ಉದ್ಯಮ ಆರಂಭಕ್ಕೆ ಹಸಿರು ಜಿಲ್ಲೆಗೆ ಸಿಗ್ನಲ್; ಕರೊನಾ ಸೋಂಕುಮುಕ್ತ ಪ್ರದೇಶಗಳಿಗೆ ಅನ್ವಯ

page 1 4
Published on

ಬೆಂಗಳೂರು: ರಾಜ್ಯದಲ್ಲಿ ಲಾಕ್​ಡೌನ್ ವಿನಾಯಿತಿ ಮುಂದುವರಿಸಿರುವ ಸರ್ಕಾರ ಹಸಿರು ವಲಯದ (ಕರೊನಾ ಸೋಂಕು ಮುಕ್ತ) 9 ಜಿಲ್ಲೆಗಳಲ್ಲಿ ಕೈಗಾರಿಕಾ ಚಟುವಟಿಕೆ ಆರಂಭಿಸುವುದಕ್ಕೆ ಹಸಿರು ನಿಶಾನೆ ತೋರಿದೆ. ನಿಯಂತ್ರಿತ (ಕಂಟೇನ್ಮೆಂಟ್) ವಲಯ ಹೊರತುಪಡಿಸಿ, ಕೇಂದ್ರದ ಕ್ರೋಡೀಕೃತ ಹಾಗೂ ಪರಿಷ್ಕೃತ ಮಾರ್ಗಸೂಚಿ ಪ್ರಕಾರ ವಿನಾಯಿತಿ ನೀಡಿ ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಟಿ.ಎಂ. ವಿಜಯಭಾಸ್ಕರ್ ಶುಕ್ರವಾರ ಆದೇಶ ಹೊರಡಿಸಿದ್ದಾರೆ. ಇದರನ್ವಯ 9 ಜಿಲ್ಲೆಗಳ ಗ್ರಾಮೀಣ ಪ್ರದೇಶದ ( ಜಿಲ್ಲಾ ಕೇಂದ್ರದ ಹೊರಗಿರುವ) ಉದ್ಯಮಗಳ ಕಾರ್ಯಾಚರಣೆಗೆ ಅನುಮತಿ ಸಿಕ್ಕಂತಾಗಿದೆ.

ಯಾವ್ಯಾವ ಜಿಲ್ಲೆಗಳು?

* ಚಾಮರಾಜನಗರ * ಕೋಲಾರ * ಹಾಸನ *ಚಿಕ್ಕಮಗಳೂರು * ಶಿವಮೊಗ್ಗ  * ಹಾವೇರಿ * ಕೊಪ್ಪಳ * ರಾಯಚೂರು * ಯಾದಗಿರಿ

ಏನು ಮಾಡಬೇಕು?: ಕೈಗಾರಿಕೆ, ಕಂಪನಿ ಮಾಲೀಕರು ಅಥವಾ ಮುಖ್ಯಸ್ಥರು ಕೈಗಾರಿಕೆ ಪ್ರಾರಂಭಕ್ಕೆ ಅನುಮತಿ ಕೋರಿ ನಿಗದಿತ ಅರ್ಜಿ ನಮೂನೆಯನ್ನು ಭರ್ತಿ ಮಾಡಿ ಕೈಗಾರಿಕಾ ಇಲಾಖೆ ಆಯುಕ್ತರು, ನಿರ್ದೇಶಕರು ಅಥವಾ ಸಂಬಂಧಿಸಿದ ಜಿಲ್ಲಾ ಕೈಗಾರಿಕಾ ಕೇಂದ್ರದ ಜಂಟಿ ನಿರ್ದೇಶಕರಿಗೆ ಸಲ್ಲಿಸಬೇಕು. ಜತೆಗೆ ಮುಂಜಾಗ್ರತಾ ಕ್ರಮಕೈಗೊಳ್ಳುವ ಬಗ್ಗೆ ಮುಚ್ಚಳಿಕೆ ಪತ್ರವನ್ನು ಬರೆದುಕೊಡಬೇಕು. ನಂತರ ಸಂಬಂಧಿಸಿದ ಅಧಿಕಾರಿ ಗೊತ್ತುಪಡಿಸಿದ ಅನುಬಂಧದಲ್ಲಿ ದೃಢೀಕರಣ ಪತ್ರ ನೀಡಿದ ಬಳಿಕ ಉದ್ಯಮ, ತಯಾರಿಕಾ ಘಟಕ ಕಾರ್ಯಾಚರಣೆಗೆ ಅವಕಾಶ ಲಭಿಸುತ್ತದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net