

ಗುಜರಾತ್: ಗುಜರಾತ್‌ನ ಜುನಾಗಢ್‌ನಲ್ಲಿ ನಿಲ್ಲಿಸಿದ್ದ ಕಾರಿನಲ್ಲಿ ಅಡಗಿ ಕುಳಿತಿದ್ದ 5 ವರ್ಷದ ಬಾಲಕ ಸಾವನ್ನಪ್ಪಿರುವ ಘಟನೆ ವರದಿಯಾಗಿದೆ. ಹುಡುಗನ ತಾಯಿ ಆದಿತ್ಯ ರವೀಂದ್ರ ಭಾರತಿ ಅವನನ್ನು ಸ್ನಾನಕ್ಕೆ ಕರೆದಾಗ ಈ ಘಟನೆ ನಡೆದಿದೆ. ಈ ಹುಡುಗನಿಗೆ ಪ್ರತಿನಿತ್ಯವೂ ಸ್ನಾನ ಮಾಡೋದು ದೊಡ್ಡ ತಲೆ ನೋವಾಗಿತ್ತು. ಅವನು ಇಷ್ಟಪಡದ ದಿನಚರಿಯನ್ನು ತಪ್ಪಿಸಲು ಪ್ಲ್ಯಾನ್ ರೂಪಿಸಿದ್ದಾನೆ.
ಸ್ನಾನ ಮಾಡೋದನ್ನ ತಪ್ಪಿಸಲು ಆದಿತ್ಯ ಓಡಿಹೋಗಿ ಹತ್ತಿರದ ಕಾರ್ಖಾನೆಯ ನಿಲ್ಲಿಸಿದ್ದ ಕಾರಿನೊಳಗೆ ಆಶ್ರಯ ಪಡೆದಿದ್ದಾನೆ. ಬಾಲಕ ಅಡಗಿಕೊಂಡ ಕಾರಿನ ಬಾಗಿಲು ಹೇಗೋ ಮುಚ್ಚಿದೆ. ತದನಂತರ ಆತ ಹೊರ ಬರೋದಕ್ಕೂ ಸಾಧ್ಯವಾಗಿಲ್ಲ. ಮತ್ತೊಂದೆಡು ಮಗ ಕಳೆದು ಹೋಗಿದ್ದಾನೆಂದು ಪೋಷಕರು ತೀವ್ರವಾದ ಹುಡುಕಾಟ ನಡೆಸಿದ್ದಾರೆ.
ಕಾರ್ಖಾನೆಯ ಸಿಸಿಟಿವಿ ದೃಶ್ಯಾವಳಿಗಳ ಸಹಾಯದಿಂದ ಮಾತ್ರ ಮಗು ಕಾರಿನೊಳಗೆ ಬಚ್ಚಿಟ್ಟುಕೊಂಡಿರುವುದು ಪತ್ತೆಯಾಗಿದೆ. ಆದಿತ್ಯನನ್ನು ವಾಹನದಿಂದ ಹೊರತರುವಷ್ಟರಲ್ಲಿ ಆತ ಪ್ರಜ್ಞಾಹೀನನಾಗಿದ್ದ.
ತಕ್ಷಣವೇ ಪೋಷಕರು ಆತನನ್ನು ಜುನಾಗಢ್ ಆಸ್ಪತ್ರೆ ನಂತರ ರಾಜ್ಕೋಟ್ಗೆಯ ಮತ್ತೊಂದು ಆಸ್ಪತ್ರೆಗೆ ರವಾನಿಸಿದ್ದಾರೆ. ವೈದ್ಯರು ಆದಿತ್ಯನನ್ನ ಉಳಿಸಬೇಕೆಂದು ಹರಸಾಹಸ ಪಟ್ಟಿದ್ದಾರೆ. ದುರಾದೃಶ್ಟವಶಾತ್ ಉಸಿರುಗಟ್ಟುವಿಕೆಯಿಂದ ಆದಿತ್ಯ ಸಾವನ್ನಪ್ಪಿದ್ದಾನೆ.