ಈ ಫೋಟೋದಲ್ಲಿರುವವರು ಯಾರು ಗೊತ್ತಾ? ಅಪ್ಪು ಜತೆ ನಟಿಸಿದ್ದ ಸ್ಟಾರ್​ Actress

Anupama Parameswaran
Published on

ಬೆಂಗಳೂರು: ಇತ್ತೀಚಿಗೆ ಸಾಮಾಜಿಕ ಜಾಲತಾಣಗಳ ಬಳಕೆ ಹೆಚ್ಚಾಗಿದ್ದು, ಸಿನಿಮಾ ನಟಿ ( actress ) ನಟರ ಬಾಲ್ಯದ ಫೋಟೋಗಳು, ವೈಯಕ್ತಿಕ ವಿಚಾರಗಳು ಹೆಚ್ಚು ಚರ್ಚೆಯಾಗುತ್ತಿವೆ. ಈ ಹಿನ್ನೆಲೆಯಲ್ಲಿ ಇತ್ತೀಚೆಗೆ ನಾಯಕಿಯೊಬ್ಬರು ತಮ್ಮ ಬಾಲ್ಯದ ಫೋಟೋವನ್ನು ಶೇರ್ ಮಾಡಿದ್ದಾರೆ. ಈ ಫೋಟೋದಲ್ಲಿರುವ ಮೋಹನಾಂಗಿ ಯಾರು ಗೊತ್ತಾ?

ಮಲಯಾಳಂ ನಟಿ ಅನುಪಮಾ ಪರಮೇಶ್ವರನ್ ( Anupama Parameswaran ) ತಮ್ಮ ಹಾಟ್‌ಲುಕ್‌ನಿಂದಾನೇ ಹೆಚ್ಚು ಫೇಮಸ್ ಆಗಿದ್ದಾರೆ. ಆಗಾಗ ಬೋಲ್ಡ್‌ ಅವತಾರದಲ್ಲಿ ಕಾಣಿಸ್ಕೊಂಡು ಪಡ್ಡೆ ಹುಡುಗರ ನಿದ್ದೆಗೆಡಿಸುತ್ತಾರೆ. ಇತ್ತೀಚಿಗೆ ಅವರ  ಬಾಲ್ಯದ ಫೋಟೋಗಳು ಸೋಶಿಯಲ್​​ ಮೀಡಿಯಾದಲ್ಲಿ ಸಖತ್​ ವೈರಲ್​ ಆಗಿದೆ.

ನಟಿ ದಕ್ಷಿಣ ಚಿತ್ರರಂಗದಲ್ಲಿ ಅತಿ ಹೆಚ್ಚು ಅನುಯಾಯಿಗಳನ್ನು ಹೊಂದಿದ್ದಾರೆ. ತೆಲುಗು, ತಮಿಳು, ಮಲಯಾಳಂ ಸಿನಿಮಾಗಳಲ್ಲಿ ಅಮೋಘ ಅಭಿನಯದ ಮೂಲಕ ತನಗೊಂದು ಇಮೇಜ್ ಕ್ರಿಯೇಟ್ ಮಾಡಿಕೊಂಡಿದ್ದಾಳೆ. ಸದ್ಯ ಅವರು ಟಾಲಿವುಡ್ ಇಂಡಸ್ಟ್ರಿಯಲ್ಲಿ ಬ್ಯಾಕ್ ಟು ಬ್ಯಾಕ್ ಚಿತ್ರಗಳಲ್ಲಿ ಬ್ಯುಸಿಯಾಗಿದ್ದಾರೆ.

ಪ್ರೇಮಂ ಚಿತ್ರದ ಮೂಲಕ ಪಾದಾರ್ಪಣೆ ಮಾಡಿದರು. ಕೊಡಿ ಚಿತ್ರದ ಮೂಲಕ ತಮಿಳು ಚಿತ್ರರಂಗದಲ್ಲಿ ಆಕೆಯ ಚೊಚ್ಚಲ ಪ್ರವೇಶ ಮಾಡಿದರು. ಪುನೀತ್ ರಾಜ್‌ಕುಮಾರ್ ಜೊತೆಗೆ  ನಟಸಾರ್ವಭೌಮ ಚಿತ್ರದ ಮೂಲಕ ಕನ್ನಡ ಚಿತ್ರರಂಗದಲ್ಲಿ ಪಾದಾರ್ಪಣೆ ಮಾಡಿದರು.

ತೆಲುಗು ಸಿನಿಮಾ ಇಂಡಸ್ಟ್ರಿಯಲ್ಲಿ ಸದ್ಯ ಬಿಝಿಯಾಗಿರುವ ನಟಿಯರಲ್ಲೊಬ್ಬರು ಅನುಪಮಾ ಪರಮೇಶ್ವರನ್. ಪಡ್ಡೆ ಹುಡುಗರ ಹಾಟ್ ಫೇವರಿಟ್‌. ಸೋಷಿಯಲ್ ಮೀಡಿಯಾದಲ್ಲಿ ಸಖತ್ ಆಕ್ಟಿವ್‌. ಮಾಡರ್ನ್‌ ಹಾಗೂ ಟ್ರೆಡಿಶನಲ್ ಡ್ರೆಸ್‌ನಲ್ಲಿ ಆಗಾಗ ಸ್ಟೈಲಿಶ್  ಫೋಟೋಗಳನ್ನು ಶೇರ್ ಮಾಡುತ್ತಿರುತ್ತಾರೆ.

ದಕ್ಷಿಣ ಭಾರತದ ಎಲ್ಲಾ ಭಾಷೆಯ ಸಿನಿಮಾಗಳನ್ನು ಮಾಡಿರುವ ನಟಿ ಅನುಪಮಾ ಆಗಾಗ ಫೋಟೋಶೂಟ್ ಮಾಡಿಸಿಕೊಳ್ಳುತ್ತಾ ಅಭಿಮಾನಿಗಳ ಮನಗೆಲ್ಲುತ್ತಿರುತ್ತಾರೆ. ನಟಿ ಅನುಪಮಾ ಸಿನಿಮಾ ದೊಡ್ಡ ಮಟ್ಟದಲ್ಲಿ ಸದ್ದು ಮಾಡದಿದ್ದರೂ ಅನೇಕ ಸಿನಿಮಾಗಳು ವಿಮರ್ಶಾತ್ಮಕವಾಗಿ ಮೆಚ್ಚುಗೆ ಗಳಿಸಿವೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net