ರಾಜ್ಯದಲ್ಲೂ ಗುಜರಾತ್ ಮಾದರಿ ಭೂಸ್ವಾಧೀನ

Gujarath
Published on

| ಹೊಸಹಟ್ಟಿ ಕುಮಾರ

ಬೆಂಗಳೂರು: ವಸತಿ ಯೋಜನೆಗಳಿಗೆ ಭೂಮಿ ಸ್ವಾಧೀನಪಡಿಸಿಕೊಳ್ಳಲು ಗುಜರಾತ್ ಮಾದರಿ ಅನುಸರಿಸಲು ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ (ಬಿಡಿಎ) ಚಿಂತನೆ ನಡೆಸಿದೆ. ಗುಜರಾತ್​ನ ಗಾಂಧಿನಗರ ಹಾಗೂ ಅಹಮದಾಬಾದ್ ಪ್ರಾಧಿಕಾರಗಳು ವಸತಿ ಯೋಜನೆ ರೂಪಿಸಲು ಭೂಸ್ವಾಧೀನ ಮಾಡಿದ ರೀತಿಯಲ್ಲೇ ಬೆಂಗಳೂರಿನಲ್ಲೂ ಇನ್ನುಮುಂದೆ ಭೂಮಿ ವಶಪಡಿಸಿಕೊಳ್ಳಲು ನೀತಿ ರೂಪಿಸಲಾಗುತ್ತಿದೆ ಎಂದು ಬಿಡಿಎ ಹಿರಿಯ ಅಧಿಕಾರಿಯೊಬ್ಬರು ವಿಜಯವಾಣಿಗೆ ಮಾಹಿತಿ ನೀಡಿದ್ದಾರೆ.

ಏನಿದು ಗುಜರಾತ್ ಮಾದರಿ?: ಇಲ್ಲಿಯವರೆಗೆ ಬಿಡಿಎ ವಸತಿ ಯೋಜನೆಗಳಿಗೆ ಭೂಮಾಲೀಕರಿಂದ ವಶಪಡಿಸಿಕೊಂಡ ಜಮೀನಿಗೆ ಪರಿಹಾರವಾಗಿ ಹಣ ಪಾವತಿ ಮಾಡುತ್ತಿತ್ತು. ಇತ್ತೀಚೆಗೆ ಹಣದ ಬದಲಿಗೆ ಇಂತಿಷ್ಟು ಅಭಿವೃದಿಟಛಿಪಡಿಸಿದ ಭೂಮಿಯನ್ನು ನೀಡುತ್ತಿದೆ. ಈ ರೀತಿಯ ಭೂಸ್ವಾಧೀನ ಭೂಮಾಲೀಕರಿಗೆ ಇಷ್ಟವಾಗದೆ ಕೋರ್ಟ್ ಮೊರೆ ಹೋಗುತ್ತಿದ್ದು, ಬಿಡಿಎಗೆ ತೊಡಕಾಗಿ ಪರಿಣಮಿಸಿದೆ.

ತಕರಾರು ಸಾಧ್ಯತೆ ಕಡಿಮೆ: ಗಾಂಧಿನಗರ ಹಾಗೂ ಅಹಮದಾಬಾದ್ ಗಳಲ್ಲಿ ವಸತಿ ಯೋಜನೆಗಾಗಿ ಸ್ಥಳೀಯ ಪ್ರಾಧಿಕಾರ ಜಮೀನು ಗುರುತಿಸಿ ಸಾರ್ವಜನಿಕ ಪ್ರಕಟಣೆ ಹೊರಡಿಸುತ್ತದೆ. ಅದಕ್ಕೂ ಮೊದಲು ಭೂಮಾಲೀಕರ ಜತೆ ಚರ್ಚೆ ನಡೆಸುತ್ತದೆ. ಮಾಲೀಕರು ಯೋಜನೆಗೆ ನೀಡಿದ ಭೂಮಿಯಲ್ಲಿ ಅರ್ಧದಷ್ಟನ್ನು ಅಭಿವೃದ್ಧಿಪಡಿಸಿ ಕೊಟ್ಟು, ಉಳಿದರ್ಧ ಜಾಗದಲ್ಲಿ ಫಲಾನುಭವಿಗಳಿಗೆ ನೀಡಲಾಗುತ್ತದೆ.

ಉದಾಹರಣೆಗೆ ಮಾಲೀಕರು 1 ಎಕರೆ ಭೂಮಿ ನೀಡಿದರೆ ಅರ್ಧ ಎಕರೆ ಅಭಿವೃದಿಟಛಿಪಡಿಸಿದ ಜಮೀನು ಕೊಡಬೇಕಾಗುತ್ತದೆ. ಉಳಿದ ಅರ್ಧದಷ್ಟು ಭೂಮಿಯನ್ನು ಪ್ರಾಧಿಕಾರ ನಿವೇಶನಗಳನ್ನು ವಿಂಗಡಿಸಿ ಫಲಾನುಭವಿಗಳಿಗೆ ಹಂಚಿಕೆ ಮಾಡುತ್ತದೆ. ಹೀಗೆ ಮಾಡುವುದರಿಂದ ಮಾಲೀಕರು ತಕರಾರು ತೆಗೆಯುವ ಸಾಧ್ಯತೆ ಕಡಿಮೆ. ಅಲ್ಲದೆ ಪ್ರಾಧಿಕಾರ ಹೆಚ್ಚು ಆದಾಯ ಗಳಿಸಲು ಸಾಧ್ಯವಾಗುತ್ತದೆ. ಇದನ್ನೂ ಓದಿ: ಡಿಜೆ ಹಳ್ಳಿ ಗಲಭೆಕೋರರ ಹೆಡೆಮುರಿ ಕಟ್ಟಲು ಸಿಎಂ ಸಜ್ಜು; ಗೂಂಡಾ ಕಾಯ್ದೆ, ನಷ್ಟ ವಸೂಲಿ ಬ್ರಹ್ಮಾಸ್ತ್ರ ಬಳಕೆ

