ಕೂಸ್ಗಲ್ ಶ್ರೀ ರಂಗನಾಥಸ್ವಾಮಿ ದೇಗುಲ ಜೀರ್ಣೋದ್ಧಾರಕ್ಕೆ ಅನುದಾನ

31 nrp 6
ಎನ್.ಆರ್.ಪುರದ ಕೂಸ್ಗಲ್ ರಂಗನಾಥಸ್ವಾಮಿ ದೇವಸ್ಥಾನದ ಜೀರ್ಣೋದ್ಧಾರಕ್ಕೆ ಧರ್ಮಸ್ಥಳದಿಂದ ನೀಡಿದ 3 ಲಕ್ಷದ ಡಿಡಿಯನ್ನು ಯೋಜನಾಧಿಕಾರಿ ಎಂ.ಆರ್.ನಿರಂಜನ್ ದೇವಸ್ಥಾನ ಆಡಳಿತ ಮಂಡಳಿಗೆ ಹಸ್ತಾಂತರಿಸಿದರು.
Published on

ಎನ್.ಆರ್.ಪುರ: ತಾಲೂಕಿನ ಹೊನ್ನೇಕುಡಿಗೆ ಗ್ರಾಪಂ ವ್ಯಾಪ್ತಿಯ ಸಾರ್ಯದ ಕೂಸ್ಗಲ್ ಶ್ರೀ ರಂಗನಾಥಸ್ವಾಮಿ ದೇವಾಲಯದ ಜೀರ್ಣೋದ್ಧಾರಕ್ಕಾಗಿ ಧರ್ಮಸ್ಥಳದಿಂದ ನೀಡಿದ 3 ಲಕ್ಷ ರೂ.ಡಿಡಿ ಯನ್ನು ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನಾಧಿಕಾರಿ ಎಂ.ಆರ್.ನಿರಂಜನ್ ದೇವಸ್ಥಾನದ ಆಡಳಿತ ಮಂಡಳಿಗೆ ಹಸ್ತಾಂತರಿಸಿದರು.
ಯೋಜನೆ ಮೇಲ್ವಿಚಾರಕ, ಎನ್.ಬಿ.ಸಿದ್ದಲಿಂಗಪ್ಪ, ಸೇವಾ ಪ್ರತಿನಿಧಿ ಸುನಿತಾ, ದೇವಸ್ಥಾನ ಆಡಳಿತ ಮಂಡಳಿ ಅಧ್ಯಕ್ಷ ಜೆ.ಇ.ದಯಾನಂದ್,ಕಾರ್ಯದರ್ಶಿ ಗುರುಮೂರ್ತಿ, ಸಹ ಕಾರ್ಯದರ್ಶಿ ನಾಗರಾಜ್, ಸುಬ್ಬಯ್ಯಗೌಡ, ಸದಸ್ಯರಾದ ಕೂಸ್ಗಲ್‌ಪುರುಷೋತ್ತಮ್, ಅನಿಲ್, ಶಿವಕುಮಾರ್, ಅರ್ಚಕ ಚಂದ್ರಶೇಖರ್, ರಮೇಶ್, ತಿಪ್ಪೇಶ್, ಪರಮೇಶ್ವರ್, ರತ್ನಾಕರ್, ಹೂವಣ್ಣ, ರವಿ, ರಾಜಪ್ಪ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net