ನಿನ್ನ ಹೆಸರು ನನ್ನ ನಾಲಿಗೆಯಲ್ಲಿದೆ! ಈತ Tattoo ಹಾಕಿಸಿಕೊಂಡಿದ್ದು, ನೋಡಿದ್ರೆ ಬೆಚ್ಚಿ ಬೀಳುತ್ತೀರಿ..

tattoo
Published on

ನವದೆಹಲಿ: (Tattoo)  ಪ್ರತಿದಿನ ಜನರು ಸಾಮಾಜಿಕ ಮಾಧ್ಯಮದ ವಿವಿಧ ವೇದಿಕೆಗಳಲ್ಲಿ ವಿಭಿನ್ನ ವೀಡಿಯೊಗಳನ್ನು ಅಪ್‌ಲೋಡ್ ಮಾಡುತ್ತಾರೆ. ನೀವು ಸೋಶಿಯಲ್​ ಮೀಡಿಯಾ ಬಳಸುತ್ತಿದ್ದರೆ, ನೀವು ಅನೇಕ ವೈರಲ್ ವೀಡಿಯೊಗಳನ್ನು ನೋಡಿರಬೇಕು. ಆದರೆ ಇಂದು ನಾವು ನಿಮಗೆ ತೋರಿಸುತ್ತಿರುವ ವಿಡಿಯೋ ನೋಡಿದ್ರೆ ಖಂಡಿತಾ ನಿಮಗೆ ಆಶ್ಚರ್ಯವಾಗುವುದು ಹೌದು....

ಇದೀಗ ವೈರಲ್ ಆಗುತ್ತಿರುವ ವಿಡಿಯೋದಲ್ಲಿ ವ್ಯಕ್ತಿಯೊಬ್ಬ ತನ್ನ ಪ್ರೀತಿಯನ್ನು ವ್ಯಕ್ತಪಡಿಸಲು ತನ್ನ ಗೆಳತಿ ಅಥವಾ ಹೆಂಡತಿಯ ಹೆಸರಿನ ಟ್ಯಾಟೂ (Tattoo) ಹಾಕಿಸಿಕೊಂಡಿರುವುದು ವಿಡಿಯೋದಲ್ಲಿ ಕಂಡು ಬಂದಿದೆ. ಆದರೆ ಅವರು ಆ ಟ್ಯಾಟೂ ಹಾಕಿಸಿಕೊಂಡಿರುವುದು ಕೈ ಅಥವಾ ಎದೆಯ ಮೇಲೆ ಅಲ್ಲ ಬದಲಾಗಿ ನಾಲಿಗೆಯ ಮೇಲೆ.

ಆ ವ್ಯಕ್ತಿ ತನ್ನ ನಾಲಿಗೆಯ ಮೇಲೆ ನಿಕಿತಾ ಎಂಬ ಹೆಸರಿನ ಹಚ್ಚೆ ಹಾಕಿಸಿಕೊಂಡಿರುವುದು ವೀಡಿಯೋದಲ್ಲಿ ನೋಡಬಹುದಾಗಿದೆ. ಇದರ ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.

ನೀವು ಇದೀಗ ವೀಕ್ಷಿಸಿದ ವೈರಲ್ ವೀಡಿಯೊವನ್ನು @y_iamcrazyy ಹೆಸರಿನ ಖಾತೆಯಿಂದ X ನಲ್ಲಿ ಪೋಸ್ಟ್ ಮಾಡಲಾಗಿದೆ. ವಿಡಿಯೋ ಪೋಸ್ಟ್ ಮಾಡುವಾಗ, 'ಇದು ಹುಚ್ಚುತನದ ಮಿತಿ, ನನ್ನ ಗೆಳತಿಯ ಹೆಸರನ್ನು ನನ್ನ ನಾಲಿಗೆಗೆ ಬರೆದುಕೊಂಡಿದ್ದೇನೆ ಎಂದು ಬರೆಯಲಾಗಿದೆ. ಈ ಸುದ್ದಿ ಬರೆಯುವವರೆಗೂ 15 ಸಾವಿರಕ್ಕೂ ಹೆಚ್ಚು ಮಂದಿ ವಿಡಿಯೋ ವೀಕ್ಷಿಸಿದ್ದು, ಹಲವರು ಕಮೆಂಟ್ ಕೂಡ ಮಾಡಿದ್ದಾರೆ.

ಇದನ್ನು ನೋಡಿದಾಗ ಮೂರ್ಖತನ ಮತ್ತು ಅನಕ್ಷರತೆಗೆ ಯಾವುದೇ ಮಿತಿಯಿಲ್ಲ ಎಂದು ತೋರಿಸುತ್ತದೆ. ಇದನ್ನು ಹುಚ್ಚುತನದ ಉತ್ತುಂಗವೆಂದು ಪರಿಗಣಿಸಲಾಗುತ್ತದೆ. ಯಾಕೆ ಹೀಗೆಲ್ಲ ಮಾಡ್ತೀರಾ? ನೋಡಲು ಸಾಧ್ಯವಾಗ್ತಿಲ್ಲ ಎಂದು ಕಾಮೆಂಟ್​​ ಮಾಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net