

ಬೀರೂರು: ಕಿತ್ತೂರು ರಾಣಿ ಕ್ರೀಡಾಂಗಣದಲ್ಲಿ ಸೋಮವಾರ ಪುರಸಭೆ ಮತ್ತು ಮಿತ್ರ ಸಮಾಜದ ಸಹಯೋಗದಲ್ಲಿ ಸತ್ಯಗಣಪತಿ ಪ್ರತಿಷ್ಠಾಪನೆ ನೆರವೇರಿಸಲಾಯಿತು.
ಸೋಮವಾರ ಸಂಜೆ ಪುರಸಭೆ ಸದಸ್ಯರು ಹಾಗೂ ಪೌರ ಕಾರ್ಮಿಕರ ಜತೆಗೂಡಿ ವಾದ್ಯಗೋಷ್ಠಿಯೊಂದಿಗೆ ಸಂಜೆ ಗಣಪತಿಯನ್ನು ಪ್ರತಿಷ್ಠಾಪಿಸಲಾಯಿತು. ವಿಜಯದಶಮಿಯ ರಾತ್ರಿ ಅದ್ದೂರಿ ಸಿಡಿಮದ್ದಿನ ಪ್ರದರ್ಶನದೊಂದಿಗೆ ವಿಸರ್ಜನೆ ಕಾರ್ಯಕ್ರಮ ನಡೆಯಲಿದೆ. ಪ್ರತಿದಿನ ಹರಿಕಥೆ, ಸಾಂಸ್ಕೃತಿಕ ಕಾರ್ಯಕ್ರಮ, ಗೀತಾಗಾಯನ, ನೃತ್ಯ, ರಸಮಂಜರಿ ಮೊದಲಾದ ಕಾರ್ಯಕ್ರಮಗಳು ನೆರವೇರಲಿವೆ. ಗಣಪತಿ ಹೋಮ, ಜೈನ್ ಸಮಾಜದಿಂದ ಅನ್ನಸಂತರ್ಪಣೆ ಮೊದಲಾದ ಕಾರ್ಯಕ್ರಮಗಳು ನಡೆಯಲಿದೆ.
ಪುರಸಭೆ ಮಾಜಿ ಅಧ್ಯಕ್ಷ ಎಂ.ಪಿ.ಸುದರ್ಶನ್, ಪಿಎಸ್‌ಐ ಸಜಿತ್ ಕುಮಾರ್, ಮಂಜುನಾಥ್, ಕುಮಾರಶಾಸಿ, ಸದಸ್ಯರಾದ ಲೋಕೇಶ್, ಬಿ.ಆರ್.ಮೋಹನ್‌ಕುಮಾರ್, ಎನ್.ಎಂ.ನಾಗರಾಜ್, ಮುಖಂಡರಾದ ಮಾರ್ಗದ ಮಧು, ರವಿ, ಬಿ.ಎಂ.ರುದ್ರಪ್ಪ, ಸಂತೋಷ್ ಕುಮಾರ್, ವಿನಾಯಕ್, ಸುಜಿತ್ ಮತ್ತು ಪುರಸಭೆ ಆರೋಗ್ಯ ನಿರೀಕ್ಷಕ ಲಕ್ಷ್ಮಣ್ ಇದ್ದರು.