ಡಿಕೆ ಶಿವಕುಮಾರ್ ಸಿಎಂ ಆಗಬೇಕಾದರೆ ಸಿದ್ದರಾಮಯ್ಯ ಬೆಂಬಲ ಬೇಕು: GT Devegowda

GT Devegowda
Published on

ಮೈಸೂರು: ಸಿದ್ದರಾಮಯ್ಯರಂತಹ ಅದೃಷ್ಟ ದರಾಜಕಾರಣಿ ಇನ್ನೊಬ್ಬರಿಲ್ಲ. ಅವರ ಭವಿಷ್ಯ ಮತ್ತು ಅದೃಷ್ಟ ಚೆನ್ನಾಗಿದೆ ಎಂದು ಜೆಡಿಎಸ್​ ಶಾಸಕ ಜಿಟಿ. ದೇವೇಗೌಡ 9GT Devegowda) ಹೇಳಿದ್ದಾರೆ.

ಮೈಸೂರಿನಲ್ಲಿ ಈ ಬಗ್ಗೆ ಮಾತನಾಡಿದ ಜಿಟಿ. ದೇವೇಗೌಡ, ಸಿದ್ದರಾಮಯ್ಯರಂತಹ ಅದೃಷ್ಟ ದರಾಜಕಾರಣಿ ಇನ್ನೊಬ್ಬರಿಲ್ಲ. 1983ರಲ್ಲಿ ಅದೃಷ್ಟದಿಂದ ಶಾಸಕರಾದರು. ಅವರ ಭವಿಷ್ಯ, ಅದೃಷ್ಟ ಗಟ್ಟಿಯಾಗಿಯೇ ಸಾಗಿದೆ. ಸಿದ್ದರಾಮಯ್ಯರಿಗೆ ಇರುವಂತಹ ಅದೃಷ್ಟ ಬೇರೆ ಯಾರಿಗೂ ಇಲ್ಲ ಎಂದು ಹಾಡಿಹೊಗಳಿದ್ದಾರೆ.

ಡಿಕೆ. ಶಿವಕುಮಾರ್ ಅವರು ಮುಂದೊಂದು ದಿನ ಸಿಎಂ ಆಗುತ್ತಾರೆ. ಆದರೆ ಅದು ಯಾವಾಗ ಅಂತಾ ಗೊತ್ತಿಲ್ಲ. ಡಿಕೆ. ಶಿವಕುಮಾರ್ ಸಿಎಂ ಆಗಬೇಕಾದರೆ ಸಿದ್ದರಾಮಯ್ಯ ಬೆಂಬಲ ಬೇಕು. 10 ಶಾಸಕರನ್ನು ಇಟ್ಟುಕೊಂಡು ಯಾರು ಕೂಡ ಸಿಎಂ‌ ಆಗಲು ಸಾಧ್ಯವಿಲ್ಲ. ಕಾಂಗ್ರೆಸ್ ಸರ್ಕಾರ ಬಿದ್ದು ಹೋಗುತ್ತೇ, ಸಿದ್ದರಾಮಯ್ಯ ರಾಜೀನಾಮೆ ಕೊಡುತ್ತಾರೆ ಎಂದು ಕೇಳಿ ಕೇಳಿ ಜನಕ್ಕೂ ಸಾಕಾಗಿದೆ ಇದನ್ನು ಇಲ್ಲಿಗೆ ಬಿಡಿ ಎಂದು ಶಾಸಕ ಜಿಟಿ. ದೇವೇಗೌಡ ಹೇಳಿದ್ದಾರೆ.

Siddu Dk
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net