

ಬೆಂಗಳೂರು: ಪೆನ್‌ಡ್ರೈವ್ ಪ್ರಕರಣ ಪ್ರಾಮಾಣಿಕವಾಗಿ ತನಿಖೆ ನಡೆಯಲಿ. ಈ ಪೆನ್‌ಡ್ರೈವ್‌ಗಳನ್ನು ವ್ಯಾಪಾರಕ್ಕೆ ಇಟ್ಟುಕೊಂಡಿದ್ದೇ ದೇವರಾಜೇಗೌಡ ಮತ್ತು ಕಾರ್ತಿಕ್. ನಾನು ಅವನನ್ನು ಡಿ.ಕೆ. ಶಿವಕುಮಾರ್ ಅವರೊಂದಿಗೆ ಮಾತನಾಡಿಸಿ ತಪ್ಪು ಮಾಡಿದೆ ಎಂದು ಮಾಜಿ ಸಂಸದ ಎಲ್.ಆರ್.ಶಿವರಾಮೇಗೌಡ ಹೇಳಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನನಗೂ ಪೆನ್‌ಡ್ರೈವ್‌ಗೂ ಸಂಬಂಧ ಇಲ್ಲ. ಗೆಸ್ಟ್ ಅಪಿಯರೆನ್ಸ್ ರೀತಿ ಎರಡು ದಿನ ನಾನು ಸಿಲುಕಿದ್ದೆ ಎಂದು ತಿಳಿಸಿದ್ದಾರೆ.
ದೇವರಾಜೇಗೌಡ ಮೋಸ್ಟ್ ಕ್ರಿಮಿನಲ್ ಮ್ಯಾನ್. ಅವನು ಒಳಗೆ ಹೋದಾಗ, ಸದ್ಯ ಹುಚ್ಚು ನಾಯಿ ಒಳಗೆ ಹೋಯಿತಲ್ಲ ಎಂದು ತಿರುಪತಿ ತಿಮ್ಮಪ್ಪನಿಗೆ ಕೈಮುಗಿದೆ ಎಂದು ಏಕವಚದಲ್ಲೇ ವಾಗ್ದಾಳಿ ನಡೆಸಿದರು.