ಬೆಂಗಳೂರು: ‘ಅಂದೊಂದಿತ್ತು ಕಾಲ’ದ ಬಳಿಕ ವಿನಯ್ ರಾಜಕುಮಾರ್ ಅಭಿನಯಿಸುತ್ತಿರುವ ‘ಗ್ರಾಮಾಯಣ’ ಸದ್ಯ ರಿಲೀಸ್‌ಗೆ ಸಿದ್ಧವಾಗಿದೆ. ದೇವನೂರು ಚಂದ್ರು ನಿರ್ದೇಶನದ ಈ ಚಿತ್ರದ ರಿಲೀಸ್ ಡೇಟ್ ಇತ್ತೀಚೆಗಷ್ಟೆ ಅನೌನ್ಸ್ ಮಾಡಲಾಗಿದ್ದು, ಇದೇ ಜುಲೈ 3ಕ್ಕೆ ‘ಗ್ರಾಮಾಯಣ’ ತೆರೆ ಮೇಲೆ ಬರಲಿದೆ. ವಿನಯ್‌ಗೆ ಇಲ್ಲಿ ‘ಜೊತೆ ಜೊತೆಯಲಿ’ ಧಾರಾವಾಹಿ ಖ್ಯಾತಿಯ ಮೇಘಾ ಶೆಟ್ಟಿ ಜೋಡಿಯಾಗಿದ್ದಾರೆ. ರಿಲೀಸ್ ದಿನಾಂಕ ಸಮೀಪಿಸುತ್ತಿರುವಾಗಲೇ ಚಿತ್ರತಂಡ ಇತ್ತೀಚೆಗೆ ‘ಏನೇ ಹೇಳು ಕುಸುಮಾ’ ಶೀರ್ಷಿಕೆಯ ಸಾಂಗ್ ಬಿಡುಗಡೆ ಮಾಡಿದೆ. ಪ್ರಮೋದ್ ಮರವಂತೆ ರಚಿಸಿರುವ ಈ ಹಾಡಿಗೆ ಪೂರ್ಣಚಂದ್ರ ತೇಜಸ್ವಿ ಸಂಗೀತ ನೀಡಿದ್ದು, ನಿಹಾಲ್ ತಾವ್ರೋ, ಸಾಕ್ಷಿ ಕಲ್ಲೂರ್ ಧ್ವನಿಯಾಗಿದ್ದಾರೆ. ಗ್ರಾಮೀಣ ಹಿನ್ನೆಲೆಯಲ್ಲಿ ಸಾಗುವ ಈ ಹಾಡಿನಲ್ಲಿ ವಿನಯ್ ಹಾಗೂ ಮೇಘಾ ಶೆಟ್ಟಿ ಕಾಣಿಸಿಕೊಂಡಿದ್ದಾರೆ. ವಿನಯ್ ರಾಜಕುಮಾರ್, ‘ಕಲಾವಿದರ ಸಂಘದ ಆವರಣದಲ್ಲಿಯೇ ಈ ಚಿತ್ರಕ್ಕೆ ಚಾಲನೆ ದೊರೆಕಿತ್ತು. ಇದೀಗ ಇದೇ ಜಾಗದಲ್ಲಿ ಚಿತ್ರದ ಬಿಡುಗಡೆ ದಿನಾಂಕ ಕೂಡ ೋಷಣೆಯಾಗಿದೆ. ಇದು ನನ್ನ ಒಂಬತ್ತನೇ ಚಿತ್ರ. ಸಿನಿಮಾದ ಎಲ್ಲ ಹಾಡುಗಳು ಚೆನ್ನಾಗಿವೆ’ ಎಂದು ಖುಷಿ ಹಂಚಿಕೊಂಡರು. ಉಳಿದಂತೆ ಅಚ್ಯುತ್ ಕುಮಾರ್, ಗೋಪಾಲಕೃಷ್ಣ ದೇಶಪಾಂಡೆ, ಅರುಣ್ ಸಾಗರ್, ಬಲ ರಾಜವಾಡಿ, ಅಪರ್ಣಾ ವಸ್ತಾರೆ, ಸೀತಾ ಕೋಟೆ ಕಲಾಬಳಗದಲ್ಲಿದ್ದಾರೆ. ಲೂಸ್ ಮಾದ ಯೋಗಿ ವಿಶೇಷ ಪಾತ್ರದಲ್ಲಿದ್ದಾರೆ. ಸಂತೋಷ್ ರೈ ಪಾತಾಜೆ ಕ್ಯಾಮರಾ ಚಿತ್ರಕ್ಕಿದೆ.