ಗ್ರೆನೇಡ್ ದಾಳಿ: ಓರ್ವ ಪೊಲೀಸ್, ಇಬ್ಬರು ಸಿಆರ್​​ಪಿಎಫ್ ಯೋಧರಿಗೆ ಗಾಯ

gnrd
Published on

ಜಮ್ಮು-ಕಾಶ್ಮೀರ: ಉತ್ತರ ಕಾಶ್ಮೀರದ ಬರಾಮುಲ್ಲಾ ಜಿಲ್ಲೆಯಲ್ಲಿ ಗ್ರೆನೇಡ್ ದಾಳಿಯಾಗಿದ್ದು, ಇಬ್ಬರು ಸಿಆರ್​ಪಿಎಫ್​ ಯೋಧರು ಸೇರಿದಂತೆ ಓರ್ವ ಪೊಲೀಸ್​ ಗಾಯಗೊಂಡಿದ್ದಾರೆ.

ಗಾಯಗೊಂಡ ಮೂವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಜಮ್ಮು-ಕಾಶ್ಮೀರ ಪೊಲೀಸರು ಮಾಹಿತಿ ನೀಡಿದ್ದಾರೆ. ಈ ಬಾರಿಯ ಸ್ವಾತಂತ್ರ್ಯ ದಿನಾಚರಣೆ ಸಿದ್ದತೆ ಬಗ್ಗೆ ಜಮ್ಮು-ಕಾಶ್ಮೀರದ ಭದ್ರತಾ ಮುಖ್ಯಸ್ಥ ಅರುಣ್ ಕುಮಾರ್ ಮೆಹ್ತಾ ಇಂದು ಸಭೆ ನಡೆಸುತ್ತಿದ್ದುಮ ಇದರ ನಡುವೆ ಈ ಘಟನೆ ನಡೆದಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net