ಕೇಳಿದ ವರದಕ್ಷಿಣೆ ಕೊಡಲೇಬೇಕು.. ಇಲ್ಲವಾದ್ರೆ ಮದುವೆ ಕ್ಯಾನ್ಸಲ್..!

dowry
Published on

ನವದೆಹಲಿ: ಮದುವೆ ಸೀಸನ್ ಪ್ರಾರಂಭವಾಗಿದೆ. ಗಂಡಿಗೆ ಹೆಣ್ಣು... ವರನಿಗೆ ಹೊಂದಿಕೆ ಆಗುವ ವಧುವನ್ನು ಹುಡುಕುವುದೇ ಇಂದಿನ ದಿನಗಳಲ್ಲಿ ದೊಡ್ಡ ಸವಾಲಾಗಿದೆ.  ಹೀಗಿರುವಾಗ ಒಂದು ವೇಳೆ ಮದುವೆ ಫಿಕ್ಸ್​​ ಆದರೂ  ಅದ್ದೂರಿಯಾಗಿ ಮದುವೆ ಮಾಡುವುದು ಹೇಗೆ? ಎನ್ನುವ ಚಿಂತೆ ಹೆಣ್ಣು ಹೆತ್ತವರಿಗೆ ಇರುತ್ತದೆ. ಇದರ ಮಧ್ಯೆ ವರದಕ್ಷಿಣೆ ಸಮಸ್ಯೆ ಕೂಡಾ ಕಾಡುತ್ತದೆ. ವರದಕ್ಷಿಣೆಯಿಂದ ಎಷ್ಟೋ ಮದುವೆಗಳು ನಿಂತಿರುವ ಉದಾಹರಣೆಗಳಿವೆ. ಇಂತಹದ್ದೆ ಒಂದು ವಿಡಿಯೋ ಸೋಶಿಯಲ್​​ ಮೀಡಿಯಾದಲ್ಲಿ ವೈರಲ್​ ಆಗಿದೆ.

ವೈರಲ್ ಆಗಿರುವ ಈ ವಿಡಿಯೋದಲ್ಲಿ ಮದುವೆ ಮಂಟಪದಲ್ಲಿ ವರನೊಬ್ಬ ಮದುವೆಯನ್ನು ನಿಲ್ಲಿಸಿ ಹುಡುಗಿಯ ಮನೆಯವರ ಜೊತೆ ವರದಕ್ಷಿಣೆ ಬಗ್ಗೆ ಮಾತನಾಡುತ್ತಿರುವುದನ್ನು ನೀವು ನೋಡಬಹುದು. ಮದುವೆಗೂ ಮುನ್ನ 2 ಲಕ್ಷ ರೂ.ಗಳ ಬಗ್ಗೆ ಚರ್ಚೆ ನಡೆದಿದ್ದು, ಅದರಲ್ಲಿ 50 ಸಾವಿರ ರೂ. ಬಂದಿದ್ದು, ಇದುವರೆಗೂ 1.5 ಲಕ್ಷ ರೂ. ಬಂದಿಲ್ಲ ಎಂದು ಹೇಳುತ್ತಿದ್ದಾರೆ. 1.5 ಲಕ್ಷ ಸಿಗುವವರೆಗೂ ಮದುವೆಯಾಗುವುದಿಲ್ಲ ಎಂದಿದ್ದಾರೆ.

ಇದಾದ ಮೇಲೆ ಹುಡುಗಿಯ ಮನೆಯವರು ವರನಿಗೆ ಈಗಲೇ ಮದುವೆಯಾಗಿ ನಿಮಗೆ 1.5 ಲಕ್ಷ ರೂ. ನೀಡಿದ್ದಾರೆ. ಮದುವೆ ನಡೆದಿದೆ ಎನ್ನಲಾಗಿದೆ. ಆದರೆ ಈ ಘಟನೆ ಎಲ್ಲಿ ನಡೆದಿದ್ದು ಎನ್ನುವ ಮಾಹಿತಿ ಲಭ್ಯವಿಲ್ಲ.

ಸೋಶಿಯಲ್​​ ಮೀಡಿಯಾ ಬಳಕೆದಾರರೊಬ್ಬರು ಸಾಮಾಜಿಕ ಮಾಧ್ಯಮ ವೇದಿಕೆ ಇನ್​ಸ್ಟಾಗ್ರಾಮ್​​ನಲ್ಲಿ ಈ ವೀಡಿಯೊವನ್ನು ಹಂಚಿಕೊಂಡಿದ್ದಾರೆ. ಇದುವರೆಗೆ 3 ಲಕ್ಷಕ್ಕೂ ಹೆಚ್ಚು ಮಂದಿ ವೀಕ್ಷಿಸಿದ್ದಾರೆ. ಇದೇ ವೇಳೆ ಹಲವರು ಈ ಬಗ್ಗೆ ತಮ್ಮ ಅಭಿಪ್ರಾಯವನ್ನೂ ವ್ಯಕ್ತಪಡಿಸಿದ್ದಾರೆ.

ವೈರಲ್ ಆಗಿರುವ ಈ ವಿಡಿಯೋಗೆ ಜನ ಸಖತ್ ಪ್ರತಿಕ್ರಿಯೆ ನೀಡುತ್ತಿದ್ದಾರೆ.  ‘ನಮಗೆ ಹೆಣ್ಣು ಕೊಡಿ, ಸಾಕು’ ಎಂದು ಬರೆದಿದ್ದಾರೆ. ಮತ್ತೊಬ್ಬ ಬಳಕೆದಾರರು ತಮಾಷೆಯ ಕಾಮೆಂಟ್ ಮಾಡಿದ್ದಾರೆ, 'ಇದನ್ನೆಲ್ಲ ನೋಡಿದರೆ ಮದುವೆ ಬೇಡಾ ಅನದನಿಸುತ್ತಿದೆ. ಇದು ಮದುವೆ ನಾ ವ್ಯಾಪಾರನಾ? ಎಂದು ಪ್ರಶ್ನೆ ಮಾಡುತ್ತಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net