ಗ್ರಾಮೀಣ ಶಾಲೆ ಬಾಲಕಿಯರ ಸಬಲೀಕರಣಕ್ಕೆ ವಿನೂತನ ಹೆಜ್ಜ

Education program
Published on

ಬೆಂಗಳೂರು: ಸರ್ಕಾರಿ ಪಿಯು ಕಾಲೇಜು ವಿದ್ಯಾರ್ಥಿಗಳಿಗೆ ಸಿಇಟಿ, ನೀಟ್ ಮತ್ತು ಜೆಇಇ ಉಚಿತ ತರಬೇತಿಗೆ ಚಾಲನೆ ನೀಡಿದ ಸರ್ಕಾರ, ಗ್ರಾಮೀಣ ಬಾಲಕಿಯರ ಕೇಂದ್ರೀಕೃತ ಮತ್ತೊಂದು ವಿಶಿಷ್ಟ ಕಾರ್ಯಕ್ರಮ ಅನುಷ್ಠಾನಗೊಳಿಸಿದೆ.

ಸ್ವತಲೀಂ ೌಂಡೇಷನ್ ಸಹಭಾಗಿತ್ವದ ‘ಗೆಳತಿಯರೊಂದಿಗೆ ಹಾರೋಣ’ ಕಾರ್ಯಕ್ರಮಕ್ಕೆ ವಿಧಾನಸೌಧದಲ್ಲಿ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಸಚಿವ ಮಧು ಬಂಗಾರಪ್ಪ ಬುಧವಾರ ಚಾಲನೆ ನೀಡಿದರು.

ರಾಜ್ಯದ 27 ಜಿಲ್ಲೆಗಳ ಕಸ್ತೂರ್‌ಬಾ ಗಾಂಧಿ ವಸತಿಸಹಿತ ಮತ್ತು ವಸತಿರಹಿತ ವಿದ್ಯಾಲಯಗಳ ಬಾಲಕಿಯರ ಸಬಲೀಕರಣ, ಜೀವನಕೌಶಲ ರೂಢಿಸಿ ನಾಯಕತ್ವ ಬೆಳೆಸುವುದು ಈ ಕಾರ್ಯಕ್ರಮದ ಮುಖ್ಯ ಉದ್ದೇಶ.

ಗುರುತಿಸಿದ 27 ಜಿಲ್ಲೆಗಳ ಶೈಕ್ಷಣಿಕವಾಗಿ ಹಿಂದುಳಿದ ಬ್ಲಾಕ್‌ಗಳಲ್ಲಿ 10,300ಕ್ಕೂ ಹೆಚ್ಚು ಮಕ್ಕಳನ್ನು ಈ ಕಾರ್ಯಕ್ರಮ ತಲುಪಲಿದೆ. ಸ್ವಯಂ ಕಲಿಕೆ, ಮೂಲ ಅಗತ್ಯ ಕೌಶಲಗಳ ಅಭಿವೃದ್ಧಿ ಕಾರ್ಯಕ್ರಮದ ತಿರುಳಾಗಿದೆ.

ಶಿಕ್ಷಕರು, ವಾರ್ಡನ್, ಪೋಷಕರು ಮತ್ತು ಸಮುದಾಯ ನಾಯುಕರಂತಹ ಪ್ರಮುಖ ಪಾಲುದಾರರ ಸಹಭಾಗಿತ್ವದಲ್ಲಿ ಪೂರಕ ಪರಿಸರ ನಿರ್ಮಿಸುವ ಗುರಿ ಹೊಂದಿದೆ.

ಬಾಲ್ಯ ವಿವಾಹ ನಿಯಂತ್ರಣ

ಬಾಲಕಿಯರ ಶಿಕ್ಷಣಕ್ಕೆ ಪ್ರೋತ್ಸಾಹ, ಕಲಿಕಾ ದೌರ್ಬಲ್ಯಗಳಿಗೆ ಪರಿಹಾರ, ಸ್ವಂತ ವಿವೇಚನಾಶಕ್ತಿ ಬೆಳೆಸುವುದು, ಸ್ವಾವಲಂಬಿ- ಸ್ವಾಭಿಮಾನ ಜೀವನಕ್ಕೆ ಒತ್ತಾಸೆ, ಬಾಲ್ಯ ವಿವಾಹ ನಿಯಂತ್ರಣ ಸಾಧಿಸುವುದು ಕಾರ್ಯಕ್ರಮದ ಆಶಯವಾಗಿದೆ ಎಂದು ಮಧು ಬಂಗಾರಪ್ಪ ತಿಳಿಸಿದರು.

ಸ್ವತಾಲೀಂ ೌಂಡೇಷನ್‌ನ ರಾಜ್ಯ ಪ್ರತಿನಿಧಿ ರಘು ರಾಮಾನುಜಮ್ ಕಾರ್ಯಕ್ರಮದ ರೂಪರೇಷೆ, ಅನುಷ್ಠಾನಕ್ಕೆ ರಾಜ್ಯದಲ್ಲಿ ಮಾಡಿಕೊಂಡ ವ್ಯವಸ್ಥೆ, ಉದ್ದೇಶವನ್ನು ಹಂಚಿಕೊಂಡರು.

ಮುಖ್ಯಾಂಶಗಳು

- 14 ಸಾವಿರಕ್ಕೂ ಹೆಚ್ಚು ಇಂಗ್ಲಿಷ್ ಅಭ್ಯಾಸ ಪುಸ್ತಕಗಳು, ಜೀವನ ಕೌಶಲಗಳ ಕೈಪಿಡಿ ಜತೆಗೆ 135 ಬೋಧಕ ಕೈಪಿಡಿ ವಿತರಣೆ

- ಕೆಬಿಜಿವಿ, ಕೆಕೆಬಿಜಿವಿಗಳ 135 ವಾರ್ಡನ್‌ಗಳಿಗೆ ಸಂಪನ್ಮೂಲಗಳ ಪರಿಣಾಮಕಾರಿ ಬಳಕೆಗೆ ಸಾಮರ್ಥ್ಯ ತರಬೇತಿ ಕಾರ್ಯಾಗಾರ

- 4,500ಕ್ಕೂ ಹೆಚ್ಚು ಪೋಷಕರು ಅವರ ಮಕ್ಕಳ ವಿದ್ಯಾಭ್ಯಾಸದಲ್ಲಿ ತೊಡಗಿಸಿಕೊಳ್ಳಲು ಪ್ರತಿದಿನ ಬೆಳಗ್ಗೆ 7ರಿಂದ 8ರವರೆಗೆ ಪರಸ್ಪರ ಧ್ವನಿ ಪ್ರತಿಕ್ರಿಯಾ ವ್ಯವಸ್ಥೆ ಕರೆಗಳ ಮೂಲಕ ಸಂಪರ್ಕ.

- ಜಿಲ್ಲಾಧಿಕಾರಿಗಳು, ಮುಖ್ಯೋಪಾಧ್ಯಾರು, ವಾರ್ಡನ್, ಕುಟುಂಬಗಳು ಮತ್ತು ಯುವ ನಾಯಕಿಯರು ಮತ್ತಿತರ ಪಾಲುದಾರರ ಸಬಲೀಕರಣ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net