ತೂಗು ಸೇತುವೆ ದುರಸ್ತಿಗೆ ಅನುದಾನ

tth (11)
ಶಾಸಕ ಆರಗ ಜ್ಞಾನೇಂದ್ರ ಭೀಮನಕಟ್ಟೆ ತೂಗು ಸೇತುವೆ ಪರಿಶೀಲನೆ ನಡೆಸಿದರು. ರೇಖಾ ದಿನೇಶ್, ಬಿ.ಆರ್.ಮೋಹನ್, ಕೇಶವ, ಅಭಿ, ಸಂತೋಷ್, ಕೃಷ್ಣಮೂರ್ತಿ ಇತರರಿದ್ದರು.
Published on

ತೀರ್ಥಹಳ್ಳಿ: ಮುಳುಬಾಗಿಲು ಗ್ರಾಪಂ ವ್ಯಾಪ್ತಿಯ ಭೀಮನಕಟ್ಟೆ ಬಳಿ ಮಾಲತಿ ನದಿಗೆ ಅಡ್ಡಲಾಗಿ ನಿರ್ಮಿಸಿರುವ ತೂಗು ಸೇತುವೆ ರಿಪೇರಿಗೆ ಸರ್ಕಾರ 60 ಲಕ್ಷ ರೂ. ಮಂಜೂರಾತಿ ನೀಡಿದ್ದು, ಮಳೆಗಾಲದ ಆರಂಭಕ್ಕೆ ಮುನ್ನ ಸೇತುವೆ ದುರಸ್ತಿ ಪಡಿಸಲಾಗುವುದು ಎಂದು ಶಾಸಕ ಆರಗ ಜ್ಞಾನೇಂದ್ರ ತಿಳಿಸಿದರು.

ಸ್ಥಳೀಯ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳೊಂದಿಗೆ ಮಂಗಳವಾರ ತೂಗು ಸೇತುವೆ ಪರಿಶೀಲನೆ ನಡೆಸಿದ ನಂತರ ಮಾತನಾಡಿ, 18 ವರ್ಷಗಳ ಹಿಂದೆ ನಿರ್ಮಾಣಗೊಂಡಿರುವ ಈ ಸೇತುವೆ ನಿರ್ವಹಣೆ ಕೊರತೆಯಿಂದಾಗಿ ಸೇತುವೆಗೆ ಅಳವಡಿಸಿರುವ ಹಲಗೆಗಳು ಒಡೆದು ಹೋಗಿದ್ದು ಅಪಾಯದ ಸ್ಥಿತಿಯಲ್ಲಿದೆ. ಈ ಸೇತುವೆ ನಿರ್ಮಾಣ ಮಾಡಿರುವ ತೂಗು ಸೇತುವೆ ತಜ್ಞ ಸುಳ್ಯದ ಪತಂಜಲಿ ಭಾರದ್ವಾಜ್ ಕುಟುಂಬದವರಿಂದಲೇ ಇದನ್ನು ದುರಸ್ತಿ ಮಾಡಲು ಕೋರಲಾಗಿದೆ ಎಂದರು.

ಮುಳುಬಾಗಿಲು ಗ್ರಾಪಂ ಅಧ್ಯಕ್ಷೆ ರೇಖಾ ದಿನೇಶ್, ಗ್ರಾಪಂ ಸದಸ್ಯರಾದ ಬಿ.ಆರ್.ಮೋಹನ್, ಕೇಶವ ಬಿಳುಕೊಪ್ಪ, ಅಭಿ ಬಾಳೆಕೊಪ್ಪ, ಸಂತೋಷ್, ಕೃಷ್ಣಮೂರ್ತಿ, ಲ್ಯಾಂಡ್ ಆರ್ಮಿ ಇಂಜಿನಿಯರ್ ಪ್ರಮೋದ್, ಸುನಿಲ್, ತೂಗು ಸೇತುವೆ ತಜ್ಞರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net