ವಿನಯ್​ ಹುಟ್ಟುಹಬ್ಬಕ್ಕೆ ಗ್ರಾಮಾಯಣ ತಂಡದಿಂದ ಟೀಸರ್​ ಉಡುಗೊರೆ

Gramayana Final
Published on

ವಿನಯ್ ರಾಜಕುಮಾರ್ ಅಭಿನಯದ ‘ಗ್ರಾಮಾಯಣ’ ಎಂಬ ಚಿತ್ರ, ಕಳೆದ ಒಂದೂವರೆ ವರ್ಷಗಳ ಹಿಂದೆ ಪ್ರಾರಂಭವಾಗಿತ್ತು. ಕಲಾವಿದರ ಸಂಘದ ಸಭಾಂಗಣದಲ್ಲಿ ನಡೆದ ಸಮಾರಂಭದಲ್ಲಿ ಸಮಾರಂಭದಲ್ಲಿ ಶಿವರಾಜಕುಮಾರ್, ಪುನೀತ್ ರಾಜಕುಮಾರ್ ಮತ್ತು ರಾಘವೇಂದ್ರ ರಾಜಕುಮಾರ್ ಬಿಡುಗಡೆ ಮಾಡಿದ್ದರು. ಆ ನಂತರ ಚಿತ್ರದ ಚಿತ್ರೀಕರಣ ಪ್ರಾರಂಭವಾಗಿದ್ದರೂ ಹೆಚ್ಚು ಸುದ್ದಿ ಇರಲಿಲ್ಲ.

ಇದೀಗ ಚಿತ್ರದ ಟೀಸರ್ ಗುರುವಾರ ಯೂಟ್ಯೂಬ್‌ನ ಪಿಆರ್‌ಕೆ ಆಡಿಯೋ ಚಾನಲ್‌ನಲ್ಲಿ ಬಿಡುಗಡೆಯಾಗಿದೆ. ಅದಕ್ಕೆ ಕಾರಣ, ಇಂದು ವಿನಯ್ ರಾಜಕುಮಾರ್ ಅವರ ಹುಟ್ಟುಹಬ್ಬ. ತಮ್ಮ ಚಿತ್ರದ ಹೀರೋನ ಹುಟ್ಟುಹಬ್ಬಕ್ಕೆ ಟೀಸರ್ ಉಡುಗೊರೆಯಾಗಿ ನೀಡಿದೆ ಚಿತ್ರತಂಡ.

‘ಗ್ರಾಮಾಯಣ’ ಎಂಬ ಹೆಸರೇ ಹೇಳುವಂತೆ, ಇದೊಂದು ಪಕ್ಕಾ ಗ್ರಾಮೀಣ ಚಿತ್ರವಾಗಿದ್ದು, ವಿನಯ್ ರಾಜಕುಮಾರ್ ಈ ಚಿತ್ರದಲ್ಲಿ ಹಳ್ಳಿಯ ಯುವಕನಾಗಿ ಕಾಣಿಸಿಕೊಂಡಿದ್ದಾರೆ. ಈ ಚಿತ್ರದಲ್ಲಿ ಅವರು ಸಖತ್ ರಗಡ್ ಲುಕ್‌ನಲ್ಲಿ ಕಾಣಿಸಿಕೊಂಡಿದ್ದು, ಈ ಪಾತ್ರಕ್ಕಾಗಿಯೇ ಗಡ್ಡ ಬಿಟ್ಟಿದ್ದಾರೆ.

‘ಗ್ರಾಮಾಯಣ’ ಚಿತ್ರದಲ್ಲಿ ವಿನಯ್ ರಾಜಕುಮಾರ್‌ಗೆ ನಾಯಕಿಯಾಗಿ ಅಮೃತಾ ಅಯ್ಯರ್, ಸಂಪತ್, ಅಪರ್ಣ, ಧರ್ಮಣ್ಣ ಮುಂತಾದವರು ನಟಿಸಿದ್ದಾರೆ. ಇನ್ನು ಚಿತ್ರಕ್ಕೆ ಕಥೆ, ಚಿತ್ರಕಥೆ ಮತ್ತು ಸಂಭಾಷಣೆ ಬರೆಯುವುದರ ಜತೆಗೆ ನಿರ್ದೇಶನವನ್ನೂ ಮಾಡಿದ್ದಾರೆ ದೇವನೂರು ಚಂದ್ರು. ಅಭಿಷೇಕ್ ಕಾಸರಗೋಡು ಛಾಯಾಗ್ರಹಣವಿರುವ ಈ ಚಿತ್ರಕ್ಕೆ, ಪೂರ್ಣಚಂದ್ರ ತೇಜಸ್ವಿ ಮ್ಯೂಸಿಕ್ ಕಂಪೋಸ್ ಮಾಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net