ಆಲೆಟ್ಟಿಯಲ್ಲಿ ಸೇತುವೆ ಕಾಮಗಾರಿಗೆ ಗುದ್ದಲಿ ಪೂಜೆ : ಶಾಸಕರ ವಿಶೇಷ ಅನುದಾನದಲ್ಲಿ 1 ಕೋಟಿ ರೂ.ಮಂಜೂರು

New Project (28)
Published on

ಸುಳ್ಯ: ಆಲೆಟ್ಟಿ ಗ್ರಾಮದ ನಾಗಪಟ್ಟಣ ಪಯಸ್ವಿನಿ ನದಿಯ ಸೇತುವೆ ದುರಸ್ತಿ ಕಾಮಗಾರಿಗೆ 75 ಲಕ್ಷ ರೂ.ಮತ್ತು ಬಡ್ಡಡ್ಕ ಕೂರ್ನಡ್ಕ ರಸ್ತೆಯ ಮಧ್ಯೆ ಆಡಿಂಜ ಎಂಬಲ್ಲಿ ಶಿಥಿಲಾವಸ್ಥೆಯಲ್ಲಿದ್ದ ಮುಳುಗು ಸೇತುವೆ ತೆರವುಗೊಳಿಸಿ ಹೊಸ ಸೇತುವೆ ನಿರ್ಮಾಣ ಕಾಮಗಾರಿಗೆ 25 ಲಕ್ಷ ರೂ. ಸೇರಿದಂತೆ ಶಾಸಕರ ವಿಶೇಷ ಅನುದಾನದಲ್ಲಿ 1 ಕೋಟಿ ರೂ.ಮಂಜೂರಾಗಿದ್ದು, ಶನಿವಾರ ಶಾಸಕಿ ಭಾಗೀರಥಿ ಮುರುಳ್ಯ ಗುದ್ದಲಿ ಪೂಜೆ ನೆರವೇರಿಸಿದರು.

ಆಲೆಟ್ಟಿ ಪಂಚಾಯಿತಿ ಅಧ್ಯಕ್ಷೆ ವೀಣಾ ವಸಂತ ಆಲೆಟ್ಟಿ, ತಾಪಂ ಮಾಜಿ ಅಧ್ಯಕ್ಷ ಜಯಪ್ರಕಾಶ್ ಕುಂಚಡ್ಕ, ಉಪಾಧ್ಯಕ್ಷೆ ಕಮಲಾ ನಾಗಪಟ್ಟಣ ಪಂಚಾಯಿತಿ ಸದಸ್ಯರಾದ ದಿನೇಶ್ ಕಣಕ್ಕೂರು, ಶಿವಾನಂದ ರಂಗತ್ತಮಲೆ, ಶಶಿಕಲಾ ದೋಣಿಮೂಲೆ, ಭಾಗೀರಥಿ ಪತ್ತುಕುಂಜ, ಶಂಕರಿ ಕೊಲ್ಲರಮೂಲೆ, ಮಾಜಿ ಸದಸ್ಯ ಸೀತಾರಾಮ ಕೊಲ್ಲರಮೂಲೆ, ಆಲೆಟ್ಟಿ ಸೊಸೈಟಿ ನಿರ್ದೇಶಕ ಸುಧಾಕರ ಆಲೆಟ್ಟಿ, ಗಂಗಾಧರ ಬಡ್ಡಡ್ಕ, ವಕೀಲ ಸತೀಶ್ ಕುಂಭಕೋಡು, ಉದ್ಯಮಿ ಜಗದೀಶ್ ಸರಳಿಕುಂಜ, ಪ್ರದೀಪ್ ಕೊಲ್ಲರಮೂಲೆ, ಪ್ರಣೀತ್ ಕಣಕ್ಕೂರು, ಮಹೇಶ್ ಕುತ್ಯಾಳ, ಹೇಮನಾಥ ಬಡ್ಡಡ್ಕ ದಿನೇಶ್ ಬಡ್ಡಡ್ಕ, ಕಮಲಾಕ್ಷ ಬಡ್ಡಡ್ಕ, ಸುಧಾಕರ ಬೆಳ್ಳೂರು, ನಾಗರಾಜ ಬಡ್ಡಡ್ಕ, ವೈಕುಂಠ ದೋಣಿಮೂಲೆ, ಅನಿಲ್ ಕುಮಾರ್ ಕೆ.ಸಿ, ಗಂಗಾಧರ ಪತ್ತುಕುಂಜ, ನೀಲಕಂಠ ಕೊಲ್ಲರಮೂಲೆ, ಮೋಹನ ಎ.ಕೆ ಅರಂಬೂರು, ನವೀನ್ ನಾಯರ್ ಬಾರ್ಪಣೆ, ಪ್ರವೀಣ್ ಕಲ್ಲೆಂಬಿ, ಸತೀಶ್ ಗೂಡಿಂಜ, ಪುಂಡರೀಕ ಕಾಪುಮಲೆ, ಅರುಣ ಗೂಡಿಂಜ, ಸನತ್ ಕುಂಚಡ್ಕ ಚಂದ್ರಶೇಖರ ಕುಡೆಕಲ್ಲು ಹಾಗೂ ಗುತ್ತಿಗೆದಾರರಾದ ಸಂತೋಷ್ ಮಂಗಳೂರು, ಹರೀಶ್ ಪುತ್ತೂರು, ಚಂದ್ರಶೇಖರ ಸುಳ್ಯ ಮೊದಲಾದವರು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net