ತಾತ್ಕಾಲಿಕ ಹೋಟೆಲ್ ನಿರ್ಮಾಣಕ್ಕೆ ಗ್ರಾಪಂ ತಡೆ

D.16-MDG-1P1
ಮೂಡಿಗೆರೆ ತಾಲೂಕಿನ ಹೆಸಗಲ್ ಗ್ರಾ.ಪಂ. ಎದುರು ಬಿಳಗುಳ ನಿವಾಸಿಯಾದ ಯಾಕೂಬ್ ಕುಟುಂಬ ಉಪವಾಸ ಸತ್ಯಾಗ್ರಹ ನಡೆಸಿದರು.
Published on

ಮೂಡಿಗೆರೆ: ತಾತ್ಕಾಲಿಕ ಹೋಟೆಲ್ ನಿರ್ಮಾಣಕ್ಕೆ ವಿರೋಧ ವ್ಯಕ್ತಪಡಿಸುತ್ತಿರುವ ಹೆಸಗಲ್ ಗ್ರಾಪಂ ಅಧಿಕಾರಿಗ ನಡೆ ಖಂಡಿಸಿ ಬಿಳಗುಳ ಗ್ರಾಮದ ಯಾಕೂಬ್ ಕುಟುಂಬ ಶನಿವಾರ ಹೆಸಗಲ್ ಗ್ರಾಪಂ ಎದುರು ಉಪವಾಸ ಸತ್ಯಾಗ್ರಹ ಆರಂಭಿಸಿದೆ.
ಹೆಸಗಲ್ ಗ್ರಾಪಂ ವ್ಯಾಪ್ತಿಯ ಬಿಳಗುಳ ಕೆ.ಎಂ.ರಸ್ತೆ ರಾಷ್ಟ್ರೀಯ ಹೆದ್ದಾರಿ ಬದಿಯಲ್ಲಿ ನಮ್ಮ ಅನುಭವದಲ್ಲಿರುವ ಜಾಗದಲ್ಲಿ 50 ವರ್ಷದಿಂದ ತನ್ನ ಕುಟುಂಬದೊಂದಿಗೆ ಜೀವನ ನಡೆಸುತ್ತಿದ್ದು, ಜೀವನೋಪಾಯಕ್ಕೆ ಹತ್ತಾರು ವರ್ಷದಿಂದ ಹೊಟೇಲ್ ನಡೆಸಲಾಗುತ್ತಿದೆ. ಆದರೆ ಇದಕ್ಕೆ ತಾತ್ಕಾಲಿಕ ವಿದ್ಯುತ್ ಸಂಪರ್ಕ ನೀಡಲು ಗ್ರಾಪಂ ಅನುಮತಿ ಪತ್ರ ನೀಡಲು ಸತಾಯಿಸುತ್ತಿದೆ ಎಂದು ಯಾಕೂಬ್ ದೂರಿದರು.
ಕೆ.ಎಂ.ರಸ್ತೆ ಬದಿಯಲ್ಲಿ ನೂರಾರು ಅಂಗಡಿಗಳನ್ನು ತಾತ್ಕಾಲಿಕವಾಗಿ ತೆರೆಯಲಾಗಿದ್ದು, ಆವುಗಳ ವಿದ್ಯುತ್ ಸಂಪರ್ಕಕ್ಕೆ ಗ್ರಾಪಂ ಅನುಮತಿ ನೀಡಿದೆ. ಆದರೆ ನನಗೆ ಮಾತ್ರ ಅನುಮತಿ ನೀಡದೆ ಅಕ್ರಮವಾಗಿ ಹೊಟೇಲ್ ನಿರ್ಮಾಣ ಮಾಡಲಾಗಿದೆ ಎಂದು ನೋಟಿಸ್ ನೀಡಿದ್ದಾರೆ. ನಿಯಮದ ಪ್ರಕಾರ ರಾಷ್ಟ್ರೀಯ ಹೆದ್ದಾರಿ ಬದಿಯಲ್ಲಿ ಯಾವುದೇ ಅಂಗಡಿ ತೆರೆಯುವಂತಿಲ್ಲ ಆದರೂ ನೂರಾರು ಅಂಗಡಿಗಳನ್ನು ತೆರೆಯಗಾಗಿದೆ. ಇದಕ್ಕೆ ಹೇಗೆ ಗ್ರಾಪಂ ಅನುಮತಿ ಪತ್ರ ನೀಡಲಾಗಿದೆ ಎಂದು ಪ್ರಶ್ನಿಸಿದರು. ತಾತ್ಕಾಲಿಕ ಹೋಟೆಲ್ ನಿರ್ಮಾಣಕ್ಕೆ ಅವಕಾಶ ನೀಡದಿದ್ದರೆ ಉಪವಾಸ ಸತ್ಯಾಗ್ರಹ ಮುಂದುವರಿಸಲಾಗುವುದು ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net