

ವಿಶಾಖಪಟ್ಟಣಂ: ಇಂದು ಭಾರತೀಯ ಸಶಸ್ತ್ರಪಡೆಗಳು ಕರೊನಾ ವಾರಿಯರ್ಸ್ಗೆ ಹೂಮಳೆಗರೆದು ಗೌರವ ಸಲ್ಲಿಸಿವೆ.
ದೇಶದ ಎಲ್ಲೆಡೆ ಕರೊನಾ ವಿರುದ್ಧ ಹೋರಾಡುತ್ತಿರುವ ವೈದ್ಯಕೀಯ ಸಿಬ್ಬಂದಿ, ಪೊಲೀಸ್ ಸಿಬ್ಬಂದಿ ಸೇರಿ ಎಲ್ಲರಿಗೂ ಆಯಾ ಆಸ್ಪತ್ರೆಗಳ ಬಳಿ ತೆರಳಿದ ಮಿಲಿಟರಿ ಪಡೆಗಳು ಹೆಲಿಕಾಪ್ಟರ್ನಿಂದ ಹೂವುಗಳನ್ನು ಸುರಿದು, ಕೈಬೀಸಿ ವಿಶ್ ಮಾಡಿದ್ದಾವೆ.
ಇದನ್ನೂ ಓದಿ: ಕರೊನಾ ಯೋಧರಿಗೆ ಸೇನೆಯಿಂದ ಹೂಮಳೆಯ ಗೌರವ
ವಿಶಾಖಪಟ್ಟಣದ ಎದೆ ಮತ್ತು ಸಾಂಕ್ರಾಮಿಕ ರೋಗದ ಆಸ್ಪತ್ರೆಯಾಗಿರುವ ಗಿಐಟಿಎಎಂ ಆಸ್ಪತ್ರೆಯಲ್ಲಿ ಕರೊನಾಕ್ಕೆ ಚಿಕಿತ್ಸೆ ನೀಡುತ್ತಿರುವ ವೈದ್ಯರು, ಪ್ಯಾರಾಮೆಡಿಕಲ್ ಸಿಬ್ಬಂದಿ, ಸ್ವಚ್ಛತಾ ಸಿಬ್ಬಂದಿ, ಪೊಲೀಸರ ಮೇಲೆ ಭಾರತೀಯ ನೌಕಾ ಪಡೆ ಸೈನಿಕರು ಹೆಲಿಕಾಪ್ಟರ್ನಿಂದ ಹೂವುಗಳನ್ನು ಚೆಲ್ಲುವ ಮೂಲಕ ಗೌರವ ಸಲ್ಲಿಸಿದ್ದಾರೆ.
ಆಂಧ್ರಪ್ರದೇಶದ ಪೂರ್ವ ನೌಕಾ ಕಮಾಂಡ್ ಮುಖ್ಯಸ್ಥ ಕಮಾಂಡರ್ ಸಂಜಯ್ ಇಸ್ಸಾರ್ ನೇತೃತ್ವದಲ್ಲಿ ಎಲ್ಲ ಕರೊನಾ ವಾರಿಯರ್ಸ್ಗೆ ಸನ್ಮಾನ ಮಾಡಲಾಯಿತು.(ಏಜೆನ್ಸೀಸ್)