಿರುವ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗಿದೆ.
ಮಹಿಳೆಯರು ಒಬ್ಬರಾದ ಮೇಲೆ ಒಬ್ಬರು ಜೀಪ್ ಮತ್ತು ಬೈಕ್ನಲ್ಲಿ ಬರುತ್ತಿರುವುದನ್ನ ನೀವು ವಿಡಿಯೋದಲ್ಲಿ ಕಾಣಬಹುದು. ಅಲ್ಲದೇ ಸುಂದರವಾದ 'ಚನಿಯಾ ಚೋಲಿ' ಬಟ್ಟೆಗಳನ್ನು ತೊಟ್ಟು ಮಹಿಳೆಯರು ಮಿಂಚುತ್ತಿದ್ದು, ಇವರ ಬೈಕ್ ಮತ್ತು ಜೀಪ್ ಗರ್ಬಾ ನೃತ್ಯ ನೋಡುಗರ ಹುಬ್ಬೇರಿಸಿದೆ.
'ತಲ್ವಾರ್ ರಾಸ್', ಕತ್ತಿಯನ್ನು ಹಿಡಿದ ಮಹಿಳೆಯರು, ಬೈಕ್, ಸ್ಕೂಟರ್ ಮತ್ತು ಜೀಪ್‌ಗಳಲ್ಲಿ ಸವಾರಿ ಮಾಡುವಾಗ ಮಹಿಳೆಯರು ನೃತ್ಯವನ್ನೂ ಮಾಡಿದ್ದಾರೆ.
ರಾಜ್‌ಕೋಟ್‌ನ ರಾಜ್ವಿ ಪ್ಯಾಲೇಸ್‌ನಲ್ಲಿ ನವರಾತ್ರಿಯ ಮೂರನೇ ದಿನದಂದು ಈ ರೀತಿಯಾಗಿ ವಿಭಿನ್ನ ನೃತ್ಯ ಕಾರ್ಯಕ್ರಮವನ್ನು ಆಯೋಜಿಸಲಾಗಿದ್ದು, ಮಹಿಳೆಯರು ಕತ್ತಿಗಳನ್ನು ಝಳಪಿಸುತ್ತಾ, ನೃತ್ಯ ಮಾಡಿರುವುದು ವಿಶೇಷ.
ಸದ್ಯ ಈ ವಿಡಿಯೋ ನೋಡುಗರ ಗಮನ ಸೆಳೆದಿದ್ದು, ನೆಟ್ಟಿಗರು ನಾನಾ ಕಾಮೆಂಟ್ಗಳನ್ನ ಮಾಡುತ್ತಿದ್ದಾರೆ.