ಮುಡಾ ಸೈಟುಗಳು ಕೈತಪ್ಪುವ ಭಯದಿಂದ ಮುಖ್ಯಮಂತ್ರಿಗೆ ಜಿ.ಟಿ.ದೇವೇಗೌಡ ಬೆಂಬಲ: ಎನ್.ರವಿಕುಮಾರ್ ಟೀಕೆ

N-Ravikumar-MLA-Twitter-620x391
Published on

ಬೆಂಗಳೂರು: ಮೈಸೂರಿನಲ್ಲಿ ದಸರಾ ಉದ್ಘಾಟನೆ ಸಂದರ್ಭದಲ್ಲಿ ಮುಖ್ಯಮಂತ್ರಿಗಳು ರಾಜೀನಾಮೆ ಕೊಡುವ ಅಗತ್ಯ ಇಲ್ಲ. ಕುಮಾರಸ್ವಾಮಿ ರಾಜೀನಾಮೆ ಕೊಡುತ್ತಾರಾ ಎಂದು ಜೆಡಿಎಸ್ ಶಾಸಕ ಜಿ.ಟಿ.ದೇವೇಗೌಡರು ಕೇಳಿದ್ದಾರೆ.  ಸಿದ್ದರಾಮಯ್ಯರ ಪರ, ಬೆನ್ನೆಲುಬಾಗಿ ನಿಲ್ಲದಿದ್ದರೆ ತಮ್ಮ ಸೈಟುಗಳೂ ಹೋಗಬಹುದು ಎಂದು ಜಿ.ಟಿ.ದೇವೇಗೌಡರಿಗೆ ಭಯ ಆಗಿರಬಹುದು ಎಂದು ವಿಧಾನ ಪರಿಷತ್ ಸದಸ್ಯ ಎನ್.ರವಿಕುಮಾರ್ ಟೀಕಿಸಿದರು.

ಬಿಜೆಪಿ ರಾಜ್ಯ ಕಚೇರಿಯಲ್ಲಿ ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಮುಡಾದಿಂದ ಯಾರೇ ನಿವೇಶನ ಪಡೆದಿದ್ದರೂ ಎಲ್ಲ ನಿವೇಶನಗಳ ಹಂಚಿಕೆ ಕುರಿತು ತನಿಖೆ ನಡೆಯಲಿ. ಮುಖ್ಯಮಂತ್ರಿಗಳು ಇದನ್ನು ಸಿಬಿಐಗೆ ತನಿಖೆಗಾಗಿ ಒಪ್ಪಿಸಬೇಕು ಎಂದು  ಒತ್ತಾಯಿಸಿದರು.

ಸಾಹಿತಿ, ದಸರಾ ಉದ್ಘಾಟಕ ಹಂಪ ನಾಗರಾಜಯ್ಯ ಅವರು ಸಾಹಿತ್ಯ, ದಸರಾ, ಮೈಸೂರು ರಾಜರ ಮಾದರಿ ಸಾಧನೆಗಳ ಕುರಿತು ಮಾತನಾಡಬೇಕಿತ್ತು. ಹೈದರಾಬಾದ್ ನಿಜಾಮರಿಗೆ ಹೋಲಿಸಿದರೆ ಮೈಸೂರಿನ ಒಡೆಯರ್ ಅವರ ಆಡಳಿತ ಅತ್ಯಂತ ಸುವ್ಯವಸ್ಥಿತವಾಗಿತ್ತು. ಅಭಿವೃದ್ಧಿಗೆ ಅದು ಪೂರಕವಾಗಿತ್ತು. ಕೆಆರ್‍ಎಸ್ ಕಟ್ಟಿದವರು ಯಾರು? ಬೆಂಗಳೂರಿಗೆ ಅನೇಕ ಕೊಡುಗೆ ಕೊಟ್ಟವರು ಯಾರು?- ಹೀಗೆ ಅನೇಕ ವಿಚಾರಗಳಲ್ಲಿ ಒಡೆಯರ್ ಅವರ ಆಡಳಿತ ದೇಶಕ್ಕೆ ಮಾದರಿಯಾಗಿತ್ತು ಎಂದು ತಿಳಿಸಿದರು.

ದಸರಾ ಹಬ್ಬಕ್ಕೆ ಕಪ್ಪುಚುಕ್ಕೆ

ಹಂಪನಾ ಅವರು ತಮ್ಮ ಸಾಹಿತ್ಯದ ಪ್ರಶಸ್ತಿ, ಕೃತಿಗಳಿಗೆ ಕಪ್ಪು ಚುಕ್ಕಿ ಆಗುವಂತೆ ಮಾಡಿದ್ದಾರೆ. ಅವರಿಗೆ ಈ ತರಹ ಭಾಷಣ ಮಾಡಲು ನಾಚಿಕೆ ಆಗಬೇಕಿತ್ತು. ಸಿದ್ದರಾಮಯ್ಯ, ಸರ್ಕಾರದ ಬಗ್ಗೆ ಹೊಗಳುಭಟರಂತೆ ಅವರು ಭಾಷಣ ಮಾಡಿದ್ದಾರೆ. ಇದು ದಸರಾಕ್ಕೆ ಕಪ್ಪುಚುಕ್ಕಿ ಇಟ್ಟಂತಾಗಿದೆ ಎಂದು ಟೀಕಿಸಿದರು.

ಸ್ವಾತಂತ್ರ್ಯಕ್ಕಾಗಿ ಹೋರಾಡಿ 28 ವರ್ಷ ಜೈಲುವಾಸ ಅನುಭವಿಸಿದ ಅಪರೂಪದವರಾದ ಸಾವರ್ಕರ್ ಅವರ ಕುರಿತು ಟೀಕಿಸಿದ ದಿನೇಶ್ ಗುಂಡೂರಾವ್ ಕ್ಷಮೆ ಯಾಚಿಸಬೇಕು. ನೇತಾಜಿ ಸುಭಾಷ್‍ಚಂದ್ರ ಬೋಸ್ ಮತ್ತು ಸಾವರ್ಕರ್ ಅವರು ಕ್ರಾಂತಿಕಾರಕ ಹೋರಾಟದಿಂದ ಬ್ರಿಟಿಷರಿಗೆ ಸಿಂಹಸ್ವಪ್ನವಾಗಿದ್ದರು. ಬಾಯಿಗೆ ಬಂದಂತೆ ಮಾತನಾಡಿರುವ ದಿನೇಶ್ ಗುಂಡೂರಾವ್ ಅವರನ್ನು ಸಚಿವ ಸಂಪುಟದಿಂದ ವಜಾಗೊಳಿಸಬೇಕು ಎಂದು ಎನ್.ರವಿಕುಮಾರ್ ಒತ್ತಾಯಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net