

ಬಾಗೂರು : ಬಾಗೂರು ಹೋಬಳಿ ಕೇಂದ್ರದಲ್ಲಿ 2 ಕೋಟಿ ರೂ. ವೆಚ್ಚದಲ್ಲಿ ಪ್ರವಾಸಿ ಮಂದಿರ ಕಟ್ಟಡ ನಿರ್ಮಾಣಕ್ಕೆ ಸರ್ಕಾರದಿಂದ ಹಣ ಬಿಡುಗಡೆಯಾಗಿದೆ ಎಂದು ಶಾಸಕ ಸಿ.ಎನ್. ಬಾಲಕೃಷ್ಣ ತಿಳಿಸಿದರು.
ಬಾಗೂರು ಗ್ರಾಮದಲ್ಲಿ 1 ಕೋಟಿ 80 ಲಕ್ಷ ರೂ. ವೆಚ್ಚದ ನೂತನ ಪ್ರಾಥಮಿಕ ಆರೋಗ್ಯ ಕೇಂದ್ರದ ಕಟ್ಟಡ ಉದ್ಘಾಟಿಸಿ ಮಾತನಾಡಿದರು.
ಬಾಗೂರು ಪ್ರೌಢಶಾಲೆಗೆ ಎರಡು ಶಾಲಾ ಕೊಠಡಿ ನೀಡಿ ಆಂಗ್ಲ ಮಾಧ್ಯಮ ಶಿಕ್ಷಣಕ್ಕೆ ವ್ಯವಸ್ಥೆ ಕಲ್ಪಿಸಲಾಗಿದೆ, ಸುಸಜ್ಜಿತ ಹಾಸ್ಟೆಲ್, ಕೆರೆ ಹಿಂಭಾಗದ ಸಿಮೆಂಟ್ ರಸ್ತೆ ಮಾಡಿಸಲಾಗಿದೆ. ಶಿವರ ರಸ್ತೆ ಸೇತುವೆ ನಿರ್ಮಾಣಕ್ಕೆ ಕೋಟಿ ರೂ.ಹಣ ಬಿಡುಗಡೆಯಾಗಿದೆ, ಬಾಗೂರು ಅಕ್ಕನಹಳ್ಳಿ ಆಸ್ಪತ್ರೆಗಳನ್ನು ಮೇಲ್ದರ್ಜೆಗೆ ಏರಿಸಲು ಸರ್ಕಾರಕ್ಕೆ ಮನವಿ ಸಲ್ಲಿಸಲಾಗಿದೆ ಎಂದ ಅವರು, ಆಸ್ಪತ್ರೆಗೆ ಕಾಂಪೌಂಡ್, ಆಂಬುಲೆನ್ಸ್, ಕಂದಾಯ ನಿರೀಕ್ಷಕರ ಕೊಠಡಿ, ಸುಲಭ್ ಶೌಚಗೃಹ ನಿರ್ಮಾಣದ ಭರವಸೆ ನೀಡಿದರು.
ಸಮಾರಂಭದಲ್ಲಿ ತಾಲೂಕು ಆಡಳಿತ ಅಧಿಕಾರಿ ಡಾ.ಎನ್. ಕಿಶೋರ್ ಕುಮಾರ್, ಡಾ.ಬಿ.ವೈ. ವರದರಾಜ್, ಇಂಜಿನಿಯರ್ ರಶ್ಮಿ, ಗ್ರಾಮ ಪಂಚಾಯಿತಿ ಅಧ್ಯಕ್ಷ ದಾಸಾಪುರ ಕೆಂಪೇಗೌಡ, ಎಪಿಎಂಸಿ ಮಾಜಿ ಅಧ್ಯಕ್ಷರಾದ ಬಿ.ಎಚ್. ಶಿವಣ್ಣ , ಮಂಜುನಾಥ್, ಮುಖಂಡರಾದ ರಾಮಚಂದ್ರ, ಶಿವಶಂಕರ್ ಕುಂಟೆ, ಎನ್. ಬಸವರಾಜ್, ಹರೀಶ್, ಸ್ವಾಮಿ, ಬೈರೇಗೌಡ, ರಘು, ಚಂದ್ರೇಗೌಡ, ವೆಂಕಟೇಶ್, ಕಾಂತರಾಜ್, ಚಂದ್ರು, ಇತರರು ಹಾಜರಿದ್ದರು.