ಗುಜರಾತ್ ಪಂಚಾಯತ್ ಉಪಚುನಾವಣೆ: 33ರ ಪೈಕಿ 29 ಭಾರತೀಯ ಜನತಾ ಪಾರ್ಟಿ ತೆಕ್ಕೆಗೆ ಮೂರು ಕಾಂಗ್ರೆಸ್ ಕೈಗೆ..

BJP 1200px-Bharatiya_Janata_Party_logo.svg
Published on

ಅಹಮದಾಬಾದ್​: ಗುಜರಾತ್​ನಲ್ಲಿ ವರ್ಷಾಂತ್ಯದಲ್ಲಿ ನಡೆದ ತಾಲೂಕು ಮತ್ತು ಜಿಲ್ಲಾ ಪಂಚಾಯತ್ ಸ್ಥಾನಗಳ ಉಪಚುನಾವಣೆಯಲ್ಲಿ 33 ಸ್ಥಾನಗಳ ಪೈಕಿ 29 ಬಿಜೆಪಿ ಪಾಲಾದರೆ, ಮೂರು ಕಾಂಗ್ರೆಸ್ ಕೈ ಸೇರಿದೆ.

ಇನ್ನುಳಿದ ಒಂದು ಸ್ಥಾನದಲ್ಲಿ ಪಕ್ಷೇತರ ಅಭ್ಯರ್ಥಿ ಗೆಲುವು ಸಾಧಿಸಿದ್ದಾರೆ. ಗುಜರಾತ್ ರಾಜ್ಯ ಚುನಾವಣಾ ಆಯೋಗ ಮಂಗಳವಾರ ಪ್ರಕಟಿಸಿದ ಫಲಿತಾಂಶದ ಪ್ರಕಾರ, 33 ಸ್ಥಾನಗಳ ಉಪಚುನಾವಣೆಯಲ್ಲಿ ಮೂರು ಸ್ಥಾನಗಳಲ್ಲಿ ಬಿಜೆಪಿ ಅಭ್ಯರ್ಥಿಗಳು ಅವಿರೋಧ ಆಯ್ಕೆ ಕಂಡಿದ್ದಾರೆ. 30 ಸ್ಥಾನಗಳಿಗೆ ಚುನಾವಣೆ ನಡೆದಿದ್ದು, 26 ಸ್ಥಾನಗಳಲ್ಲಿ ಬಿಜೆಪಿ ಗೆಲುವಿನ ನಗೆ ಬೀರಿದೆ.

ಈ 30 ಸ್ಥಾನಗಳ ಪೈಕಿ 3 ಜಿಲ್ಲಾ ಪಂಚಾಯಿತಿ ಸ್ಥಾನಗಳಾಗಿದ್ದು, ಇದರಲ್ಲಿ ಕಾಂಗ್ರೆಸ್ ಎರಡು, ಬಿಜೆಪಿ ಒಂದು ಸ್ಥಾನಗಳಲ್ಲಿ ಗೆಲುವು ಕಂಡಿವೆ. ಇನ್ನುಳಿದ 27 ತಾಲೂಕು ಪಂಚಾಯಿತಿ ಸ್ಥಾನಗಳ ಪೈಕಿ 25 ಬಿಜೆಪಿ, ಕಾಂಗ್ರಸ್ 1, ಪಕ್ಷೇತರ ಒಂದು ಸ್ಥಾನಗಳಲ್ಲಿ ಗೆಲುವು ಕಂಡಿದ್ದಾರೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net