‘ಹಸಿರು ನೈರ್ಮಲ್ಯ ಶಾಲಾ ಅಭ್ಯುದಯ’ ಪ್ರಶಸ್ತಿ

18 LXR
Published on

ಲಕ್ಷ್ಮೇಶ್ವರ: ಪಟ್ಟಣದ ರಂಭಾಪುರಿ ನಗರದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ ಚಿಕ್ಕಬಳ್ಳಾಪುರದ ಶ್ರೀ ಸತ್ಯ ಸಾಯಿ ಅನ್ನಪೂರ್ಣಾ ಟ್ರಸ್ಟ್‌ನಿಂದ ನೊಡಮಾಡುವ ರಾಜ್ಯಮಟ್ಟದ ‘ಹಸಿರು ನೈರ್ಮಲ್ಯ ಶಾಲಾ ಅಭ್ಯುದಯ’ ಪ್ರಶಸ್ತಿಗೆ ಭಾಜನವಾಗಿದೆ. ಪ್ರಶಸ್ತಿ 10 ಸಾವಿರ ರೂ. ನಗದು ಹಾಗೂ ಪಾರಿತೋಷಕ ಒಳಗೊಂಡಿದ್ದು, ಪ್ರಶಸ್ತಿ ವಿತರಣೆ ಸಮಾರಂಭ ಜು.27ದಂದು ಜರುಗಲಿದೆ.
ರಂಭಾಪುರಿ ಶಾಲೆಯು 1 ಎಕರೆ ವಿಶಾಲವಾದ ಜಾಗವನ್ನು ಹೊಂದಿದ್ದು, ಅರಣ್ಯ ಇಲಾಖೆಯ ಸಹಕಾರದಲ್ಲಿ ನೂರಾರು ಸಸಿಗಳನ್ನು ನೆಡಲಾಗಿದ್ದು, ಅವುಗಳಿಂದ ಶಾಲೆಯ ಆವರಣ ಹಸಿರಿನಿಂದ ಕಂಗೊಳಿಸುತ್ತಿದೆ. ಈ ಶ್ರೇಯಸ್ಸಿಗೆ ಕಾರಣರಾದ ಮುಖ್ಯ ಶಿಕ್ಷಕಿಯರಾದ ಜೆ.ಎಫ್. ಹಬೀಬ್ ಮತ್ತು ಸಹ ಶಿಕ್ಷಕಿ ನಿರ್ಮಲಾ ಎನ್. ಮತ್ತು ಮಾರ್ಗದರ್ಶನ ನೀಡಿದ ಸಿಆರ್‌ಪಿ ಸತೀಶ ಬೊಮಲೆ ಅವರನ್ನು ಕ್ಷೇತ್ರ ಶಿಕ್ಷಣಾಧಿಕಾರಿ ಎಚ್.ಎನ್. ನಾಯಕ ಅಭಿನಂದಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net