ಔಷಧೀಯ ಗುಣಗಳ ಗ್ರೀನ್ ಟೀ; ಏನಿದರ ಉಪಯೋಗ

ಗರೆಎನ
Published on

ಇತ್ತೀಚಿನ ವರ್ಷಗಳಲ್ಲಿ ದೇಹದ ತೂಕವನ್ನು ಇಳಿಸಿಕೊಳ್ಳುವ ಪ್ರಕ್ರಿಯೆ ಹೆಚ್ಚಿದೆ. ಈ ನಿಟ್ಟಿನಲ್ಲಿ ಗ್ರೀನ್ ಟೀ ಬಳಕೆಯೂ ಹೆಚ್ಚಿದೆ. ಈಗೀಗ ಕಾಫಿ, ಟೀಗಳಿಗಿಂತ ಗ್ರೀನ್ ಟೀ ಹೆಚ್ಚು ಜನಪ್ರಿಯ. ಇದು ಚಹಾದ ಒಂದು ಬಗೆಯೇ ಆಗಿದ್ದು, ಕ್ಯಾಮೆಲಿಯಾ ಸೈನೆನ್ಸಿಸ್ ಎಂಬ ಜಾತಿಯ ಎಲೆಗಳು ಹಾಗೂ ಮೊಗ್ಗುಗಳಿಂದ ತಯಾರಿಸುತ್ತಾರೆ.

ಇದನ್ನು ಪ್ರತಿದಿನ ಸೇವಿಸುವುದರಿಂದ ದೈಹಿಕ ಹಾಗೂ ಮಾನಸಿಕ ಆರೋಗ್ಯವನ್ನು ವೃದ್ಧಿಸಿಕೊಳ್ಳಬಹುದು. ಹಾಗೆಯೇ ಕಾಫಿ ಮತ್ತು ಚಹಾಗಳಲ್ಲಿರುವಂಥ ದುಷ್ಪರಿಣಾಮಕಾರಿ ಅಂಶಗಳು ಇದರಲ್ಲಿ ಕಡಿಮೆ. ಚಹಾ ಗಿಡದ ಹಸಿ ಎಲೆಗಳನ್ನು ತಂದು, ಹಸಿಯಾಗಿ ಬೇಯಿಸಿ ಒಣಗಿಸಿ, ಪುಡಿ ಮಾಡಲಾಗುತ್ತದೆ. ಈ ವಿಧಾನದಲ್ಲಿ ಬೇಯಿಸಿ ತಯಾರಿಸುವುದರಿಂದ ಅದರ ಪೋಷಕಾಂಶಗಳು ನಷ್ಟವಾಗದೆ ಹಾಗೆ ಉಳಿದುಕೊಳ್ಳುತ್ತವೆ. ಆಂಟಿ ಆಕ್ಸಿಡೆಂಟ್, ಅಮೈನೋ ಅಸಿಡ್, ಕಾಬೋಹೈಡ್ರೇಟ್ ಮತ್ತು ಲಿಪಿಡ್ ಅಂಶಗಳನ್ನು ಗ್ರೀನ್ ಟೀ ಹೊಂದಿದೆ. ಗ್ರೀನ್ ಟೀ ಸೇವನೆಯು ದೇಹದಲ್ಲಿ ಆಕ್ಸಿಡೇಷನ್ ಪ್ರಕ್ರಿಯೆಯನ್ನು ನಿಧಾನವಾಗಿಸುತ್ತದೆ. ಆರೋಗ್ಯಕ್ಕೆ ಪೂರಕವಾಗಿರುವ ಇದರಲ್ಲಿ ಪಾಲಿಫೆನಾಲ್​ಗಳಿಂದ ಕ್ಯಾನ್ಸರ್ ಬರುವ ಸಾಧ್ಯತೆಗಳನ್ನು ತಡೆಯಬಹುದು. ಮೊದಲು ನೀರನ್ನು ಚೆನ್ನಾಗಿ ಕುದಿಸಿದ ನಂತರ ಆ ಬಿಸಿನೀರಿಗೆ ಗ್ರೀನ್ ಟಿ ಎಲೆಗಳನ್ನು ಹಾಕಬೇಕು. ಆ ಎಲೆಗಳು ಅರಳುವವರೆಗೂ ಸ್ವಲ್ಪ ಹೊತ್ತು ಬಿಟ್ಟು, ತಿಳಿಹಸಿರು ಬಣ್ಣಕ್ಕೆ ತಿರುಗಿದ ನಂತರ ಬಿಸಿ ಇರುವಾಗಲೇ ಚಹದಂತೆ ಕುಡಿಯಬೇಕು.

