

Viral Post: ನಾವು ಇತ್ತೀಚಿನ ಮದುವೆ ಕಾರ್ಡ್ಗಳು ಕಲರ್ ಫುಲ್ ಆಗಿ ವಧುವರರ ಫೋಟೋಗಳಿಂದ ಕೂಡಿರುವುದನ್ನು ನೋಡಿದ್ದೇವೆ. ಸಾಮಾನ್ಯವಾಗಿ ಮದುವೆ ಕಾರ್ಡ್ಗಳನ್ನು ನಮ್ಮ ಸಂಬಂಧಿಕರು, ಸ್ನೇಹಿತರು ಮತ್ತು ನಮ್ಮ ಆತ್ಮೀಯರನ್ನು ಮದುವೆಗೆ ಆಹ್ವಾನಿಸುವುದಕ್ಕಾಗಿ ಮುದ್ರಿಸುತ್ತೇವೆ. ಅದರಲ್ಲಿ ಮುದುವೆಗೆ ಸಂಬಂಧಿಸಿದ ಎಲ್ಲಾ ಮಾಹಿತಿಗಳು ಸಹ ಇರುತ್ತದೆ. ಆದರೆ ಇಲ್ಲೊಂದು ವಿಚಿತ್ರವಾದ ಮದುವೆ ಕಾರ್ಡ್ ಸೋಶಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗುತ್ತಿದೆ. ಹಾಗಾದ್ರೆ ಆ ಮದುವೆ ಕಾರ್ಡ್ ಅಷ್ಟೊಂದು ವೈರಲ್ ಆಗೋದಕ್ಕೆ ಕಾರಣವೇನು ಗೊತ್ತಾ? ಇಲ್ಲಿದೆ ನೋಡಿ.
ಸಾಮನ್ಯವಾಗಿ ಮದುವೆ ಕಾರ್ಡ್ನಲ್ಲಿ ವರನ ಹೆಸರಿನ ಜೊತೆಗೆ ಅವನ ಅರ್ಹತೆಗಳನ್ನು ಬರೆದಿರುವುದನ್ನು ನಾವು ನೋಡಿದ್ದೇವೆ, ಆದರೆ ಈ ಮದುವೆ ಕಾರ್ಡ್ನಲ್ಲಿ ವರನ ಹೆಸರನ್ನು ಮಹಾವೀರ್ ಕುಮಾರ್ ಎಂದು ಬರೆಯುವುದರ ಜೊತೆಗೆ ಮದುಮಗ Physical Qualified ಎಂದು ಪ್ರಿಂಟ್ ಮಾಡಿದ್ದಾರೆ.
ನೆಟ್ಟಿಗರ ಪ್ರತಿಕ್ರಿಯೆ ಈ ಪೋಸ್ಟ್ ಇನ್ಸ್ಟಾಗ್ರಾಮ್ನಲ್ಲಿ @comedy.jokesofficial ಹೆಸರಿನ ಖಾತೆಯಿಂದ ಹಂಚಿಕೊಳ್ಳಲಾಗಿದೆ. ವೈರಲ್ ಆಗಿರುವ ಮದುವೆ ಕಾರ್ಡ್ ನೋಡಿದ ನಂತರ ನೆಟ್ಟಿಗರು ಆ ಪೋಸ್ಟ್ಗೆ ಸಖತ್ ಕಾಮೆಂಟ್ ಮಾಡಿದ್ದಾರೆ. ಒಬ್ಬ ನೆಟ್ಟಿಗ "ನನ್ನ ಮದುವೆ ಕಾರ್ಡ್ನಲ್ಲಿ ಅರ್ಹತೆಯಾಗಿ 'ಯುಪಿಎಸ್ಸಿ ಫಾರ್ಮ್ ಭರ ಹುನ್' ಎಂದು ಬರೆಯುತ್ತೇನೆ ಎಂದರೆ, ಮತ್ತೊಬ್ಬ"ನಾನು ಸಬ್-ಇನ್ಸ್ಪೆಕ್ಟರ್ ಆಗಿದ್ದೇನೆ ಎಂದು ಕನಸು ಕಂಡಿದ್ದೆ. ನಮ್ಮ ಮದುವೆ ಕಾರ್ಡ್ನಲ್ಲಿ 'ನನ್ನ ಕನಸಿನಲ್ಲಿ ಉತ್ತರ ಪ್ರದೇಶದಲ್ಲಿ ಸಬ್-ಇನ್ಸ್ಪೆಕ್ಟರ್ ಆದೆ' ಎಂದು ಬರೆಯಬಹುದೇ?" ಎಂದಿದ್ದಾನೆ. ಇನ್ನೊಬ್ಬ ನೆಟ್ಟಿಗ "ನಾನು ಗ್ರೂಪ್ ಡಿ ಗಾಗಿ ಫಾರ್ಮ್ ಅನ್ನು ಭರ್ತಿ ಮಾಡಿದ್ದೇನೆ, ನಾನು ಇದನ್ನು ಬರೆಯುತ್ತೇನೆ." ಎಂದು ವರನನ್ನು ಗೇಲಿಮಾಡಿದ್ದಾರೆ.(ಏಜೆನ್ಸೀಸ್)