ಮದುವೆಯಾದ 24 ಗಂಟೆಯಲ್ಲಿ ವರ ಸಾವು; ವಧು ಮಾಡಿದ್ದೇನು?

wedding
Published on

ತೆಲಂಗಾಣ: ಹಲವು ಕನಸುಗಳೊಂದಿಗೆ ದಾಂಪತ್ಯ ಜೀವನಕ್ಕೆ ಕಾಲಿಟ್ಟ ವರ, ಮದುವೆಯಾದ 24 ಗಂಟೆಗೂ ಮುನ್ನವೇ ಮರಳಿ ಬಾರದ ಲೋಕಕ್ಕೆ ತೆರಳಿದ್ದಾನೆ.

ನಿರಂಜನ್ ಮೃತ ಯುವಕ. ಸಿದ್ದಿಪೇಟ್ ಮಂಡಲದ ವೆಂಕಟಾಪುರ ಗ್ರಾಮದ ನಿವಾಸಿಯಾಗಿದ್ದ ಈತ ನಿಜಾಮಾಬಾದ್ ಜಿಲ್ಲೆಯ ಹುಡುಗಿಯನ್ನು ಮದುವೆಯಾಗಿದ್ದಾನೆ. ನಿರಂಜನ್ ಅವರು ಸಿದ್ದಿಪೇಟೆಯ ಇಂದಿರಾನಗರ ಸರ್ಕಾರಿ ಶಾಲೆಯಲ್ಲಿ ಶಿಕ್ಷಕರಾಗಿ ಕೆಲಸ ಮಾಡುತ್ತಿದ್ದನು.

ಎಲ್ಲರಂತೆ ತಾನೂ ಕೂಡ ವೈವಾಹಿಕ ಜೀವನಕ್ಕೆ ಕಾಲಿಟ್ಟ ಯುವಕ ಶನಿವಾರ ಕುಟುಂಬದವರು, ಸ್ನೇಹಿತರು, ಬಂಧುಗಳ ಸಮ್ಮುಖದಲ್ಲಿ ಹಬ್ಬದ ವಾತಾವರಣದಲ್ಲಿ ವಿವಾಹವಾದನು. ಮದುವೆಯ ನಂತರ ನಿರಂಜನ್ ಮನೆಯಲ್ಲಿ ಸೋಮವಾರ ಆರತಕ್ಷತೆ ಏರ್ಪಡಿಸಿದ್ದರು. ಈ ವೇಳೆ ನಿರಂಜನ್​ ಫೋನ್​​ನಲ್ಲಿ ಮನೆಯ ಡೆಕೋರೇಶನ್ ಲೈಟಿಂಗ್ ವೈರ್ ಗಳನ್ನು ಸರಿಪಡಿಸುವಾಗ ವಿದ್ಯುತ್ ಶಾಕ್ ತಗುಲಿದೆ. ಇದರಿಂದ ನಿರಂಜನ್ ಕೆಳಗೆ ಬಿದ್ದು, ನಿರಂಜನ್ ಗಾಯಗೊಂಡಿದ್ದಾನೆ.

ನಿರಂಜನ್ ಕೆಳಗೆ ಬಿದ್ದಿದ್ದನ್ನು ಕಂಡ ಮನೆಯವರು ಕೂಡಲೇ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಆದರೆ ಅದಾಗಲೇ ಮೃತಪಟ್ಟಿರುವುದಾಗಿ ವೈದ್ಯರು ತಿಳಿಸಿದ್ದರಿಂದ ನಿರಂಜನ್ ಕುಟುಂಬಸ್ಥರು ಹಾಗೂ ವಧುವಿನ ಬಂಧುಗಳು ದುಃಖದಲ್ಲಿ ಮುಳುಗಿದ್ದಾರೆ.

ಮದುವೆಯಾಗಿ 24 ಗಂಟೆ ಕಳೆಯುವಷ್ಟರಲ್ಲಿ ಪತಿ ಸಾವನ್ನಪ್ಪಿದ್ದರಿಂದ ವಧುವಿನ ದುಃಖ ವರ್ಣಿಸಲಾಗದು. ಘಟನೆ ಕುರಿತು ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net