ಜಿಟಿಡಿಸಿ, ಬಿಡಿಎ 101 ಹುದ್ದೆ ಭರ್ತಿಗೆ ಮಾ.24ರಂದು ಪ್ರಕಟವಾಗಲಿದೆ ಅಧಿಸೂಚನೆ

kea
Published on

ಬೆಂಗಳೂರು ಸರ್ಕಾರಿ ಉಪಕರಣಾಗಾರ ಮತ್ತು ತರಬೇತಿ ಕೇಂದ್ರ (ಜಿಟಿಡಿಸಿ) ಹಾಗೂ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ (ಬಿಡಿಎ)ದಲ್ಲಿ ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡುವುದಕ್ಕಾಗಿ ಕರ್ನಾಟಕ ಪರೀಕ್ಷಾ ಪ್ರಾಧಿಕಾರವು (ಕೆಇಎ) ಇದೇ 24ರಂದು ಅಧಿಸೂಚನೆ ಪ್ರಕಟಿಸಲಿದೆ.

ಸರ್ಕಾರಿ ಉಪಕರಣಾಗಾರ ಮತ್ತು ತರಬೇತಿ ಕೇಂದ್ರದಲ್ಲಿ 76 ಹಾಗೂ ಬಿಡಿಎ ನಲ್ಲಿರುವ ಎ್ಡಿಎ, ಎಸ್‌ಡಿಎ 25 ಹುದ್ದೆಗಳಿಗೆ ಅಧಿಸೂಚನೆ ಹೊರಡಿಸಲಾಗುತ್ತದೆ. ಮಾ.24ರಿಂದ ಏ.23ರ ವರೆಗೆ ಅರ್ಜಿ ಭರ್ತಿ ಮಾಡಬಹುದು. ಶುಲ್ಕ ಪಾವತಿಸಲು ಏ.25 ಕೊನೆಯ ದಿನವಾಗಿದೆ.

ಶೈಕ್ಷಣಿಕ ವಿದ್ಯಾರ್ಹತೆ, ಹುದ್ದೆಯ ವಿವರ, ವೇತನ ಶ್ರೇಣಿ, ಅಭ್ಯರ್ಥಿಗಳ ಅರ್ಹತೆ ವಿವರ, ವಯೋಮಿತಿ, ಸ್ಪರ್ಧಾತ್ಮಕ ಪರೀಕ್ಷೆ, ಆಯ್ಕೆ ಪ್ರಕ್ರಿಎಯ ಮತ್ತು ನೇಮಕಾತಿ ವಿವರಗಳನ್ನು ಹಾಗೂ ಪ್ರವರ್ಗವಾರು ಹುದ್ದೆಗಳ ವಿವರಗಳನ್ನು ಅಧಿಸೂಚನೆಯಲ್ಲಿ ತಿಳಿಸಲಾಗುತ್ತದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net