

ಅಹಮದಾಬಾದ್: ಕಳೆದ ವರ್ಷ ಅಮೆರಿಕದ ಟೆಕ್ಸಾಸ್ನಲ್ಲಿ ನಡೆದ ಅದ್ಧೂರಿ "ಹೌಡಿ ಮೋದಿ" ಕಾರ್ಯಕ್ರಮದ ರೀತಿಯಲ್ಲೇ ಗುಜರಾತಿನ ಅಹಮದಾಬಾದ್ನಲ್ಲಿ "ನಮಸ್ತೆ ಟ್ರಂಪ್" ವೈಭಯುತ ಕಾರ್ಯಕ್ರಮಕ್ಕೆ ವೇದಿಕೆ ಸಿದ್ಧವಾಗುತ್ತಿದೆ. ಹಲವು ತಿಂಗಳುಗಳ ಬಳಿಕ ಮತ್ತೊಮ್ಮೆ ದಿಗ್ಗಜ ನಾಯಕರು ಒಂದೇ ವೇದಿಕೆಯಲ್ಲಿ ಕಾಣಿಸಿಕೊಳ್ಳುತ್ತಿದ್ದು ಸಾಕಷ್ಟು ಕುತೂಹಲ ಗರಿಗೆದರಿದೆ.
ಫೆ. 24ರಂದು ಪತ್ನಿ ಮೆಲೆನಿಯಾ ಟ್ರಂಪ್ ಜತೆ ಡೊನಾಲ್ಡ್ ಟ್ರಂಪ್ ಭಾರತಕ್ಕೆ ಬಂದಿಳಿಯಲಿದ್ದಾರೆ. ಗುಜರಾತಿನ ಅಹಮದಾಬಾದ್ ನಗರದ ಸರ್ದಾರ್ ವಲ್ಲಭಭಾಯ್ ಪಟೇಲ್ ವಿಮಾನ ನಿಲ್ದಾಣಕ್ಕೆ ಬಂದಿಳಿಯುವ ಟ್ರಂಪ್ ದಂಪತಿಯನ್ನು ಮೊಟೇರಾದಲ್ಲಿ ನಿರ್ಮಾಣವಾಗಿರುವ ವಿಶ್ವದ ಬಹುದೊಡ್ಡ ಕ್ರಿಕೆಟ್ ಕ್ರೀಡಾಂಗಣದ ಉದ್ಘಾಟನೆಗೆ ಅದ್ಧೂರಿ ಮೆರವಣಿಗೆಯ ಮೂಲಕ ಕರೆದೊಯ್ಯಲಾಗುತ್ತದೆ. ಈ ಕಾರ್ಯಕ್ರಮಕ್ಕೆ ಅಂದಾಜು ನೂರು ಕೋಟಿ ರೂ. ಖರ್ಚಾಗಲಿದೆ ಎಂದು ಹೇಳಲಾಗಿದೆ. ಕಾರ್ಯಕ್ರಮದಲ್ಲಿ ಲಕ್ಷಾಂತರ ಜನರು ಭಾಗವಹಿಸಲಿದ್ದು, ಸಮಾರಂಭವನ್ನು ಸ್ಮರಣೀಯವಾಗಿಸಲು ಸಾಕಷ್ಟು ಸಿದ್ಧತೆಯನ್ನು ಅಹಮದಾಬಾದ್ನಲ್ಲಿ ಮಾಡಿಕೊಳ್ಳಲಾಗುತ್ತಿದೆ.
ಮೊಟೇರಾ ಕ್ರೀಡಾಂಗಣದ ಎದುರಿಗಿರುವ ಗೋಡೆಯ ಮೇಲೆ ಪ್ರಧಾನಿ ಮೋದಿ-ಅಧ್ಯಕ್ಷ ಟ್ರಂಪ್ ಚಿತ್ರವನ್ನು ಬಿಡಿಸಲಾಗಿದೆ. ಅಲ್ಲದೆ, ಅಮೆರಿಕ-ಇಂಡಿಯಾ ಕುರಿತಾದ ಕೆಲ ಘೋಷಣೆಗಳನ್ನು ವರ್ಣಮಯವಾಗಿ ಬರೆಯಲಾಗಿದೆ. ಇಷ್ಟೇ ಅಲ್ಲದೆ ಮೋದಿ, ಟ್ರಂಪ್ ಹಾಗೂ ಮೆಲೆನಿಯಾ ಟ್ರಂಪ್ ಪೋಸ್ಟರ್ಗಳನ್ನು ಅಳವಡಿಸಲಾಗಿದೆ. ಪೋಸ್ಟರ್ನಲ್ಲಿ ಉತ್ತಮ ಭವಿಷ್ಯಕ್ಕಾಗಿ ಪ್ರಬಲವಾದ ಸ್ನೇಹ ಎಂದು ಬರೆಯಲಾಗಿದೆ. ಹೀಗೆ ಅಹಮದಾಬಾದ್ನಗರ ನಮಸ್ತೆ ಟ್ರಂಪ್ ಕಾರ್ಯಕ್ರಮಕ್ಕೆ ಮದುವಣಗಿತ್ತಿಯಂತೆ ಸಿಂಗಾರಗೊಳ್ಳುತ್ತಿದ್ದು, ಅದರ ಝಲಕ್ ಈ ಕೆಳಕಂಡಂತಿದೆ. (ಏಜೆನ್ಸೀಸ್)ಫೋ