ನೆಮ್ಮದಿಯ ಬದುಕಿಗೆ ಮಾರ್ಗದರ್ಶನ ನೀಡಿದವರು: ಶ್ರೀ ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿ ಆಶೀರ್ವಚನ

kanyadi
ನಾರಾಯಣ ಗುರು ಜಯಂತಿಯನ್ನು ಕನ್ಯಾಡಿ ಶ್ರೀ ರಾಮ ಕ್ಷೇತ್ರ ಮಹಾಸಂಸ್ಥಾನದ ಜಗದ್ಗುರು ಪೀಠದ ಪೀಠಾಧೀಶ ಶ್ರೀ ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿ ಉದ್ಘಾಟಿಸಿದರು.
Published on

ಬೆಳ್ತಂಗಡಿ: ಮನಷ್ಯ ತನ್ನ ಇತಿಮಿತಿಗಳನ್ನು ಮೀರಿ ಯಾಂತ್ರಿಕ ಬದುಕಿಗೆ ಒಗ್ಗಿಕೊಂಡು ಬದುಕುತ್ತಿರುವ ಪರಿಣಾಮ ಇಂದು ಪ್ರಾಪಂಚಿಕವಾಗಿ ನೆಮ್ಮದಿ ಇಲ್ಲವಾಗಿದೆ. ಅದಕ್ಕಾಗಿ ನೈಜ ಮಾನವತಾವಾದ ತಿಳಿಯಲು ನಾರಾಯಣಗುರುಗಳಾದಿಯಿಂದ ಎಲ್ಲ ಸಂತರು ವೇದ ಉಪನಿಷತ್ತುಗಳನ್ನು ನೀಡಿದರು ಎಂದು ಕನ್ಯಾಡಿ ಶ್ರೀರಾಮ ಕ್ಷೇತ್ರ ಮಹಾಸಂಸ್ಥಾನದ ಜಗದ್ಗುರು ಪೀಠದ ಪೀಠಾಧೀಶರಾದ ಶ್ರೀ ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿ ನುಡಿದರು.

ಗುರುವಾರ ರಾಷ್ಟ್ರೀಯ ಹಬ್ಬ ಹಾಗೂ ಮಹಾಪುರುಷರ ಜಯಂತಿ ಆಚರಣೆ ತಾಲೂಕು ಸಮಿತಿ ಆಶ್ರಯದಲ್ಲಿ ಕಲ್ಮಂಜದ ಕನ್ಯಾಡಿಯ ಶ್ರೀ ಗುರುದೇವ ಮಠದಲ್ಲಿ ನಡೆದ ತಾಲೂಕು ಮಟ್ಟದ ನಾರಾಯಣ ಗುರು ಜಯಂತಿ ಉದ್ಘಾಟಿಸಿ ಆಶೀರ್ವಚನ ನೀಡಿದರು.

ಯುವ ವಾಗ್ಮಿ ಪೃಥ್ವೀಶ್ ಧರ್ಮಸ್ಥಳ, ಬೆಳ್ತಂಗಡಿ ವೃತ್ತ ನಿರೀಕ್ಷಕ ನಾಗೇಶ್ ಕದ್ರಿ, ಪಪಂ ಮುಖ್ಯಾಧಿಕಾರಿ ರಾಜೇಶ್ ಕೆ., ತಾಲೂಕು ಎಡಿಎಲ್‌ಆರ್ ರೇಣುಕಾ ನಾಯ್ಕ, ಕನ್ಯಾಡಿ ಚಾತುರ್ಮಾಸ್ಯ ಸಮಿತಿ ಸಂಚಾಲಕರಾದ ಜಯಂತ್ ಕೋಟ್ಯಾನ್, ಬೆಳ್ತಂಗಡಿ ಸಹಕಾರ ಇಲಾಖೆಯ ಸಹಕಾರಿ ಅಭಿವೃದ್ಧಿ ಅಧಿಕಾರಿ ಬಿ.ವಿ.ಪ್ರತಿಮಾ, ಪ್ರಮುಖರಾದ ಸದಾನಂದ ಉಂಗಿಲಬಲು, ಎಲ್ಲ ಇಲಾಖೆ ಅಧಿಕಾರಿಗಳು, ತಾಲೂಕಿನ ವಿವಿಧ ಗ್ರಾಪಂ ಅಧ್ಯಕ್ಷ ಉಪಾಧ್ಯಕ್ಷ, ಸದಸ್ಯರು ಉಪಸ್ಥಿತರಿದ್ದರು.

ಅಧ್ಯಕ್ಷತೆ ವಹಿಸಿದ್ದ ತಹಸೀಲ್ದಾರ್ ಟಿ.ಸುರೇಶ್ ಕುಮಾರ್ ಸ್ವಾಗತಿಸಿ. ಗ್ರಾಮ ಆಡಳಿತಾಧಿಕಾರಿ ಹೇಮಾ ವಂದಿಸಿ. ಶಿಕ್ಷಕಿ ಮಮತಾ ನಿರೂಪಿಸಿದರು. ಕಂದಾಯ ನಿರೀಕ್ಷಕ ಪಾವಡಪ್ಪ ದೊಡಮನಿ ಹಾಗು ಗ್ರಾಮ ಆಡಳಿತಗಾರರಾದ ಪರಮೇಶ್ ಕಾರ್ಯಕ್ರಮ ಸಂಯೋಜಿಸಿದರು. ರಾಷ್ಟ್ರೀಯ ಹಬ್ಬ ಹಾಗೂ ಮಹಾಪುರುಷರ ಜಯಂತಿ ಆಚರಣೆ ತಾಲೂಕು ಸಮಿತಿ ಆಶ್ರಯದಲ್ಲಿ ಗುರುವಾರ ತಾಲೂಕು ಆಡಳಿತ ಸೌಧದಲ್ಲಿ ನುಲಿಯ ಚಂದಯ್ಯ ಜಯಂತಿ ತಹಸೀಲ್ದಾರ್ ಟಿ.ಸುರೇಶ್ ಕುಮಾರ್ ಉದ್ಘಾಟಿಸಿದರು.

ವಿಶ್ವದಲ್ಲಿ ಪರಿವರ್ತನೆ ಹಾದಿ ತೋರಿಸಿದ ಸಂತ ಹರಿಕಾರರು ನಾರಾಯಣಗುರುಗಳು. ಅಪ್ಪಟ ಸಮಾಜವಾದಿಯಾಗಿ ಭಾರತೀಯ ಸಮನ್ವಯ ಪರಂಪರೆಯಲ್ಲಿ ಅಪರೂಪದ ವ್ಯಕ್ತಿಯಾಗಿ ಕಂಡುಬಂದವರು. ದಕ್ಷಿಣ ಭಾರತದಲ್ಲಿ ಸಾಮಾಜಿಕ ಪರಿವರ್ತನೆ ತಂದುಕೊಟ್ಟವರು.- ಹರೀಶ್ ಪೂಂಜ, ಶಾಸಕ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net