ಹಸೆಮಣೆ ಏರಬೇಕಿದ್ದ ವರ ದಿಬ್ಬಣ ಸಮೇತ ಬೀದಿಗಿಳಿದ; ಅದಕ್ಕೆ ಕಾರಣ ಒಬ್ಬಿಬ್ಬರಲ್ಲ..!

Groom
Published on

ಉತ್ತರಪ್ರದೇಶ: ಅದೊಂದು ಮದುವೆ ಸಮಾರಂಭ. ಕಲ್ಯಾಣಮಂಟಪಕ್ಕೆ ವರ ದಿಬ್ಬಣ ಸಮೇತ ಹೊರಟಿದ್ದೇನೋ ಸರಿ. ಆದರೆ ಮಾರ್ಗಮಧ್ಯೆ ವಾಹನದಿಂದ ಇಳಿದ ವರ, ದಿಬ್ಬಣ ಸಮೇತ ರಸ್ತೆಗಿಳಿದಿದ್ದಾನೆ. ಹಸೆಮಣೆ ಏರಬೇಕಿದ್ದ ಮದುಮಗ ಹೀಗೆ ಬೀದಿಗಳಿಯಲು ಕಾರಣ ಒಬ್ಬಿಬ್ಬರಲ್ಲ!

ಹೌದು.. ಇಂಥದ್ದೊಂದು ಸನ್ನಿವೇಶ ಉತ್ತರಪ್ರದೇಶದ ಮೀರತ್​ನಲ್ಲಿ ವರದಿಯಾಗಿದೆ. ಶುಕ್ರವಾರ ನಡೆಯಲಿದ್ದ ಮದುವೆಗೆ ವಾಹನದಲ್ಲಿ ಬಂಧು-ಬಳಗದೊಂದಿಗೆ ಸಾಗುತ್ತಿದ್ದ ವರ ಸ್ವಲ್ಪಹೊತ್ತಿನಲ್ಲೇ ಚಿಂತೆಗೀಡಾಗಿದ್ದಾನೆ. ಇನ್ನು ಹೀಗೇ ಇದ್ದರೆ ಆಗುವುದಿಲ್ಲ ಎಂದರಿತ ಆತ, ದಿಬ್ಬಣ ಸಮೇತ ಬೀದಿಗಿಳಿದಿದ್ದಾನೆ. ಸಾವಿರಾರು ಜನರ ಕಾರಣದಿಂದ ವರನೊಬ್ಬ ಹೀಗೆ ಬೀದಿಯಲ್ಲಿ ನಡೆದು ಸಾಗುವಂತಾಗಿದೆ.

ಕೇಂದ್ರ ಸರ್ಕಾರದ ಕೃಷಿ ಕಾನೂನುಗಳ ಹಿನ್ನೆಲೆಯಲ್ಲಿ ನಡೆಯುತ್ತಿರುವ ಬೃಹತ್ ಪ್ರತಿಭಟನೆ ಇದಕ್ಕೆ ಕಾರಣವಾಗಿದೆ. ದೇಶದ ವಿವಿಧ ಭಾಗಗಳಿಂದ ಸಾವಿರಾರು ಸಂಖ್ಯೆಯಲ್ಲಿ ರೈತರು ದೆಹಲಿಯತ್ತ ಸಾಗುತ್ತಿರುವುದರಿಂದ ಮೀರತ್ ರಸ್ತೆಯಲ್ಲಿ ಭಾರಿ ಟ್ರಾಫಿಕ್ ಜಾಮ್​ ಉಂಟಾಗಿದೆ. ರೈತರ ದೆಹಲಿ ಚಲೋ ಹಿನ್ನೆಲೆಯಲ್ಲಿ ದೆಹಲಿ-ಪಾಣಿಪತ್ ಹೆದ್ದಾರಿ ಬ್ಲಾಕ್​ ಆಗಿದೆ. ಉತ್ತರಪ್ರದೇಶ ಮಾತ್ರವಲ್ಲದೆ ಪಂಜಾಬ್, ಹರಿಯಾಣದಿಂದಲೂ ರೈತರು ದೊಡ್ಡ ಪ್ರಮಾಣದಲ್ಲಿ ದೆಹಲಿಯತ್ತ ಸಾಗುತ್ತಿದ್ದಾರೆ. ಪರಿಣಾಮ ಹಲವೆಡೆ ವಾಹನದಟ್ಟಣೆ, ಸಂಚಾರ ಅಸ್ತವ್ಯಸ್ತದಂಥ ಪ್ರಕರಣಗಳು ವರದಿಯಾಗಿವೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net