ಸೆಕೆಂಡ್​ ಹ್ಯಾಂಡ್ ಮಂಚ ಕೊಟ್ಟ ಮಾವ- ಮದುವೆ ನಿರಾಕರಿಸಿದ ವರ

wedding
Published on

ಮುಂಬೈ: ವಧುವಿನ ಅಪ್ಪ ಸೆಕೆಂಡ್​​ ಹ್ಯಾಂಡ್​ ಮಂಚವನ್ನು ನೀಡಿದ್ದಾರೆಂದು ವರ ವಿವಾಹವನ್ನು ನಿರಾಕರಿಸಿದ ಘಟನೆ ಹೈದರಾಬಾದ್​​ನಲ್ಲಿ ನಡೆದಿದೆ.

ಹೈದರಾಬಾದ್‌ನ ಚಂದ್ರಯ್ಯನಗುಟ್ಟದ ಬಳಿ ಮೊಹಮ್ಮದ್ ಜಕ್ರಿಯಾ ಎಂಬ ವ್ಯಕ್ತಿ ವಿವಾಹ ನಡೆಯುತ್ತಿತ್ತು. ಮದುವೆ ಸಮಯ ಸಮೀಪಿಸುತ್ತಿರುವಾಗ, ವಧುವಿನ ಸಂಬಂಧಿಕರು ತನಗೆ ಸೆಕೆಂಡ್ ಹ್ಯಾಂಡ್ ಮಂಚ, ಹಾಸಿಗೆಯನ್ನು ಕೊಟ್ಟಿದ್ದಾರೆ ಎಂದು ತಿಳಿದ ವರ ಮದುವೆಯಾಗಲು ನಿರಾಕರಿಸಿ ಮಂಟಪದಿಂದ ಹೊರಗೆ ಹೋಗಿದ್ದಾನೆ.

ಈ ವಿಚಾರವಾಗಿ ಬೇಸರಗೊಂಡ ವಧುವಿನ ತಂದೆ ಚಂದ್ರಯ್ಯನಗುಟ್ಟ ಪೊಲೀಸ್​​ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಪೊಲೀಸರು ವರನ ಮನವೋಲಿಸುವ ಕೆಲಸ ಮಾಡಿದ್ದಾರೆ. 'ಇಷ್ಟು ಸಣ್ಣ ವಿಚಾರಕ್ಕೆ ಮದುವೆ ಕ್ಯಾನ್ಸಲ್​​ ಮಾಡಿದ್ದಾನೆ ಈತನನ್ನು ನಾನು ಮದುವೆಯಾಗಲಾರೆ' ಎಂದು ಹೇಳಿ ವಧು ಟ್ವಿಸ್ಟ್​​ ಕೊಟ್ಟಿದ್ದಾಳೆ. (ಏಜೆನ್ಸೀಸ್)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net