ಸರ್ಕಾರಕ್ಕೆ ಪ್ರಸ್ತಾವನೆ: ಗಾಂಧಿನಗರ ಹಾಗೂ ಅಹಮದಾಬಾದ್ ನಗರಗಳಲ್ಲಿ ನಡೆದಿರುವ ಭೂಸ್ವಾಧೀನ ಹಾಗೂ ಅಭಿವೃದಿಟಛಿ ಪ್ರಕ್ರಿಯೆಯನ್ನು ಬಿಡಿಎ ಹಿರಿಯ ಅಧಿಕಾರಿಗಳ ತಂಡ ಅಲ್ಲಿಗೆ ತೆರಳಿ ಪರಿಶೀಲಿಸಿ ವರದಿ ತಯಾರಿಸಿದೆ. ಅಲ್ಲದೆ ಬಿಡಿಎ ಉನ್ನತ ಅಧಿಕಾರಿಗಳು ಚರ್ಚೆ ನಡೆಸಿ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲು ಮುಂದಾಗಿದ್ದಾರೆ.

ಫಲಾನುಭವಿಗಳ ಹಣದಿಂದಲೇ ನಿವೇಶನ ಅಭಿವೃದ್ಧಿ: ಬೆಂಗಳೂರು ಅಭಿವೃದಿಟಛಿ ಪ್ರಾಧಿಕಾರ ಪ್ರಕಟಣೆ ಹೊರಡಿಸಿದ ನಂತರ ಯೋಜನೆಗೆ ಅರ್ಜಿ ಆಹ್ವಾನಿಸುತ್ತದೆ. ಆಯ್ಕೆಯಾದ ಅರ್ಜಿದಾರರು ಪ್ರಾಧಿಕಾರ ನಿಗದಿಪಡಿಸಿದ ಮೊತ್ತವನ್ನು ಮೊದಲೇ ಪಾವತಿ ಮಾಡಬೇಕು. ಹಣ ಪಾವತಿ ಮಾಡಿದ ನಂತರ ಪ್ರಾಧಿಕಾರ ನಿವೇಶನಗಳನ್ನು ಅಭಿವೃದ್ಧಿಅವರಿಗೆ ಹಂಚಿಕೆ ಮಾಡುತ್ತದೆ. ಅರ್ಜಿದಾರರ ಹಣದಿಂದಲೇ ನಿವೇಶನಗಳನ್ನು ಪ್ರಾಧಿಕಾರ ಅಭಿವೃದ್ಧಿದರಿಂದ ಆರ್ಥಿಕ ಹೊರೆ ತಗ್ಗುತ್ತದೆ. ಇದನ್ನೂ ಓದಿ: ಡೇಟಾ ಸಂರಕ್ಷಣೆ ಏಕೆ ಮುಖ್ಯ: ಸರ್ಕಾರ ಯಾಕೆ ಮುತುವರ್ಜಿ ತೆಗೆದುಕೊಂಡಿದೆ?

ಭೂಮಾಲೀಕರಿಗೂ ಲಾಭ: ಭೂಮಾಲೀಕರಿಗೆ ಅಭಿವೃದ್ಧಿಪಡಿಸಿದ ಜಾಗ ನೀಡುವುದರಿಂದ ಅವರಿಗೂ ಅಧಿಕ ಲಾಭ ಇದೆ. ಯಾವುದೇ ಷರತ್ತುಗಳು ಇಲ್ಲದ ಹಿನ್ನೆಲೆಯಲ್ಲಿ ಅವರು ಮಾರುಕಟ್ಟೆ ಮೌಲ್ಯಕ್ಕೆ ಜಾಗ ಮಾರಬಹುದು. ದೊಡ್ಡ ಕಾಂಪ್ಲೆಕ್ ಸೇರಿ ಇತರೆ ವಾಣಿಜ್ಯ ಕಟ್ಟಡಗಳನ್ನು ಕಟ್ಟಿಕೊಳ್ಳಬಹುದಾಗಿದೆ.

ನಿವೇಶನಕ್ಕೆ ಬ್ರಾಂಡ್​ ಸಿಗುತ್ತದೆ: ಸರ್ಕಾರದಿಂದ ರಚನೆಗೊಂಡ ಪ್ರಾಧಿಕಾರ ನಿವೇಶನಗಳನ್ನು ಅಭಿವೃದ್ಧಿಪಡಿಸುವುದರಿಂದ ಬ್ರಾಂಡ್ ದೊರೆಯುತ್ತದೆ. ಪ್ರಾಧಿಕಾರ ಎಲ್ಲ ರೀತಿಯ ವಿವಾದಗಳನ್ನು ಬಗೆಹರಿಸಿಕೊಂಡು ನಿವೇಶನ ಅಭಿವೃದ್ಧಿಪಡಿಸುವುದರಿಂದ ಯಾವುದೇ ಸಮಸ್ಯೆ ಎದುರಾಗುವುದಿಲ್ಲ. ಭೂಮಾಲೀಕರ ವಶಕ್ಕೆ ನೀಡಿದ ನಿವೇಶನಗಳನ್ನು ಅವರು ಯಾವುದೇ ಷರತ್ತುಗಳಿಲ್ಲದೆ ಮಾರಾಟ ಮಾಡಬಹುದು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net