ಸಕ್ಕರೆ ಸೇರಿಸದೆ ಕುಡಿದರೆ ಆರೋಗ್ಯಕ್ಕೆ ಒಳ್ಳೆಯದು. ನಿಂಬೆರಸ ಸೇರಿಸಿ ಗ್ರೀನ್ ಟೀ ಕುಡಿಯುವುದೂ ಆರೋಗ್ಯಕ್ಕೆ ಒಳ್ಳೆಯದು. ದೇಹವು ಗ್ರೀನ್ ಟೀಯ ಪೋಷಕಾಂಶಗಳನ್ನು ಹೀರಿಕೊಳ್ಳಲು ನಿಂಬೆಯು ಸಹಾಯ ಮಾಡುತ್ತದೆ. ಆದ್ದರಿಂದ ತಾಜಾ ನಿಂಬೆರಸ ಬೆರೆಸಿ ಗ್ರೀನ್ ಟೀ ಕುಡಿಯುವುದು ಒಳ್ಳೆಯದು.ರಕ್ತದಲ್ಲಿನ ಸಕ್ಕರೆಯ ಅಂಶವನ್ನು ನಿಯಂತ್ರಿಸಿ ರಕ್ತನಾಳಗಳಲ್ಲಿ ರಕ್ತ ಹೆಪ್ಪುಗಟ್ಟುವುದನ್ನು ಗ್ರೀನ್ ಟೀ ಸೇವನೆ ತಡೆಯುತ್ತದೆ. ಹೃದಯಾಘಾತವಾಗುವ ಸಂಭವವನ್ನೂ ಕಡಿಮೆ ಮಾಡುತ್ತದೆ. ್ಣಹಾರದ ಮೊದಲು ಗ್ರೀನ್ ಟೀ ಕುಡಿಯುವುದರಿಂದ, ದೇಹದಲ್ಲಿನ ಕೆಟ್ಟ ಕೊಬ್ಬನ್ನು ಹೊರಹಾಕಿ ದೇಹದ ತೂಕವನ್ನು ನಿಯಂತ್ರಿಸಬಹುದು.ರಕ್ತದಲ್ಲಿ ಸಕ್ಕರೆಯ ಪ್ರಮಾಣವನ್ನು ನಿಯಂತ್ರಿಸಲು ಮಧುಮೇಹಿಗಳು ಗ್ರೀನ್ ಟೀ ಕುಡಿಯುವುದು ಸಹಕಾರಿ. ಮದುಮೇಹವೂ ನಿಯಂತ್ರಣಕ್ಕೆ ಬರುತ್ತದೆ. ್ಣ್ರತಿನಿತ್ಯ ಗ್ರೀನ್ ಟೀ ಕುಡಿಯುವುದರಿಂದ ರೋಗನಿರೋಧಕ ಶಕ್ತಿ ಹೆಚ್ಚುತ್ತದೆ. ಅಲ್ಲದೆ ಇದು ಮುಖದ ಚರ್ಮ ಸುಕ್ಕುಗಟ್ಟುವುದನ್ನು ಕಡಿಮೆಗೊಳಿಸುತ್ತದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net