ಸ್ವ ಉದ್ಯೋಗ ಬಯಸುವವರಿಗೆ ಮಾರ್ಗದರ್ಶನ

HUN-JUNE-12-2(FOUNDATION OF AVANI )
Published on

ಹುಣಸೂರು: ಪರಿಸರ ದಿನಾಚರಣೆ ಅಂಗವಾಗಿ ಯೂತ್ ಫಾರ್ ಅವನಿ ಫೌಂಡೇಷನ್ ವತಿಯಿಂದ ತಾಲೂಕಿನ ರಾಮೇನಹಳ್ಳಿಯ ಓಂಕಾರೇಶ್ವರ ದೇವಾಲಯ ಸುತ್ತಮುತ್ತ ಸಸಿ ನೆಡಲಾಯಿತು.

ಫೌಂಡೇಷನ್ ಅಧ್ಯಕ್ಷ ಎಂ.ಎಸ್.ಶ್ರೇಯಸ್ ಮಾತನಾಡಿ, ಪ್ರಾದೇಶಿಕ ಅರಣ್ಯ ವಿಭಾಗದ ಸಹಯೋಗದಲ್ಲಿ ರಾಮೇನಹಳ್ಳಿ ಬೆಟ್ಟದಲ್ಲಿ ಸಸಿಗಳನ್ನು ನೆಡಲಾಗಿದೆ. ಮುಂದೆ ಪಟ್ಟಣದ ಪಾರ್ಕ್ ಹಾಗೂ ರಸ್ತೆಬದಿಯಲ್ಲಿ ಸಸಿ ನೆಡುವ ಉದ್ದೇಶ ಹೊಂದಲಾಗಿದೆ. ಸ್ವ ಉದ್ಯೋಗ ಬಯಸುವ ಯುವ ಜನಾಂಗದವರಿಗೆ ಮಾರ್ಗದರ್ಶನ, ನೆರವು, ಪರಿಸರ ಪೂರಕ ಕಾರ್ಯಕ್ರಮ ಆಯೋಜಿಸಲಾಗುವುದು ಎಂದರು.

ಆರ್‌ಎಫ್‌ಒ ಸಂದೀಪ್, ಸಿಬ್ಬಂದಿ ಕುಮಾರ್, ರವಿ, ಫೌಂಡೇಷನ್‌ನ ಮಮತಾ, ಪುಟ್ಟಮಲ್ಲಯ್ಯ, ತುಷಾರ್ ಮತ್ತಿತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net