

ನವದೆಹಲಿ: ಪ್ರಧಾನ ಮಂತ್ರಿ ನರೇಂದ್ರ ಮೋದಿ ಜಿಎಸ್ಟಿ ದರ ಕಡಿತ ಘೋಷಣೆ ಹಿನ್ನೆಲೆಯಲ್ಲಿ ಜಿಎಸ್ಟಿ ತೆರಿಗೆ ಇಳಿಕೆ ಪ್ರಮಾಣದ ಕುರಿತು ಚರ್ಚೆ ಆರಂಭವಾಗಿದೆ. ಈ ಹಿನ್ನೆಲೆಯಲ್ಲಿ ಜಿಎಸ್ಟಿ ತೆರಿಗೆಯಲ್ಲಿ ಇಳಿಕೆಯಾಗುವ ಪ್ರಮಾಣದ ಕುರಿತು ಮೂಲಗಳ ಪ್ರಕಾರ ಜಿಎಸ್ಟಿ ಸ್ಲ್ಯಾಬ್ಗಳ ಸಂಖ್ಯೆ 4ರಿಂದ 2ಕ್ಕೆ ಇಳಿಯಲಿದೆ. ಸೆಪ್ಟೆಂಬರ್ನಲ್ಲಿ ನಡೆಯಲಿರುವ ಜಿಎಸ್ಟಿ ಮಂಡಳಿಯ ಸಭೆಯಲ್ಲಿ ಜಿಎಸ್ಟಿ ದರದ ಪ್ರಮಾಣ ನಿರ್ಧಾರವಾಗಲಿದೆ.
2021ರ ಸೆಪ್ಟೆಂಬರ್ನಲ್ಲಿ ರಾಜ್ಯದ ಅಂದಿನ ಸಿಎಂ ಬಸವರಾಜ ಬೊಮ್ಮಾಯಿ ಅಧ್ಯಕ್ಷತೆಯಲ್ಲಿ ಸಚಿವರ ತಂಡ ರಚಿಸಲಾಗಿತ್ತು. ಈ ಸಮಿತಿ 2022ರ ಜೂನ್ನಲ್ಲಿ ಜಿಎಸ್ಟಿ ಮಂಡಳಿಗೆ ತನ್ನ ಮಧ್ಯಂತರ ವರದಿ ಸಲ್ಲಿಸಿತ್ತು. ಇದರಲ್ಲಿ ತೆರಿಗೆಯನ್ನು ತರ್ಕಬದ್ಧಗೊಳಿಸಲು ಕೆಲವು ಸರಕುಗಳು ಮತ್ತು ಸೇವೆಗಳ ತೆರಿಗೆ ದರಗಳಲ್ಲಿ ಬದಲಾವಣೆ ತರಲು ಪ್ರಸ್ತಾಪಿಸಿತ್ತು.
ಶೇ.28ರ ಸ್ಲ್ಯಾಬ್ನಲ್ಲಿರುವ ಶೇ.90ರಷ್ಟು ವಸ್ತುಗಳು ಶೇ.18ರ ಸ್ಲ್ಯಾಬ್ಗೆ ವರ್ಗಾವಣೆ
ಶೇ.12ರ ಸ್ಲ್ಯಾಬ್ನಲ್ಲಿರುವ 99 ಪ್ರತಿಶತ ವಸ್ತುಗಳು ಶೇ.5ರ ಸ್ಲ್ಯಾಬ್ಗೆ ವರ್ಗಾವಣೆ
ಐಷಾರಾಮಿ ಮತ್ತು ತಂಬಾಕು ಉತ್ಪನ್ನಗಳ ವೇಳೆ ಶೇ.40ರ ವಿಶೇಷ ತೆರಿಗೆ ಹೇರಿಕೆ
ಶೇ.40ರ ತೆರಿಗೆ ಸ್ಲ್ಯಾಬ್ ವ್ಯಾಪ್ತಿಯಲ್ಲಿ 5-7 ವಸ್ತುಗಳು
ರೆಫ್ರಿಜರೇಟರ್ ಮತ್ತು ಏರ್ ಕಂಡಿಷನರ್, ವಾಷಿಂಗ್ ಮಷಿನ್ ಐಷಾರಾಮಿ ವಸ್ತುಗಳ ಪಟ್ಟಿಯಿಂದ ಹೊರಗೆ
ಪೆಟ್ರೋಲಿಯಂ ಉತ್ಪನ್ನಗಳು ಜಿಎಸ್ಟಿ ವ್ಯಾಪ್ತಿಯಿಂದ ಹೊರಗೆ
ಹೆಚ್ಚು ಕಾರ್ವಿುಕರನ್ನು ಕೇಳುವ ವಜ್ರಗಳು ಮತ್ತು ಅಮೂಲ್ಯ ಕಲ್ಲುಗಳ ತೆರಿಗೆ ಪ್ರಸ್ತುತ ದರದಲ್ಲಿಯೇ ಮುಂದುವರಿಕೆ
ತೆರಿಗೆಯ ಒಟ್ಟು ಪ್ರಮಾಣ ಪ್ರಸ್ತುತ ಶೇ.88ರ ಮಟ್ಟದಲ್ಲಿಯೇ ಉಳಿಯಲಿದೆ.