ಸರ್ಕಾರದ ಗಮನಕ್ಕೆ ಗ್ಯಾರಂಟಿ ಲೋಪ: ಚಂದ್ರಭೂಪಾಲ

gurrante
ಚಂದ್ರಭೂಪಾಲ ಗ್ಯಾರಂಟಿ ಯೋಜನೆಗಳ ಅನುಷ್ಟಾನ ಕುರಿತು ಸಭೆ ನಡೆಸಿದರು. ಎನ್.ಹೇಮಂತ್ ಇದ್ದರು.
Published on

ಶಿವಮೊಗ್ಗ: ಗ್ಯಾರಂಟಿ ಯೋಜನೆಗಳ ಅನುಷ್ಠಾನದಲ್ಲಿ ಕಂಡು ಬರುತ್ತಿರುವ ಲೋಪಗಳನ್ನು ಸರ್ಕಾರದ ಗಮನಕ್ಕೆ ತರಲಾಗುವುದು. ರಾಜ್ಯಮಟ್ಟದಲ್ಲಿ ಸಭೆ ಕರೆದಾಗ ಸಮಸ್ಯೆಗಳನ್ನು ವಿವರಿಸಲಾಗುವುದು ಎಂದು ಗ್ಯಾರಂಟಿ ಯೋಜನೆ ಅನುಷ್ಠಾನ ಪ್ರಾಧಿಕಾರದ ಜಿಲ್ಲಾಧ್ಯಕ್ಷ ಸಿ.ಎಸ್.ಚಂದ್ರಭೂಪಾಲ ಹೇಳಿದರು.

ಪ್ರಾಧಿಕಾರದ ಸಭೆ ನಡೆಸಿದ ಅವರು, ಪ್ರಾಧಿಕಾರದ ಪದಾಧಿಕಾರಿಗಳು ಗ್ರಾಪಂ ಮತ್ತು ವಾರ್ಡ್‌ವಾರು ಫಲಾನುಭವಿಗಳನ್ನು ಭೇಟಿ ಮಾಡಿ ಕುಂದು ಕೊರತೆಗಳನ್ನು ಆಲಿಸಿ ಪಟ್ಟಿ ಮಾಡಬೇಕು ಎಂದು ತಿಳಿಸಿದರು.

ಪಂಚಾಯಿತಿ, ವಾರ್ಡ್ ಮಟ್ಟದಲ್ಲಿ ಗ್ಯಾರಂಟಿ ಯೋಜನೆ ಅನುಷ್ಠಾನ ನೋಡಿಕೊಳ್ಳಲು ಪ್ರಜಾಪ್ರತಿನಿಧಿಗಳನ್ನು ನೇಮಿಸಲಾಗುವುದು. ಪ್ರತಿ ಯೋಜನೆ ಉಸ್ತುವಾರಿಗೆ ಓರ್ವ ನೋಡಲ್ ಅಧಿಕಾರಿ ನೇಮಿಸಲಾಗುವುದು. ಫಲಾನುಭವಿಗಳ ದೂರು ಸ್ವೀಕರಿಸಿ ಸಾಧ್ಯವಾದರೆ ಸ್ಥಳದಲ್ಲೇ ಬಗೆಹರಿಸಲು ನಮ್ಮ ಗ್ಯಾರಂಟಿ ನಮ್ಮ ಮನೆಗೆ ಎಂಬ ಕಾರ್ಯಕ್ರಮವನ್ನು ಜಿಲ್ಲೆಯಲ್ಲಿ ನಡೆಸಲಾಗುವುದು ಎಂದರು.

ಗ್ಯಾರಂಟಿ ಅನುಷ್ಠಾನ ಸಮಿತಿ ಶಿಕಾರಿಪುರ ಅಧ್ಯಕ್ಷ ಎಸ್.ಪಿ.ನಾಗರಾಜಗೌಡ, ಹೊಸನಗರ ಅಧ್ಯಕ್ಷ ಚಿದಂಬರ, ಶಿವಮೊಗ್ಗ ಅಧ್ಯಕ್ಷ ಎಚ್.ಎಂ.ಮಧು, ಭದ್ರಾವತಿ ಅಧ್ಯಕ್ಷ ಮಣಿ ಶೇಖರ್ ಇತರರಿದ್ದರು. ಜಿಪಂ ಸಿಇಒ ಎನ್.ಹೇಮಂತ್, ಆಹಾರ ಇಲಾಖೆ ಉಪನಿರ್ದೇಶಕ ಅವಿನ್, ಜಿಲ್ಲಾ ಕೌಶಲ್ಯಾಭಿವೃದ್ದಿ ಅಧಿಕಾರಿ ಸುರೇಶ್ ಇತರರಿದ್ದರು

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net