ಯುವತಿಯರಿಗೆ ಅಸಭ್ಯ ಮೆಸೇಜ್​ ಕಳಿಸುತ್ತಿದ್ದ ಮೊಬೈಲ್ ಅಂಗಡಿಯ ಯುವಕನಿಗೆ ಬಿತ್ತು ಹಿಗ್ಗಾಮುಗ್ಗಾ ಗೂಸ!

WhatsApp Image 2024-04-27 at 5.08.07 PM
Published on

ಹಲ್ದ್ವಾನಿ: ಸಾರ್ವಜನಿಕ ಸ್ಥಳಗಳಲ್ಲಿ ಯುವತಿಯರ ಜತೆ ಅಸಭ್ಯವಾಗಿ ವರ್ತಿಸುವುದು, ಅಶ್ಲೀಲ ರೀತಿಯಲ್ಲಿ ತೊಂದರೆ ಕೊಡುವ ಪುಂಡರಿಗೆ ಮಹಿಳೆಯರೇ ತಕ್ಕ ಪಾಠ ಕಲಿಸುತ್ತಾರೆ. ಮುಂದೆ ಯಾವ ಹೆಣ್ಣುಮಕ್ಕಳಿಗೂ ಈ ರೀತಿ ಮಾಡದಂತೆ ಎಚ್ಚರಿಸಿ, ಬುದ್ದಿ ಕಲಿಸುತ್ತಾರೆ. ಆದರೆ, ಕೆಲವರು ಮಾತ್ರ ಯಾರಿಗೂ ಹೇಳದೆ, ಇಂತಹ ಹಿಂಸೆಯನ್ನು ಅನುಭವಿಸುತ್ತಿರುತ್ತಾರೆ.

ಇತ್ತೀಚಿನ ದಿನಗಳಲ್ಲಿ ಯುವತಿಯರು ಅಥವಾ ಮಹಿಳೆಯರೊಂದಿಗೆ ಅಸಭ್ಯವಾಗಿ ವರ್ತಿಸುವ ಕಿಡಿಗೇಡಿಗಳು, ಅವರ ಮೊಬೈಲ್ ನಂಬರ್ ಅನ್ನು ಹೇಗಾದರೂ ತಿಳಿದು, ಅದಕ್ಕೆ ಅಸಭ್ಯ ಹಾಗೂ ಅಶ್ಲೀಲ ಸಂದೇಶಗಳನ್ನು ಕಳಿಸುವ ಮೂಲಕ ಅವರಿಗೆ ಮಾನಸಿಕವಾಗಿ ಹಿಂಸಿಸುತ್ತಾರೆ. ಇಂತಹದ್ದೇ ಘಟನೆಯೊಂದು ಉತ್ತರಾಖಂಡದ ಹಲ್ದ್ವಾನಿಯಲ್ಲಿ ನಡೆದಿದ್ದು, ಘಟನೆಯ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ಹರಿದಾಡಿದೆ.

ಮೊಬೈಲ್ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದ ಯುವಕನೊಬ್ಬ, ತನ್ನ ಅಂಗಡಿಗೆ ಬರುತ್ತಿದ್ದ ಯುವತಿಯರ ಮೊಬೈಲ್​ ಸಂಖ್ಯೆಯನ್ನು ಸಂಗ್ರಹಿಸಿ, ಆ ದೂರವಾಣಿ ನಂಬರ್​ಗೆ ಅಸಭ್ಯ ಸಂದೇಶಗಳನ್ನು ಕಳಿಸುತ್ತಿದ್ದನು. ಇದನ್ನು ಗಂಭೀರವಾಗಿ ಗಮನಿಸಿದ ನಗರದಲ್ಲಿ ವಾಸವಿರುವ ಯುವಕರ ಗುಂಪೊಂದು, ಆತನ ಅಂಗಡಿಗೆ ನುಗ್ಗಿ, ಹಿಗ್ಗಾಮುಗ್ಗಾ ಥಳಿಸಿ, ಬಳಿಕ ಸ್ಥಳೀಯ ಪೊಲೀಸರಿಗೆ ಒಪ್ಪಿಸಿದ್ದಾರೆ. ಸದ್ಯ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ,(ಏಜೆನ್ಸೀಸ್).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net