ಜಿಎಸ್​ಟಿ ಸಂಗ್ರಹ ಶೇ.9ರಷ್ಟು ಹೆಚ್ಚಳ; ಹೀಗಿದೆ ತಜ್ಞರ ಅಭಿಪ್ರಾಯ

ವಿಜಯವಾಣಿ (11)
Published on

ನವದೆಹಲಿ: ದೇಶೀಯ ಬೇಡಿಕೆಯ ಹೆಚ್ಚಳದಿಂದಾಗಿ ಫೆಬ್ರವರಿಯಲ್ಲಿ ಸರಕು ಮತ್ತು ಸೇವಾ ತೆರಿಗೆ (ಜಿಎಸ್​ಟಿ) ಸಂಗ್ರಹವು 1.84 ಲಕ್ಷ ಕೋಟಿ ರೂ.ಗೆ ತಲುಪಿದ್ದು, ಶೇ. 9.1ರಷ್ಟು ಏರಿಕೆಯಾಗಿದೆ. ಕೇಂದ್ರ ಜಿಎಸ್​ಟಿ 35,204 ಕೋಟಿ ರೂ., ರಾಜ್ಯ ಜಿಎಸ್​ಟಿ 43,704 ಕೋಟಿ ರೂ. ಆಗಿದ್ದು, ಒಟ್ಟಾರೆ ಸಂಗ್ರಹವು 90,870 ಕೋಟಿ ರೂ. ಆಗಿದೆ. ಪರಿಹಾರ ತೆರಿಗೆ 13,868 ಕೋಟಿ ರೂ.ಗಳಷ್ಟಾಗಿದೆ ಎಂದು ಶನಿವಾರ ಬಿಡುಗಡೆ ಮಾಡಲಾದ ಅಧಿಕೃತ ಮಾಹಿತಿಯಲ್ಲಿ ತಿಳಿಸಲಾಗಿದೆ.

ದೇಶೀಯ ವಹಿವಾಟುಗಳಿಂದ ಸಂಗ್ರಹವಾದ ಜಿಎಸ್​ಟಿಯ ಪ್ರಮಾಣವು 1.42 ಲಕ್ಷ ಕೋಟಿ ರೂ. ಆಗಿದ್ದು, ಶೇ. 10.2ರಷ್ಟು ವೃದ್ಧಿ ದಾಖಲಿಸಿದೆ. ಆಮದಿನಿಂದ ಬಂದಿರುವ ಜಿಎಸ್​ಟಿ 41,702 ಕೋಟಿ ರೂ. ಆಗಿದ್ದು, ಶೇ. 5.4ರಷ್ಟು ಹೆಚ್ಚಾಗಿದೆ. ಒಟ್ಟು ಮರುಪಾವತಿಯು 20,889 ಕೋಟಿ ರೂ.ಗಳಾಗಿದ್ದು, ಕಳೆದ ವರ್ಷದ ಇದೇ ಅವಧಿಗೆ ಹೋಲಿಸಿದರೆ ಶೇ. 17.3ರಷ್ಟು ಹೆಚ್ಚಾಗಿದೆ. ನಿವ್ವಳ ಜಿಎಸ್​ಟಿ ಸಂಗ್ರಹವು ಫೆಬ್ರವರಿಯಲ್ಲಿ 1.63 ಲಕ್ಷ ಕೋಟಿ ರೂ.ಗೆ ತಲುಪಿ, ಶೇ. 8.1ರ ವೃದ್ಧಿ ದಾಖಲಿಸಿದೆ.

ಒಟ್ಟು ಮತ್ತು ನಿವ್ವಳ ಜಿಎಸ್​ಟಿ ಆದಾಯವು 2024ರ ಫೆಬ್ರವರಿಯಲ್ಲಿ ಕ್ರಮವಾಗಿ 1.68 ಲಕ್ಷ ಕೋಟಿ ರೂ. ಮತ್ತು 1.50 ಲಕ್ಷ ಕೋಟಿ ರೂ. ಇತ್ತು. 2025ರ ಫೆಬ್ರವರಿಯಲ್ಲಿ ಒಟ್ಟು ಜಿಎಸ್​ಟಿ ಸಂಗ್ರಹವು 1.84 ಲಕ್ಷ ಕೋಟಿ ರೂ. ಆಗಿದ್ದು, ಇದು 2025ರ ಜನವರಿಯಲ್ಲಾದ 1.96 ಲಕ್ಷ ಕೋಟಿ ರೂ. ಸಂಗ್ರಹಕ್ಕೆ ಹೋಲಿಸಿದರೆ ಕಡಿಮೆ.

ಮಹಾಕುಂಭ ಮೇಳದಲ್ಲಿ ಆಗಿರುವ ವಹಿವಾಟುಗಳು ಮುಂದಿನ ತ್ರೖೆಮಾಸಿಕ ಅವಧಿಯ ಫಲಿತಾಂಶದಲ್ಲಿ ಗಣನೆಗೆ ಬರುತ್ತವೆ. ಆಗ ಜಿಎಸ್​ಟಿ ಸಂಗ್ರಹ ಇನ್ನೂ ಹೆಚ್ಚಿನ ಪ್ರಮಾಣವನ್ನು ತೋರಿಸಬಹುದು. | ಅಭಿಷೇಕ್ ಜೈನ್ ಪರೋಕ್ಷ ತೆರಿಗೆ ಮುಖ್ಯಸ್ಥ, ಕೆಪಿಎಂಜಿ ಜಿಎಸ್​ಟಿ ಸಂಗ್ರಹದ ಅಂಕಿ ಅಂಶಗಳನ್ನು ನೋಡಿದರೆ, ಭಾರತದ ಆರ್ಥಿಕತೆಯು ಜಾಗತಿಕ ಆರ್ಥಿಕ ಸವಾಲುಗಳನ್ನು ಸಮರ್ಥವಾಗಿ ಎದುರಿಸುತ್ತಿರುವುದು ಗೊತ್ತಾಗುತ್ತದೆ. ಜಿಎಸ್​ಟಿ ಸಂಗ್ರಹದ ನಿರಂತರ ಏರಿಕೆಯು ಭಾರತ ಆರ್ಥಿಕವಾಗಿ ಪುನರು ಜ್ಜೀವನಗೊಳ್ಳುತ್ತಿದೆ ಎಂಬುದಕ್ಕೆ ಸಾಕ್ಷಿಯಾಗಿದೆ. | ಸೌರಭ್ ಅಗರ್ವಾಲ್ ಅರ್ನ್ಸ್್ಟ ಆಂಡ್ ಯಂಗ್ ತೆರಿಗೆ ಪಾಲುದಾರ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net