

ಜೇವರ್ಗಿ: ಲಕ್ಷಾಂತರ ಭಕ್ತರ ಆರಾಧ್ಯ ದೈವ ಶ್ರೀ ಮಹಾಲಕ್ಷ್ಮೀ ದೇವಿ ರಥೋತ್ಸವ ಶನಿವಾರ ಅಪಾರ ಭಕ್ತರ ಜೈಘೋಷ ಮಧ್ಯೆ ಸಂಭ್ರಮದಿAದ ನೆರವೇರಿತು.
ಬಡಿಗೇರ ಮನೆಯಿಂದ ಅದ್ದೂರಿ ಮೆರವಣಿಗೆ ಮೂಲಕ ಶುಕ್ರವಾರ ನಸುಕಿನ ಜಾವ ದೇವಿ ಮೂರ್ತಿಯೂ ಶ್ರೀ ಮಹಾಲಕ್ಷಿö್ಮÃ ದೇವಸ್ಥಾನಕ್ಕೆ ಆಗಮಿಸಿದ್ದು, ಸಹಸ್ರಾರು ಜನರು ಬೆಳಗ್ಗೆಯಿಂದಲೇ ತಾಯಿಯ ದರ್ಶನ ಪಡೆದರು. ಪಟ್ಟಣ ಸೇರಿ ಸುತ್ತಮುತ್ತಲಿನ ಗ್ರಾಮಗಳ ಜನರು ನೈವೇದ್ಯ ಅರ್ಪಿಸಿದರು. ಮಹಿಳೆಯರು, ಮಕ್ಕಳು ದೀಡ್ ನಮಸ್ಕಾರ, ಉಡಿ ತುಂಬಿ ಹರಕೆ ತೀರಿಸಿದರು.
ದೇವಸ್ಥಾನಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಆಗಮಿಸುತ್ತಿರುವುದರಿಂದ ಪೊಲೀಸ್ ಇಲಾಖೆ ಸೂಕ್ತ ಕ್ರಮ ಕೈಗೊಂಡಿದೆ. ಅಖಂಡೇಶ್ವರ ಸರ್ಕಲ್‌ದಿಂದ ದೇವಸ್ಥಾನಕ್ಕೆ ತೆರಳುವ 1 ಕಿಮೀ ರಸ್ತೆಯಲ್ಲಿ ವಾಹನಗಳಿಗೆ ನಿಷೇಧ ಹೇರಲಾಗಿದೆ. ದರ್ಶನಕ್ಕೆ ಆಗಮಿಸಿದ ಭಕ್ತರಿಗಾಗಿ ಮಹಾಲಕ್ಷ್ಮೀ ಟ್ರಸ್ಟ್ ಕಮಿಟಿ, ವಿವಿಧ ಸಂಘಟನೆಗಳು ಹಾಗೂ ಉದ್ಯಮಿಗಳು ಅನ್ನಪ್ರಸಾದ, ಹಣ್ಣು ವಿತರಿಸಿದರು.
ಶನಿವಾರ ಬೆಳಗ್ಗೆ ದೇವಸ್ಥಾನದಲ್ಲಿ ದೇವಿಗೆ ವಿಶೇಷ ಪೂಜೆ, ಅರ್ಚನೆ, ಅಭಿಷೇಕ ಸೇರಿ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನೆರವೇರಿದವು. ಬಳಿಕ 10.30ರಿಂದ ರಥೋತ್ಸವ ಆರಂಭವಾಗಿ, ಪ್ರಮುಖ ಬೀದಿಗಳಲ್ಲಿ ಸಂಜೆ 4 ಗಂಟೆವರೆಗೂ ಉತ್ಸವ ನಡೆಯಿತು. ರಥ ಸಂಚರಿಸುವ ಮಾರ್ಗವನ್ನು ಸ್ವಚ್ಛಗೊಳಿಸಿದ್ದು, ಯಾವುದೇ ಅಹಿತಕರ ಘಟನೆಗಳು ಜರುಗದಂತೆ ಅಲ್ಲಲ್ಲಿ ಬ್ಯಾರಿಕೇಡ್ ಅಳವಡಿಸಲಾಗಿತ್ತು.