ಕಿರಾಣಿ ಅಂಗಡಿ ಮಾಲೀಕನಿಗೆ ಬಂತು 141 ಕೋಟಿ ರೂ, ತೆರಿಗೆ ನೋಟಿಸ್​​! ಮುಂದಾಗಿದ್ದೇನು?

photo-2025-09-01t204330409-68b5b820473b5
Published on

ಉತ್ತರಪ್ರದೇಶದ ಬುಲಂದರ್​ ಷಾ ನಲ್ಲಿರುವ ಸಣ್ಣ ಅಂಗಡಿ(ಕಿರಾಣಿ) ಮಾಲೀಕನಿಗೆ ಬರೊಬ್ಬರಿ 141 ಕೋಟಿ ರೂ, ತೆರಿಗೆ ನೋಟಿಸ್​ ಬಂದಿರುವ ಬಗ್ಗೆ ಸೋಮವಾರ(ಸೆ.1) ಸುದ್ದಿಸಂಸ್ಥೆ ಪಿಟಿಐ ವರದಿ ಮಾಡಿದೆ. ಇನ್ನು ತೆರಿಗೆ ನೋಟಿಸ್​ ಪಡೆದ ಸ್ವೀಕರಿಸಿದ ಬಳಿಕ ಅಂಗಡಿ ಮಾಲೀಕ ಸುಧೀರ್ ದಿಗ್ಭ್ರಮೆಗೊಂಡಿದ್ದಾನೆ.

ಮಾಲೀಕ ಹೇಳಿದ್ದೇನು?

ಪಿಟಿಐ ವರದಿ ಪ್ರಕಾರ, ದೆಹಲಿಯಲ್ಲಿ ಆರು ಕಂಪನಿಗಳನ್ನು ಸ್ಥಾಪಿಸಲು ನನ್ನ ಪ್ಯಾನ್​ ಕಾರ್ಡ್​(PAN) ದುರುಪಯೋಗ ಮಾಡಿಕೊಳ್ಳಲಾಗಿದೆ ಎಂದು ಮಾಲೀಕ ಸುಧೀರ್ ಆರೋಪಿಸಿದ್ದಾರೆ.

ಖುರ್ಜಾದ ನಯಗಂಜ್​ ಪ್ರದೇಶದಲ್ಲಿ ತಮ್ಮ ಮನೆಯಲ್ಲಿ ಸಾಧಾರಣ ದಿನಸಿ ಅಂಗಡಿ ಇಟ್ಟುಕೊಂಡು ಜೀವನ ಮಾಡುತ್ತಿದ್ದ ನನಗೆ ಈ ಮೊದಲು 2022ರಲ್ಲಿ ಮೊದಲ ಬಾರಿಗೆ ಇಂತಹ ನೋಟಿಸ್ ತೆರಿಗೆ ಇಲಾಖೆ ಜಾರಿ ಮಾಡಿತ್ತು. ಆ ಕಂಪನಿಗಳ ಜತೆಗೆ ನನಗೆ ಯಾವುದೇ ಸಂಬಂಧವಿಲ್ಲ ಎಂದು ನಾನು ಈಗಾಗಲೇ ತೆರಿಗೆ ಇಲಾಖೆಗೆ ವಿವರವಾಗಿ ಹೇಳಿದ್ದೇನೆ. ಆದರೂ ಮತ್ತೆ ಜು.10ರಂದು ನನ್ನ ಹೆಸರಿನಲ್ಲಿ 1,41,38,47,126 ಕೋಟಿ ರೂ. ಮಾರಾಟ ವರದಿಯಾಗಿದೆ ಎಂದು ತೆರಿಗೆ ಇಲಾಖೆ ನೋಟಿಸ್​​ ಜಾರಿ ಮಾಡಿದೆ ಎಂದು ಹೇಳಿದ್ದಾರೆ.

ಖುರ್ಜಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ನಡೆಯುತ್ತಿದೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.(ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net