ಗ್ರಂಥ ಬಿಡುಗಡೆ, ಅಭಿನಂದನೆ ಸಮಾರಂಭ 28ಕ್ಕೆ

book
Published on


ಮೈಸೂರು:
ಕರ್ನಾಟಕ ರಾಜ್ಯ ಮುಕ್ತ ವಿವಿಯ ನಿವೃತ್ತ ಪ್ರಾಧ್ಯಾಪಕ ಡಾ.ಎ.ರಂಗಸ್ವಾಮಿ ಅವರ ಅಭಿನಂದನೆ ಸಮಾರಂಭ ಹಾಗೂ ಅಭಿವರ್ಧನ ಗ್ರಂಥ ಬಿಡುಗಡೆ ಕಾರ್ಯಕ್ರಮವನ್ನು ಜು.28 ರಂದು ಬೆಳಗ್ಗೆ 11 ಗಂಟೆಗೆ ಮಾನಸ ಗಂಗೋತ್ರಿಯ ರಾಣಿ ಬಹದ್ದೂರ್ ಸಭಾಂಗಣದಲ್ಲಿ ಆಯೋಜಿಸಲಾಗಿದೆ ಎಂದು ಗ್ರಂಥ ಸಮಿತಿಯ ಪ್ರಧಾನ ಸಂಪಾದಕ ಡಾ.ರಾಗೌ ತಿಳಿಸಿದರು.
ಮಾಜಿ ಶಾಸಕ ಎ.ಟಿ.ರಾಮಸ್ವಾಮಿ ಅಧ್ಯಕ್ಷತೆ ವಹಿಸುವರು. ಮಾಜಿ ಸಂಸದ ಪ್ರತಾಪ್‌ಸಿಂಹ ಅಭಿನಂದಿಸುವರು. ಡಾ.ಕೆ.ಸುಧಾರಾವ್ ಅಭಿನಂದನಾ ಕೃತಿ ಬಿಡುಗಡೆಗೊಳಿಸುವರು. ಪುಸ್ತಕ ಪ್ರಾಧಿಕಾರದ ಅಧ್ಯಕ್ಷ ಮಾನಸ ಭಾಗವಹಿಸಲಿದ್ದಾರೆ ಎಂದು ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು.
ಡಾ.ಎ.ರಂಗಸ್ವಾಮಿ ಅವರು ಮೂಲತಃ ಹಾಸನ ಜಿಲ್ಲೆಯ ಅರಕಲಗೂಡು ತಾಲೂಕಿನವರಾಗಿದ್ದು, ಮೈಸೂರು ವಿವಿಯಿಂದ ಕನ್ನಡ ಸಾಹಿತ್ಯದಲ್ಲಿ ಪಿಎಚ್.ಡಿ ಪದವಿ ಪಡೆದಿದ್ದಾರೆ. ಇವರು ವಿವಿಧ ಸಾಹಿತ್ಯ ಪ್ರಕಾರಗಳಲ್ಲಿ ನೂರಕ್ಕೂ ಹೆಚ್ಚು ಕೃತಿ ಪ್ರಕಟಿಸಿ, ಹಲವಾರು ಮೌಲ್ಯಯುತ ಸಾಹಿತ್ಯಿಕ ಕಾರ್ಯಕ್ರಮದ ಮೂಲಕ ವಿವಿಯ ಕನ್ನಡ ವಿಭಾಗಕ್ಕೊಂದು ಘನತೆ ತಂದುಕೊಟ್ಟಿದ್ದಾರೆ. ಹಲವಾರು ವಿದ್ಯಾರ್ಥಿಗಳಿಗೆ ಸಂಶೋಧನಾ ಮಾರ್ಗದರ್ಶಕರಾಗಿಯೂ ಕಾರ್ಯ ನಿರ್ವಹಿಸಿದ್ದಾರೆ. ಹೀಗಾಗಿ ಇವರ ಕೊಡುಗೆ ಪರಿಗಣಿಸಿ ಈ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದರು.
ಅಭಿನಂದನಾ ಸಮಿತಿಯ ಪ್ರೊ.ಜಯಪ್ರಕಾಶ್ ಗೌಡ, ಡಾ.ನೀ.ಗೂ.ರಮೇಶ್, ಎಚ್.ಟಿ.ನಾಗಪ್ಪ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net