ಸ್ಮಶಾನ ಕಾರ್ಮಿಕರ ಕಾಯಂನಿಂದ ನೆಮ್ಮದಿ: ಬೊಮ್ಮಾಯಿ ಅಭಿಮತ

Bommai felicitated
Published on

ಬೆಂಗಳೂರು: ರಾಜ್ಯದ ಮುಖ್ಯಮಂತ್ರಿಯಾಗಿ ಹಲವಾರು ಜನಪರ ನಿರ್ಧಾರಗಳನ್ನು ಕೈಗೊಂಡಿರುವೆ, ಈ ಪೈಕಿ ಪೌರ, ಸ್ಮಶಾನ ಕಾರ್ಮಿಕರ ಕಾಯಂ ನಿರ್ಣಯವು ಖುಷಿ, ನೆಮ್ಮದಿ ನೀಡಿದೆ ಎಂದು ಮಾಜಿ ಸಿಎಂ, ಸಂಸದ ಬಸವರಾಜ ಬೊಮ್ಮಾಯಿ ಅಭಿಪ್ರಾಯಪಟ್ಟರು

ಆರ್.ಟಿ.ನಗರದ ತಮ್ಮ ನಿವಾಸದಲ್ಲಿ ಡಾ.ಬಿ.ಆರ್.ಅಂಬೇಡ್ಕರ್ ರುದ್ರಭೂಮಿ ಹಾಗೂ ವಿದ್ಯುತ್ ಚಿತಾಗಾರ ನೌಕರರ ಸಂಘದವರು ಭಾನುವಾರ ನೀಡಿದ ಸನ್ಮಾನವನ್ನು ಸ್ವೀಕರಿಸಿ ಅವರು ಮಾತನಾಡಿದರು.

ಕೆರೆ-ಕಟ್ಟೆ, ರಸ್ತೆ, ಸೇತುವೆ ಸೇರಿ ರಾಜ್ಯ ಕಟ್ಟುವಲ್ಲಿ ಹಲವಾರು ಆಡಳಿತಾತ್ಮಕ ನಿರ್ಣಯಗಳನ್ನು ತೆಗೆದುಕೊಂಡಿದ್ದೇನೆ. ಅದರಲ್ಲಿ ಯಾವುದೇ ಸರ್ಕಾರ ಗುರುತಿಸದ ವಿದ್ಯುತ್ ಚಿತಾಗಾರ, ಸ್ಮಶಾನ ಕಾರ್ಮಿಕರ ಪರಿಶ್ರಮ ಗಮನಿಸಿ ಸೇವೆ ಕಾಯಂ ಮಾಡಿ ಬ್ಯಾಂಕ್ ಖಾತೆಗೆ ಸಂಬಳ ಜಮಾ ಆಗುವಂತೆ ಮಾಡಿದ್ದೂ ಸೇರಿದೆ.

ಅಲ್ಲದೆ, ರಾಜ್ಯದಲ್ಲಿ 43 ಸಾವಿರ ಪೌರ ಕಾರ್ಮಿಕರನ್ನು ಕಾಯಂ ಮಾಡುವ ತೀರ್ಮಾನ ತೆಗೆದುಕೊಂಡು, 13 ಸಾವಿರ ಪೌರ ಕಾರ್ಮಿಕರಿಗೆ ಕಾಯಂ ಆದೇಶ ನೀಡಲಾಗಿದೆ. ದಶಕಗಳಷ್ಟು ಹಳೆಯ ಬೇಡಿಕೆಗಳನ್ನು ಈಡೇರಿಸಿದ ನಿರ್ಣಯ ಸಾರ್ಥಕತೆ ತಂದುಕೊಟ್ಟಿದೆ ಎಂದು ಬೊಮ್ಮಾಯಿ ತಮ್ಮ ಮನದ ಮಾತು ಹಂಚಿಕೊಂಡರು.

ಸ್ಮಶಾನ ನೌಕರರ ಸಂಘದ ಪ್ರಧಾನ ಕಾರ್ಯದರ್ಶಿ ಎ.ಸೌರಿ ರಾಜ, ಬಿಜೆಪಿ ಮುಖಂಡರಾದ ಜಗದೀಶ್ ಹಿರೇಮನಿ, ವಾದಿರಾಜ್ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net